Inflation ಕಾಂಗ್ರೆಸ್‌ಗೆ ಮುಳುವಾಯ್ತು ನೆಹರು, ಚಿದಂಬರಂ ಹಣದುಬ್ಬರ ನೀತಿ, ಮೋದಿ ಮಾತಿಗೆ ಕಾಂಗ್ರೆಸ್ ಸೈಲೆಂಟ್!

  • ಹಣದುಬ್ಬರ ಆಪಾದನೆಗಳಿಗೆ ಮೋದಿ ತಕ್ಕ ಉತ್ತರ
  • ಲೋಕಸಭೆಯಲ್ಲಿ ಮೋದಿ ಮಾತಿಗೆ ಕಾಂಗ್ರೆಸ್ ಗಪ್ ಚುಪ್
  • ನೆಹರೂ, ಪಿ ಚಿದಂಬರಂ ಹೇಳಿಕೆ ಉಲ್ಲೇಖಿಸಿ ಮೋದಿ ತಿರುಗೇಟು
PM Modi invokes Jawaharlal Nehru counter Opposition allegation on inflation ckm

ನವದೆಹಲಿ(ಫೆ.07): ಹಣದುಬ್ಬರ(Inflation) ವಿಚಾರ ಮುಂದಿಟ್ಟು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ತಿರುಗೇಟು ನೀಡಿದ್ದಾರೆ. ಸರ್ಕಾರ ಆರ್ಥಿಕತೆಯಿಂದ ನುಣುಚಿಕೊಳ್ಳುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಮೋದಿ ತಕ್ಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಕಾಲಕ್ಕೆ ತಕ್ಕಂತೆ ಕೋಲ ಕಟ್ಟುವ ನೀತಿಯನ್ನು ಬಿಚ್ಚಿಟ್ಟಿದ್ದಾರೆ. ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು(Jawaharlal Nehru) ಹಣದುಬ್ಬರಕ್ಕೆ ಕೊರಿಯಾ ಯುದ್ಧವನ್ನು ನೆಪವಾಗಿಟ್ಟಿದ್ದರು, ಇದೀಗ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಕೊರೋನಾ ಕಾರಣ ಹೇಳುತ್ತಿದ್ದರು ಎಂದು ಮೋದಿ ತಿರುಗೇಟು ನೀಡಿದ್ದಾರೆ.

ಲೋಕಸಭೆಯಲ್ಲಿ ಪ್ರಧಾನಿ ಮೋದಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯ ಪ್ರಶ್ನೋತ್ತರ ವೇಳೆ ಮೋದಿ ಕಾಂಗ್ರೆಸ್ ವಿರುದ್ಧ ದಾಖಲೆ ಸಮೇತೆ ಉತ್ತರ ನೀಡಿದ್ದಾರೆ. ಈ ವೇಳೆ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರನ್ನು ಹೆಸರನ್ನು ಉಲ್ಲೇಖಿಸುವಂತೆ ಕಾಂಗ್ರೆಸ್(Congress) ಮಾಡಿದೆ. ಹೀಗಾಗಿ ಅನಿವಾರ್ಯವಾಗಿ ನೆಹರೂ ಮಾತುಗಳನ್ನು ಉಲ್ಲೇಖಿಸುತ್ತೇನೆ ಎಂದು ಮೋದಿ, ಕಾಂಗ್ರೆಸ್ ಒಡೆದು ಒಳುವ ನೀತಿಯನ್ನು ತೆರೆದಿಟ್ಟಿದ್ದಾರೆ.

Global Leader Approval: ಬಿಡೆನ್, ಜಾನ್ಸನ್‌ರನ್ನೇ ಹಿಂದಿಕ್ಕಿ ಸತತ ಮೂರನೇ ವರ್ಷ ಮೋದಿ ವಿಶ್ವದ ನಂ.1 ನಾಯಕ!

ಸಾಮಾನ್ಯವಾಗಿ ನೆಹರು ಹೆಸರನ್ನು ಕಾಂಗ್ರೆಸ್ ಹೇಳಿದ ಕಾರಣಕ್ಕೆ ಅಥವಾ ಉಲ್ಲೇಖಿಸಿದ ಕಾರಣಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ಇಂದು ಮಾತನಾಡಬೇಕಿದೆ. ನೆಹರೂ ಕಂಪು ಕೋಟೆ ಮೇಲೆ ಕೊರಿಯಾ ನಡುವಿನ ಯುದ್ಧದ(War) ಪರಿಣಾಮ ಸರಕುಗಳ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ದೇಶದಲ್ಲಿ ಹಣದುಬ್ಬರಕ್ಕೆ ಕಾರಣವಾಗಿದೆ ಎಂದಿದ್ದರು. ದೇಶದ ಮೊದಲ ಪ್ರಧಾನಿ ಕೊರಿಯಾ ಮೇಲಿನ ಯುದ್ಧದಿಂದ ಭಾರತದಲ್ಲಿ ಹಣದುಬ್ಬರ ನಿಯಂತ್ರಿಸಲು ಅಸಾಹಾಯಕಾರಿದ್ದರು. ಆದರೆ ಸಮಸ್ಯೆ ಗಂಭೀರವಾಗಿದೆ ಎಂದಿದ್ದರು. 

