Asianet Suvarna News Asianet Suvarna News

ದೇಶಭಕ್ತಿ ಗೀತೆ ಹಾಡಿದ ಬಾಲಕ: ಚಿಟಿಕೆ ಹೊಡೆದು ಪ್ರೋತ್ಸಾಹಿಸಿದ ಪ್ರಧಾನಿ

  • ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ
  • ಮುಂಜಾನೆ ಜರ್ಮನಿ ತಲುಪಿದ ಪ್ರಧಾನಿಗೆ ಅದ್ಧೂರಿ ಸ್ವಾಗತ
  • ದೇಶಭಕ್ತಿ ಗೀತೆ ಹಾಡಿದ ಬಾಲಕ
PM Modi foriegn visit Indian Boy Sang Patriotic Song in germany akb
Author
Germany, First Published May 2, 2022, 2:47 PM IST

ಹೊಸದಿಲ್ಲಿ: ಮೂರು ದೇಶಗಳ ವಿದೇಶ ಪ್ರವಾಸ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜರ್ಮನಿಗೆ ಆಗಮಿಸುತ್ತಿದ್ದಂತೆ ಭಾರತೀಯ ಸಮುದಾಯ ಅವರಿಗೆ ಅದ್ದೂರಿ ಸ್ವಾಗತ ಕೋರಿತು. ಪ್ರಧಾನಿ ಮೋದಿ ಇಂದು ಮುಂಜಾನೆ ಜರ್ಮನಿಯ ( Germany) , ಬರ್ಲಿನ್ (Berlin) ಬ್ರಾಂಡೆನ್‌ಬರ್ಗ್ (Brandenburg) ವಿಮಾನ ನಿಲ್ದಾಣಕ್ಕೆ ಬಂದಿಳಿದರು. ನಂತರ ಹೊಟೇಲ್ ಅಡ್ಲಾನ್ ಕೆಂಪಿನ್ಸ್ಕಿಗೆ ತೆರಳಿದ ಪ್ರಧಾನಿ ಅಲ್ಲಿ ಭಾರತೀಯ ಸಮುದಾಯದ (Indian Comunity) ಸದಸ್ಯರೊಂದಿಗೆ ಸಂವಾದ ನಡೆಸಿದರು. ಈ ವೇಳೆ ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಘೋಷಣೆಗಳು ಮೊಳಗಿದವರು. ಪ್ರಧಾನಿ ಇದ್ದ ಹೊಟೇಲ್‌ಗೆ ತಮ್ಮ ಪೋಷಕರೊಂದಿಗೆ ಬಂದಿದ್ದ ಮಕ್ಕಳೊಂದಿಗೆ ಪ್ರಧಾನಿ ಮಾತನಾಡಿದರು.

ಈ ವೇಳೆ ಪುಟ್ಟ ಹುಡುಗಿಯೊಬ್ಬಳು ಪ್ರಧಾನಿಯವರಿಗೆ ಅವರದೇ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದಳು. ಈ ವೇಳೆ ಪ್ರಧಾನಿ ಆಕೆಯನ್ನು ಗೊಂಬೆ ಎಂದು ಕರೆದರು. ಅಲ್ಲದೇ ನೀನು ಈ ಭಾವಚಿತ್ರವನ್ನು ಮಾಡಲು ಎಷ್ಟು ಸಮಯ ತೆಗೆದುಕೊಂಡೆ ಎಂದು ಪ್ರಧಾನಿ ಮೋದಿ ಅವರು ಬಾಲಕಿ ಬಳಿ ಕೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಂತರ ಪ್ರಧಾನಿಯವರು ಬಾಲಕಿಯೊಂದಿಗೆ (Girl) ಫೋಟೋ ಕ್ಲಿಕ್ಕಿಸಿಕೊಂಡರು ಮತ್ತು ಅವರ ಭಾವಚಿತ್ರಕ್ಕೆ ಸಹಿ ಹಾಕಿ ಆಕೆಗೆ ನೀಡಿದರು. 

 

ಇದೇ ವೇಳೆ ಓರ್ವ ಚಿಕ್ಕ ಹುಡುಗ ದೇಶಭಕ್ತಿ ಗೀತೆಯನ್ನು ಪ್ರಧಾನಿ ಮುಂದೆ ಹಾಡಿದ್ದು, ಇದಕ್ಕೆ ತಲೆಯಾಡಿಸಿದ ಪ್ರಧಾನಿ ಆತನ ಹಾಡಿಗೆ ಚಿಟಿಕೆ ಹೊಡೆಯುತ್ತಾ ಆತನನ್ನು ಅಭಿನಂದಿಸಿದರು. ಅನೇಕ ಭಾರತೀಯರು ಪ್ರಧಾನಿ ಅವರನ್ನು ಸ್ವಾಗತಿಸಲು ಅವರತ್ತ ಕೈ ಬೀಸಿದರೆ, ಕೆಲವರು ಹೋಟೆಲ್‌ನಲ್ಲಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು. ಜರ್ಮನಿಯಲ್ಲಿ ಪ್ರಧಾನಿ ಮೋದಿ ಅವರು ಜರ್ಮನ್ ಚಾನ್ಸೆಲರ್ (German Chancellor) ಓಲಾಫ್ ಸ್ಕೋಲ್ಜ್ (Olaf Scholz)ಅವರೊಂದಿಗೆ ವಿವರವಾದ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲಿದ್ದಾರೆ ಮತ್ತು ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆಗಳಲ್ಲೂ ಭಾಗವಹಿಸಲಿದ್ದಾರೆ. 

ಸೌದಿ ಅರೇಬಿಯಾ ನೆಲದಲ್ಲಿ ಪಾಕ್ ಪ್ರಧಾನಿಗೆ 'ಕಳ್ಳ' ಎಂದ ಪ್ರಜೆಗಳು!

ಪಿಎಂ ಮೋದಿ ಅವರು ಮಂಗಳವಾರ ಡೆನ್ಮಾರ್ಕ್‌ಗೆ (Denmark) ಭೇಟಿ ನೀಡಲಿದ್ದು, ನಾರ್ಡಿಕ್ ದೇಶಗಳಾದ (Nordic countries) ಡೆನ್ಮಾರ್ಕ್ (Denmark), ಫಿನ್ಲ್ಯಾಂಡ್ (Finland), ಐಸ್ಲ್ಯಾಂಡ್ (Iceland), ನಾರ್ವೆ (Norway) ಮತ್ತು ಸ್ವೀಡನ್ (Sweden) ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಇತರ ಉನ್ನತ ಮಟ್ಟದ ಸಂವಾದಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅವರ ಮೂರು ರಾಷ್ಟ್ರಗಳ ಭೇಟಿಯು ಬುಧವಾರ ಪ್ಯಾರಿಸ್‌ನಲ್ಲಿ ಮುಕ್ತಾಯಗೊಳ್ಳಲಿದೆ, ಅಲ್ಲಿ ಪ್ರಧಾನಿ ಮೋದಿ ಹೊಸದಾಗಿ ಮರು ಆಯ್ಕೆಯಾದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಅವರನ್ನು ಭೇಟಿಯಾಗಲಿದ್ದಾರೆ.

ಮೋದಿ 3 ದಿನ ವಿದೇಶ ಪ್ರವಾಸ: ಜರ್ಮನಿ, ಡೆನ್ಮಾರ್ಕ್, ಫ್ರಾನ್ಸ್‌ಗೆ ಮೋದಿ ಭೇಟಿ! 

 

Latest Videos
Follow Us:
Download App:
  • android
  • ios