ಕೊರೋನಾ ಹೋರಾಟ; ಮಾನವ ಸಂಪನ್ಮೂಲ ಸ್ಥಿತಿಗತಿ ಪರಿಶೀಲನೆಗೆ ಪ್ರಧಾನಿ ಮೋದಿ ಸಭೆ!
ಕೊರೋನಾ ವೈರಸ್ 2ನೇ ಅಲೆಗೆ ದೇಶದ ವೈದ್ಯಕೀಯ ಕ್ಷೇತ್ರ ಅತೀ ದೊಡ್ಡ ಸವಾಲು ಎದುರಿಸುತ್ತಿದೆ. ಆಕ್ಸಿಜನ್ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿದೆ. ಇದರ ನಡುವೆ ವೈದ್ಯರು, ನರ್ಸ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ ಮಾನವ ಸಂಪನ್ಮೂಲ ಕೊರತೆ ಕೂಡ ಎದುರಾಗಿದೆ. ಈ ನಿಟ್ಟಿನಲ್ಲಿ ಭಾರತದ ಸ್ಥಿತಿಗತಿ ಪರಿಶೀಲನೆ ಹಾಗೂ ಪರಿಹಾರಕ್ಕೆ ಮೋದಿ ಮುಂದಾಗಿದ್ದಾರೆ.
ನವದೆಹಲಿ(ಮೇ.01): ಕೊರೋನಾ ಹೊಡೆತಕ್ಕೆ ಭಾರತದ ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳು ತೀವ್ರ ಹೊಡೆತ ಅನುಭವಿಸಿದೆ. ಇದರ ನಡುವೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಕಾರಣ ದೇಶದಲ್ಲಿ ವೈದ್ಯರು, ನರ್ಸ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳ ಕೊರತೆ ಎದುರಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಲಿದ್ದಾರೆ.
ಕ್ಷೇತ್ರದ ಜನರಿಗೆ ನೆರವಾಗಿ, ಸಮಸ್ಯೆ ಬಗೆಹರಿಸಿ; ಮಂತ್ರಿ ಮಂಡಲ ಸದಸ್ಯರಿಗೆ ಮೋದಿ ಸೂಚನೆ!.
ಕೊರೋನಾ ಪರಿಸ್ಥಿತಿ ಎದುರಿಸಲು ಭಾರತದ ಮಾನವ ಸಂಪನ್ಮೂಲ ಸ್ಥಿತಿಗತಿ ಕುರಿತು ಮೋದಿ ಚರ್ಚೆ ನಡೆಸಲಿದ್ದಾರೆ. ದೇಶದಲ್ಲಿನ ಮಾನವ ಸಂಪನ್ಮೂಲ ಪರಿಸ್ಥಿತಿ ಹಾಗೂ ಪರಿಹಾರಕ್ಕೆ ಈ ಸಭೆ ನಡೆಸಲಾಗುತ್ತಿದೆ.
ವಾಯುಸೇನೆ ಜೊತೆ ಪ್ರಧಾನಿ ಮಹತ್ವದ ಚರ್ಚೆ; ಕೊರೋನಾ ಕಾರ್ಯಚರಣೆ ಕುರಿತು ಪರಿಶೀಲನೆ!
ಹಲವು ಆಸ್ಪತ್ರೆಗಳ ಸಿಬ್ಬಂದಿಗಳು ಹೆಚ್ಚುವರಿ ಸಮಯ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಹಲವು ಆಸ್ಪತ್ರೆ ಸಿಬ್ಬಂದಿಗಳಲ್ಲಿ ಕೊರೋನಾ ಕಾಣಿಸಿಕೊಂಡ ಕಾರಣ ಆಸ್ಪತ್ರೆಯಲ್ಲಿ ಮಾನವ ಸಂಪೂನ್ಮೂಲ ಕೊರತೆ ಎದುರಿಸುತ್ತಿದೆ. ಹೀಗಾಗಿ ಈ ಕಠಿಣ ಪರಿಸ್ಥಿತಿಯಲ್ಲಿ ಮಾನವ ಸಂಪೂನ್ಮೂಲ ಕೊರತೆ ಎದುರಿಸಲು ಮುಂದಿರುವ ದಾರಿಗಳ ಕುರಿತು ಮೋದಿ ಚರ್ಚಿಸಲಿದ್ದಾರೆ.