"

ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಕೊರೋನಾ(Coronavirus) ಕಾರಣದಿಂದ ಹಣದುಬ್ಬರವಾಗಿದೆ ಎಂದು ದೂಷಿಸುತ್ತಿದ್ದರು. ಆದರೆ ನಾವು ಆರೋಪ, ಅಪಾದನೆಯನ್ನು ಇನ್ಯಾರ ಹೆಗಲಿಗೆ ಹೊರಿಸುತ್ತಿಲ್ಲ. ಇದರ ಬದಲಾಗಿ ದೇಶದಲ್ಲಿ ಹಣದುಬ್ಬರ ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಪರಿಸ್ತಿತಿ ಕೈಮೀರಿ ಹೋಗದಂತೆ ನೋಡಿಕೊಳ್ಳಲಾಗಿದೆ. ಅಮೆರಿಕದಲ್ಲಿ ಹಣದುಬ್ಬರ ಶೇಕಡಾ 7 ರಷ್ಟಿದೆ. ಕೊರೋನಾ ನಡುವೆಯೂ ಭಾರತದ ಹಣದುಬ್ಬರ ನಿಯಂತ್ರಣ ಮೀರಿ ಹೋಗದಂತೆ ನೋಡಿಕೊಳ್ಳಲಾಗಿದೆ. ಭಾರತದ ಆಹಾರ ಹಣದುಬ್ಬರ ಶೇಕಡಾ 5ಕ್ಕಿಂತ ಕಡಿಮೆಯಾಗಿದೆ ಎಂದು ಮೋದಿ ಲೋಕಸಭೆಯಲ್ಲಿ ಕಾಂಗ್ರೆಸ್ ಆರೋಪಗಳಿಗೆ ಉತ್ತರಿಸಿದ್ದಾರೆ. 

ಕಾಂಗ್ರೆಸ್ ಸಂಸದ ಪಿ.ಚಿದಂಬರಂ ವಿರುದ್ಧ ವಾಗ್ದಾಳಿ ನಡೆಸಿ, ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ ಸರ್ಕಾರದಲ್ಲಿ ಅವರು ದೇಶದ ಹಣಕಾಸು ಸಚಿವರಾಗಿದ್ದಾಗ ಪರಿಸ್ಥಿತಿಯನ್ನು ನೆನಪಿಸಿದ ಬೆನ್ನಲ್ಲೇ ಪ್ರಧಾನಿಯವರ ಈ ಮಾತುಗಳು ಹೊರಬಿದ್ದಿವೆ.

Pak-China Remark: ರಾಹುಲ್ ಗಾಂಧಿ ಹೇಳಿಕೆಗೆ ನಮ್ಮ ಬೆಂಬಲವಿಲ್ಲ ಎಂದ ಅಮೆರಿಕ!

ನೆಹರೂ ಮಾತುಗಳನ್ನ ಉಲ್ಲೇಖಿಸಿದ ಬಳಿಕ ಪ್ರಧಾನಿ ಮೋದಿ ನೇರವಾಗಿ 2011ರಲ್ಲಿ ಯುಪಿಎ ಸರ್ಕಾರದ ಹಣಕಾಸು ಸಚಿವ ಪಿ ಚಿದಂಬರಂ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. 2011ರಲ್ಲಿ ಎದುರಾದ ಹಣದುಬ್ಬರ ನಿಯಂತ್ರಿಸಲು ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ ಎಂದು ಪಿ ಚಿದಂಬರಂ ನಾಚಿಕೆಯಿಲ್ಲದೆ ಹೇಳಿದ್ದೀರಿ. ಇದೇ ಭಾಷಣದಲ್ಲಿ ಚಿದಂಬರಂ ಜನರು 15 ರೂಪಾಯಿ ನೀಡಿ ಮಿನರಲ್ ವಾಟರ್ ಖರೀದಿಸಲು ಸಾಧ್ಯವಿದೆ. ಆದರೆ ಗೋಧಿ ಸೇರಿದಂತೆ ಆಹಾರದಲ್ಲಿ 1 ರೂಪಾಯಿ ಹೆಚ್ಚಾದರೆ ಜನರಿಗೆ ಸಮಸ್ಯೆಯಾಗುತ್ತದೆ ಎಂದು ಚಿದಂಬರಂ ಹೇಳಿಕೆಯನ್ನು ಮೋದಿ ಉಲ್ಲೇಖಿಸಿದ್ದಾರೆ..

ಪ್ರಧಾನಿ ಮೋದಿ ಮಾತಿಗೆ ಕಾಂಗ್ರೆಸ್ ಬಳಿ ಉತ್ತರವೇ ಇರಲಿಲ್ಲ. ಕಾರಣ ಜವಾಹರ್‌ಲಾಲ್ ನೆಹರೂ ಹಾಗೂ ಪಿ ಚಿದಂಬರಂ ಹೇಳಿಕೆಗಳೇ ಕಾಂಗ್ರೆಸ್‌ಗೆ ಮುಳುವಾಗಿದೆ. ಲೋಕಸಭೆಯಲ್ಲಿ ಪ್ರಧಾನಿ ಆಡಿದ ಒಂದೊಂದು ಮಾತುಗಳು ಇದೀಗ ವೈರಲ್ ಆಗಿದೆ.

Latest Videos
Follow Us:
Download App:
  • android
  • ios