ನವದೆಹಲಿ(ಏ.28); ಕೊರೋನಾ ವೈರಸ್ 2ನೇ ಅಲೆಗೆ ಭಾರತದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೀಗ ಕೊರೋನಾದಿಂದ ಜನರನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಕೇಂದ್ರ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಜೊತೆ ಭಾರತೀಯ ಸೇನೆ, ರೈಲ್ವೇ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳು ಕೈಜೋಡಿಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ವಾಯುಸೇನೆಯ ಕೊರೋನಾ ಕಾರ್ಯಚರಣೆ ಕುರಿತು ಪರಿಶೀಲನೆ ನಡೆಸಿದರು.

ಕೊರೋನಾ ಎದುರಿಸಲು ಸೇನಾ ಪಡೆ ಸಿದ್ಧತೆ ಪರಿಶೀಲಿಸಿದ ಪ್ರಧಾನಿ ಮೋದಿ!...

ಮೋದಿ ಭೇಟಿ ಮಾಡಿದ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ, ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಭಾರತೀಯ ವಾಯುಸೇನೆ ಕೈಗೊಂಡಿರುವ ಕಾರ್ಯಗಳು, ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು. 

ಈಗಾಗಲೇ ವಿದೇಶಗಳಿಂದ ಲಸಿಕೆ, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಸಲಕರಣೆಗಳನ್ನು ಯಶಸ್ವಿಯಾಗಿ ಏರ್‌ಲಿಫ್ಟ್ ಮಾಡಿದೆ. ಈ ಮೂಲಕ ಭಾರತದಲ್ಲಿ ಎದುರಾದ ಆಕ್ಸಿಜನ್ ಕೊರತೆಗೆ ಸೇರಿದಂತೆ ವೈದ್ಯಕೀಯ ಸಮಸ್ಯೆ ಬಗೆಹರಿಸಲು ವಾಯುಸೇನೆ ನಿರಂತ ಹೋರಾಟ ಮಾಡುತ್ತಿದೆ ಎಂದು ಭದೌರಿಯಾ ವಿವರಿಸಿದ್ದಾರೆ.

ಆಕ್ಸಿಜನ್ ಕೊರತೆಗೆ ಮೋದಿ ಪರಿಹಾರ; ಸರ್ಕಾರಿ ಆಸ್ಪತ್ರೆಗಳಲ್ಲಿ 551 ಉತ್ಪಾದಕ ಘಟಕ ಸ್ಥಾಪನೆ!.

ಭದೌರಿಯಾ ನೀಡಿದ ಮಾಹಿತಿ ಪಡೆದ ಪ್ರಧಾನಿ ಮೋದಿ, ಸುರಕ್ಷತೆ ಆದ್ಯತೆ ನೀಡುವಂತೆ ಹೇಳಿದ್ದಾರೆ. ಆಮ್ಲಜನಕ ಟ್ಯಾಂಕರ್ ಹಾಗೂ ಇತರ ಅಗತ್ಯ ವಸ್ತುಗಳನ್ನು ಸಾಹಿಸುವ ವೇಳೆ, ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಮೋದಿ ಸೂಚಿಸಿದ್ದಾರೆ. ಇದೇ ವೇಳೆ IAF ಸಿಬ್ಬಂದಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದಿದ್ದಾರೆ. 

ಭಾರತದ ಎಲ್ಲಾ ಭಾಗಗಳಿಗೆ ತುರ್ತು ಹಾಗೂ ಅಗತ್ಯ ಸೇವೆ ಒದಗಿಸಲು ಭಾರತೀಯ ವಾಯುಸೇನೆ ದೊಡ್ಡ ಹಾಗೂ ಮಧ್ಯಮ ಗಾತ್ರ ವಿಮಾನಗಳನ್ನು ನಿಯೋಜಿಸುತ್ತಿದೆ ಎಂದು ಭದೌರಿಯಾ ಹೇಳಿದ್ದಾರೆ. ಇದೇ ವೇಳೆ ಕೋವಿಡ್ ಸಂಬಂಧಿತ ಕಾರ್ಯಾಚರಣೆಗಳಿಗೆ ವಿವಿಧ ಸಚಿವಾಲಯಗಳು ಮತ್ತು ಏಜೆನ್ಸಿಗಳೊಂದಿಗೆಸಮನ್ವಯ ಸಾಧಿಸಲು IAF ಸ್ಥಾಪಿಸಿದ  ಕೋವಿಡ್ ಏರ್ ಸಪೋರ್ಟ್ ಸೆಲ್ ಕುರಿತು ಮೋದಿಗೆ ಮಾಹಿತಿ ನೀಡಿದ್ದಾರೆ.