ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಭಾರತದ ಸೈನ್ಯ ಮತ್ತು ಸೈನಿಕರ ಪರಾಕ್ರಮಕ್ಕಿಂತ ಚೀನಾ ಮೇಲಿನ ನಂಬಿಕೆಯೇ ಹೆಚ್ಚು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಥುರಾ (ಫೆ.06): ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಭಾರತದ ಸೈನ್ಯ ಮತ್ತು ಸೈನಿಕರ ಪರಾಕ್ರಮಕ್ಕಿಂತ ಚೀನಾ ಮೇಲಿನ ನಂಬಿಕೆಯೇ ಹೆಚ್ಚು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಪಶ್ಚಿಮ ವ್ಯಾಪ್ತಿಗೆ ಬರುವ ಮಥುರಾದಲ್ಲಿ ಶನಿವಾರ ಬಿಜೆಪಿ (BJP) ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ ರಾಜನಾಥ್ ಅವರು, ಭಾರತ ಈಗ ದುರ್ಬಲ ರಾಷ್ಟ್ರವಲ್ಲ. ನಮಗೂ ಗಡಿ ದಾಟಿ ಬಂದು ದಾಳಿ ಎಸಗುವ ಸಾಮರ್ಥ್ಯವಿದೆ ಎಂಬ ಸಂದೇಶವನ್ನು ನಾವು ಈಗಾಗಲೇ ವಿಶ್ವಕ್ಕೆ ರವಾನಿಸಿದ್ದೇವೆ. ಗಲ್ವಾನ್ ಗಡಿಯಲ್ಲಿ ಚೀನಾ ಮತ್ತು ಭಾರತೀಯ ಯೋಧರ ನಡೆದ ಗುದ್ದಾಟದಲ್ಲಿ ಹಲವು ಭಾರತೀಯ ಯೋಧರು ಮತ್ತು ಕೆಲ ಚೀನೀ ಯೋಧರು ಮಡಿದಿದ್ದಾರೆ ಎಂದು ಹೇಳುತ್ತಾರೆ.
ಈ ಗುದ್ದಾಟದಲ್ಲಿ ಚೀನಾದ 38-50 ಯೋಧರು ಬಲಿಯಾಗಿದ್ದಾರೆ ಎಂದು ಆಸ್ಪ್ರೇಲಿಯಾದ ಮಾಧ್ಯಮವೇ ಹೇಳುತ್ತದೆ. ಆದರೆ ರಾಹುಲ್ ಅವರು ಚೀನಾದ ಮಾಧ್ಯಮ ವರದಿಯನ್ನು ಮಾತ್ರವೇ ನಂಬುತ್ತಾರೆ ಎಂದು ರಾಹುಲ್ ಬಗ್ಗೆ ವ್ಯಂಗ್ಯವಾಡಿದರು. ಅಲ್ಲದೆ ಭಾರತದ ಘನತೆ ಮೇಲೆ ಯಾರೂ ದಾಳಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು.
