ಬಿಜೆಪಿಯ ಹೆಮ್ಮೆಯ ಕಾರ್ಯಕರ್ತನೊಂದಿಗೆ 'ವಿಶೇಷ' ಸೆಲ್ಫಿ ಕ್ಲಿಕ್ಕಿಸಿಕೊಂಡ ಪ್ರಧಾನಿ ಮೋದಿ
ಬಿಜೆಪಿಯ ದಿವ್ಯಾಂಗ ಕಾರ್ಯಕರ್ತರಾದ ತಿರು ಎಸ್. ಮಣಿಕಂಠನ್ ಅವರನ್ನು ಪ್ರಧಾನಿ ಮೋದಿ ಭೇಟಿಯಾದರು ಮತ್ತು ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು.
ಚೆನ್ನೈ (ಏಪ್ರಿಲ್ 9, 2023): ಶನಿವಾರದಿಂದ ದಕ್ಷಿಣ ಭಾರತ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುವ ಮುನ್ನ ತೆಳಂಗಾಣ ಹಾಗೂ ತಮಿಳುನಾಡಿಗೆ ಹೋಗಿದ್ದರು. ಶನಿವಾರ ತೆಲಂಗಾಣ ಮತ್ತು ಚೆನ್ನೈಗೆ ಒಂದು ದಿನದ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಸೆಲ್ಫಿ ತೆಗೆದುಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡು ಭೇಟಿಯ ಕೊನೆಯಲ್ಲಿ ಅವರು ಬಿಜೆಪಿಯ ಕಾರ್ಯಕರ್ತನ ಜತೆ ಸೆಲ್ಫಿ ತೆಗೆಸಿಕೊಂಡಿದ್ದು ವಿಶೇಷ.
ಬಿಜೆಪಿಯ ದಿವ್ಯಾಂಗ ಕಾರ್ಯಕರ್ತರಾದ ತಿರು ಎಸ್. ಮಣಿಕಂಠನ್ ಅವರನ್ನು ಪ್ರಧಾನಿ ಮೋದಿ ಭೇಟಿಯಾದರು ಮತ್ತು ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿರುವ ಪ್ರಧಾನಿ ಮೋದಿ, "ಒಂದು ವಿಶೇಷ ಸೆಲ್ಫಿ... ಚೆನ್ನೈನಲ್ಲಿ ನಾನು ತಿರು ಎಸ್. ಮಣಿಕಂಠನ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ಈರೋಡ್‌ನ ಹೆಮ್ಮೆಯ ಕಾರ್ಯಕರ್ತರು, ಬೂತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ" ಎಂಬ ಕ್ಯಾಪ್ಷನ್ ಹಂಚಿಕೊಂಡಿದ್ದಾರೆ. ಅಲ್ಲದೆ, ಇವರು ದಿವ್ಯಾಂಗ ಹೊಂದಿರುವ ವ್ಯಕ್ತಿಯಾಗಿದ್ದರೂ ತನ್ನದೇ ಆದ ಅಂಗಡಿಯನ್ನು ನಡೆಸುತ್ತಾರೆ ಮತ್ತು ಹೆಚ್ಚು ಪ್ರೇರೇಪಿಸುವ ಅಂಶವೆಂದರೆ, ಅವರು ತನ್ನ ದೈನಂದಿನ ಲಾಭದ ಗಣನೀಯ ಭಾಗವನ್ನು ಬಿಜೆಪಿಗೆ ನೀಡುತ್ತಾರೆ" ಎಂದೂ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿ: ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ: ಕಳೆದ 50 ವರ್ಷದಲ್ಲಿ ಶೇ. 75 ರಷ್ಟು ಹೆಚ್ಚಳ
ಅಲ್ಲದೆ, ಮಣಿಕಂಠನ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ, "ತಿರು ಎಸ್. ಮಣಿಕಂಠನ್ ಅವರಂತಹ ವ್ಯಕ್ತಿಗಳನ್ನು ಹೊಂದಿರುವ ಪಕ್ಷದಲ್ಲಿ ಕಾರ್ಯಕರ್ತರಾಗಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ" ಎಂದೂ ಹೇಳಿದರು. ಹಾಗೆ, ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು’’ ಎಂದೂ ಹೇಳಿದರು.
