ದೀಪಾವಳಿ ಹಬ್ಬಕ್ಕೆ ಭಾರತೀಯ ರೈಲ್ವೇ ಬಂಪರ್ ಘೋಷಣೆ ಮಾಡಿದೆ. ರೈಲ್ವೇಯ 11.4 ಲಕ್ಷ ಉದ್ಯೋಗಿಗಳಿಗೆ ಬೋನಸ್ ಘೋಷಣೆ ಮಾಡಿದೆ. ಉದ್ಯೋಗಿಗಳಿಗೆ 78 ದಿನಗಳ ಬೋನಸ್ ನೀಡಲಿದೆ. ಕೇಂದ್ರ ಸರ್ಕಾರದ ಬಂಪರ್ ಕೊಡುಗೆ ಮಾಹಿತಿ ಇಲ್ಲಿದೆ,

ನವದೆಹಲಿ (ಅ.14) ಪ್ರತಿ ವರ್ಷದಂತೆ ದಸರಾ ಹಾಗೂ ದುರ್ಗಾ ಪೂಜೆಗೂ ಮೊದಲು ರೈಲ್ವೇ ಉದ್ಯೋಗಗಳಿಗೆ ಬಂಪರ್ ಕೈಸೇರಲಿದೆ. ಭಾರತೀಯ ರೈಲ್ವೇ ಇಲಾಖೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ನೀಡುವುದಾಗಿ ಘೋಷಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ರೈಲ್ವೇ ಉದ್ಯೋಗಿಗಳ ಬೋನಸ್‌ಗೆ ಅನುಮೋದನೆ ನೀಡಲಾಗಿದೆ. ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಬಂಪರ್ ಬೋನಸ್ ಬರೋಬ್ಬರಿ 11.4 ಲಕ್ಷ ರೈಲ್ವೇ ಉದ್ಯೋಗಳಿಗೆ ನೆರವಾಗಲಿದೆ.

2009 ಕೋಟಿ ರೂಪಾಯಿ ವೆಚ್ಚ

ರೈಲ್ವೇ ಉದ್ಯೋಗಿಗಳಿಗೆ ಈ ಬಾರಿ 78 ದಿನಗಳ ಬೋನಸ್ ನೀಡಲು ಕೇಂದ್ರ ಸರ್ಕಾರಕ್ಕೆ 2009 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಕುರಿಕು ಪ್ರಕಿಕ್ರಿಯಿಸಿರುವ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಇದು ರೈಲ್ವೇ ಉದ್ಯೋಗಿಗಳಿಗೆ ದೀವಾವಳಿ ಉಡುಗೊರೆ ಎಂದಿದ್ದಾರೆ. 11.4 ಲಕ್ಷ ರೈಲ್ವೇ ಉದ್ಯೋಗಳಿಗೆ ಬೋನಸ್ ನೀಡಲಾಗುತ್ತದೆ ಎಂದಿದ್ದಾರೆ.

ರೈಲ್ವೇ ಉದ್ಯೋಗಿಗಳ ದೀಪಾವಳಿ ಬೋನಸ್ ರೈಲ್ವೇ ಉದ್ಯೋಗಿಗಳು, ರೈಲು ಟ್ರಾಕ್, ಎಂಜಿನ್ ಹಾಗೂ ಕಾರ್ಯಾಗಾರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಳು, ವಿವಿಧ ವಿಭಾಗದ ನೌಕರರಿಗೂ ಅನ್ವಯವಾಗಲಿದೆ. ಪ್ರತಿ ದಿನ ನಿರಂತರ ಪರಿಶ್ರಮದ ಮೂಲಕ ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿರುವ ಸಿಬ್ಬಂದಿಗೆ ಈ ಬೋನಸ್ ಸಲ್ಲಲಿದೆ. ಎಲ್ಲರೂ ಹಬ್ಬದ ಆಚರಣೆ ಮಾಡುವಾಗಲು ರೈಲ್ವೇ ಸಿಬ್ಬಂದಿಗಳು ಕರ್ತವ್ಯದಲ್ಲಿರುತ್ತಾರೆ ಎಂದು ವೈಷ್ವವ್ ಹೇಳಿದ್ದಾರೆ.

17,951 ರೂಪಾಯಿ ಬೋನಸ್

ರೈಲ್ವೇ ಉದ್ಯೋಗಗಳಿಗೆ ನೀಡುವ ದೀಪಾವಳಿ ಬೋನಸ್ ಗರಿಷ್ಠ 17,951 ರೂಪಾಯಿ. ಅರ್ಹ ಉದ್ಯೋಗಿಗಳು ಬೋನಸ್ ಪಡೆಯಲಿದ್ದಾರೆ. ಒಟ್ಟು 11.4 ಲಕ್ಷ ರೈಲ್ವೇ ಉದ್ಯೋಗಿಗಳು ಈ ಬೋನಸ್ ಪಡೆಯಲಿದ್ದಾರೆ.