ಚೀನಾ ಸೇತುವೆ ಮೋದಿಯಿಂದ ಉದ್ಘಾಟನೆ: Rahul Gandhi ವ್ಯಂಗ್ಯ
ರಾಹುಲ್ ಗಾಂಧಿಗೆ ರಾಜಕೀಯ ಬುದ್ಧಿ ಶಕ್ತಿ ಇಲ್ಲ: ಕಾಂಗ್ರೆಸ್ (Congress) ಪಕ್ಷ ತೊರೆಯುವ ತಮ್ಮ ನಿರ್ಧಾರವನ್ನು ಗಟ್ಟಿಗೊಳಿಸಿರುವ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ (CM Ibrahiim) ಸದ್ಯದಲ್ಲೇ ದಾವಣಗೆರೆಯಲ್ಲಿ ಜೆಡಿಎಸ್(JDS) ಪಕ್ಷ ಸೇರ್ಪಡೆಯಾಗುತ್ತೇನೆ ಎಂದು ಘೋಷಿಸಿದ್ದಾರೆ. ಇದೇ ವೇಳೆ ಬಿಜೆಪಿಯಿಂದ ಬಿ.ಎಸ್. ಯಡಿಯೂರಪ್ಪ ಹಾಗೂ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಹೊರಬರಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ರಾಜಕೀಯ ಬುದ್ಧಿ ಶಕ್ತಿ ಇಲ್ಲ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗುವ ಮೊದಲು ಯಾರು ಅವರು ಯಾರು ಎಂಬುದೇ ರಾಹುಲ್ ಗಾಂಧಿಗೆ ಗೊತ್ತಿರಲಿಲ್ಲ. ದಿನೇಶ್ ಗುಂಡೂರಾವ್ ಯಾರು ಎಂದು ರಾಹುಲ್ ಗಾಂಧಿ ನನ್ನನ್ನೇ ಕೇಳಿದ್ದರು. ಅವರಿಗೆ ಅವರ ತಂದೆ ರಾಜೀವ್ ಗಾಂಧಿಯಷ್ಟು ಚಾಣಾಕ್ಷತೆಯಿಲ್ಲ. ಇನ್ನು ಕಾಂಗ್ರೆಸ್ ನಾಯಕರು ಯಾರೂ ನನ್ನ ಸಂಪರ್ಕ ಮಾಡಿಲ್ಲ. ಹೀಗಾಗಿ ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದರು.
ನಾನು ಜೆಡಿಎಸ್ ಪಕ್ಷ ಸೇರಲು ನಿರ್ಧರಿಸಿದ್ದೇನೆ. ಸಮಯವನ್ನು ಆದಷ್ಟು ಶೀಘ್ರವಾಗಿ ಘೋಷಿಸುತ್ತೇನೆ. ಆದರೆ ಪರ್ಯಾಯ ರಂಗದ ನಾಯಕತ್ವವನ್ನು ನಾನು ವಹಿಸುವುದಿಲ್ಲ. ನಾನು ಈ ನಿಟ್ಟಿನಲ್ಲಿ ಒಬ್ಬ ಕೆಲಸಗಾರ ಮಾತ್ರ. ಜೆಡಿಎಸ್ ಮುಂದಿನ ಬಾರಿಗೆ ಅಧಿಕಾರಕ್ಕೆ ಬರಲಿದೆ. ಕುಮಾರಸ್ವಾಮಿ ಹಣೆಬರಹದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಬರೆದಿದ್ದರೆ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
ಕೇಂದ್ರ ಸರ್ಕಾರದ ಒತ್ತಡದಿಂದ ತಮ್ಮ ಟ್ವೀಟರ್ ಫಾಲೊವರ್ಸ್ ಸಂಖ್ಯೆ ಕುಸಿತ: ರಾಹುಲ್ ಗಾಂಧಿ ಆರೋಪ!
ಇನ್ನು ಒಂದು ವರ್ಷಕ್ಕೆ ಕಾಂಗ್ರೆಸ್‌ನವರೇ ನಮ್ಮ (ಜೆಡಿಎಸ್) ಬಳಿಗೆ ನಿಮ್ಮ ಸಹಾಯ ಬೇಕು ಎಂದು ಬರುತ್ತಾರೆ ಎಂದು ಭವಿಷ್ಯ ನುಡಿದರು. ಎಚ್.ಡಿ. ದೇವೇಗೌಡರ ಬುದ್ಧಿವಂತಿಕೆ ಏನೆಂದರೆ ಅವರು ನೀರಿಗಾಗಿ ಅಣೆಕಟ್ಟು ನಿರ್ಮಿಸಲು ಹೋಗಲ್ಲ. ಸೋರುವ ನೀರಿಗೆ ಬಕೆಟ್ ಹಿಡಿಯುತ್ತಾರೆ. ಆ ನೀರಿನಲ್ಲೇ ಕೊಡ ತುಂಬಿಸಿಕೊಳ್ಳುತ್ತಾರೆ ಎಂದು ಜೆಡಿಎಸ್ ಪಕ್ಷ ಕಟ್ಟುವ ರೀತಿಯ ಬಗ್ಗೆ ಹೇಳಿದರು.