ತಮಿಳುನಾಡು, ತೆಲಂಗಾಣದಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಮಿಳುನಾಡಿನ ಚೆನ್ನೈನಲ್ಲಿ 5,200 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಈ ವೇಳೆ ಸರ್ಕಾರದ ಕಾರ್ಯ ಸಂಸ್ಕೃತಿ ಮತ್ತು ದೂರದೃಷ್ಟಿಯು ಅದರ ಸಾಧನೆಗಳನ್ನು ಸಾಧ್ಯವಾಗಿಸಿದೆ ಎಂದು ಹೇಳಿದರು. ಹಾಗೂ, ತಮ್ಮ ಸರ್ಕಾರವು ಗಡುವುಗಳೊಂದಿಗೆ ಕೆಲಸ ಮಾಡುತ್ತದೆ ಮತ್ತು ಡೆಡ್‌ಲೈನ್‌ಗೂ ಮುಂಚೆಯೇ ಫಲಿತಾಂಶಗಳನ್ನು ಸಾಧಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: ಸಫಾರಿ ಡ್ರೆಸ್‌ನಲ್ಲಿ ಮಿಂಚಿದ ಪ್ರಧಾನಿ ಮೋದಿ: ಹೀರೋ ಥರ ಕಾಣುತ್ತಿದ್ದಾರೆ ಎಂದ ನೆಟ್ಟಿಗರು
"ಎರಡು ವಿಷಯಗಳು ಸರ್ಕಾರದ ಸಾಧನೆಗಳನ್ನು ಸಾಧ್ಯವಾಗಿಸಿದೆ: ಕೆಲಸದ ಸಂಸ್ಕೃತಿ ಮತ್ತು ದೂರದೃಷ್ಟಿ. ಮೊದಲು, ಮೂಲಸೌಕರ್ಯ ಯೋಜನೆಗಳು ಎಂದರೆ ವಿಳಂಬ ಎಂದರ್ಥ ಇತ್ತು, ಈಗ ಸಮಯಕ್ಕೆ ಸರಿಯಾಗಿ ಕೆಲಸ ಆಗುತ್ತಿದೆ ಎಂದರ್ಥ. ನಮ್ಮ ಕೆಲಸದ ಸಂಸ್ಕೃತಿಯಿಂದಾಗಿ ವಿಳಂಬದಿಂದ ವಿತರಣೆಯ ಕಡೆ ಪ್ರಯಾಣ ನಡೆದಿದೆ. ನಮ್ಮ ತೆರಿಗೆದಾರರು ಪಾವತಿಸುವ ಪ್ರತಿ ರೂಪಾಯಿಗೆ ನಾವು ಜವಾಬ್ದಾರರಾಗಿರುತ್ತೇವೆ. ನಾವು ನಿರ್ದಿಷ್ಟ ಗಡುವುಗಳೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಡೆಡ್‌ಲೈನ್‌ಗೂ ಮುನ್ನವೇ ಫಲಿತಾಂಶಗಳನ್ನು ಸಾಧಿಸುತ್ತೇವೆ’’ ಎಂದು ಪ್ರಧಾನಿ ಮೋದಿ ಸಾರ್ವಜನಿಕ ಸಭೆಯಲ್ಲಿ ತಮ್ಮ ಭಾಷಣದಲ್ಲಿ ಹೇಳಿದರು.
ಅಲ್ಲದೆ, ತಮ್ಮ ಸರ್ಕಾರವು ಮೂಲಸೌಕರ್ಯಗಳನ್ನು ಕಾಂಕ್ರೀಟ್, ಇಟ್ಟಿಗೆ ಮತ್ತು ಸಿಮೆಂಟ್ ಎಂದು ನೋಡುವುದಿಲ್ಲ. ಆದರೆ 'ಸಾಧನೆಗಳೊಂದಿಗೆ ಆಕಾಂಕ್ಷೆಗಳನ್ನು ಸಂಪರ್ಕಿಸುವ' ಮಾನವೀಯ ಮುಖದಿಂದ ನೋಡುತ್ತದೆ ಎಂದೂ ಪ್ರಧಾನಿ ಮೋದಿ ಹೇಳಿದರು. "ಮೂಲಸೌಕರ್ಯವು ಆಕಾಂಕ್ಷೆಗಳನ್ನು ಸಾಧನೆಗಳೊಂದಿಗೆ, ಸಾಧ್ಯತೆಗಳನ್ನು ಹೊಂದಿರುವ ಜನರು ಮತ್ತು ಕನಸುಗಳನ್ನು ವಾಸ್ತವದೊಂದಿಗೆ ಸಂಪರ್ಕಿಸುತ್ತದೆ. ಇದು ಹೊಸ ಭರವಸೆಗಳು, ಹೊಸ ಆಕಾಂಕ್ಷೆಗಳು ಮತ್ತು ಹೊಸ ಆರಂಭಗಳಿಗೆ ಸಮಯವಾಗಿದೆ. ಕೆಲವು ಹೊಸ ಪೀಳಿಗೆಯ ಮೂಲಸೌಕರ್ಯ ಯೋಜನೆಗಳು ಇಂದಿನಿಂದ ಜನರಿಗೆ ಸೇವೆ ಸಲ್ಲಿಸಲು ಪ್ರಾರಂಭಿಸುತ್ತವೆ. ಕಳೆದ ಕೆಲವು ವರ್ಷಗಳಲ್ಲಿ, ಮೂಲಸೌಕರ್ಯಗಳ ವಿಷಯದಲ್ಲಿ ಭಾರತವು ಒಂದು ಕ್ರಾಂತಿಗೆ ಸಾಕ್ಷಿಯಾಗಿದೆ. ಇದು ವೇಗ ಮತ್ತು ಪ್ರಮಾಣದಿಂದ ನಡೆಸಲ್ಪಡುತ್ತದೆ. ಪ್ರಮಾಣದೆಡೆಗೆ ಬಂದಾಗ, ನೀವು ಕೇಂದ್ರ ಬಜೆಟ್ ಅನ್ನು ನೋಡಬಹುದು!" ಎಂದೂ ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಹೇಳಿದರು.
ಇದನ್ನೂ ಓದಿ: ಸುಪ್ರೀಂಕೋರ್ಟ್ ವಿರೋಧ ಪಕ್ಷಗಳಿಗೆ ಹೊಡೆತ ನೀಡಿದೆ: ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪಕ್ಕೆ ಚಾಟಿ ಬೀಸಿದ ಮೋದಿ