ಗಾಂಧಿ ಕುಟುಂಬದ ಅತ್ಯಾಪ್ತ ಸ್ಯಾಮ್ ಪಿತ್ರೋಡಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಎಂಬ ವದಂತಿಗೆ ತೆರೆ ಬಿದ್ದಿದೆ. ಈ ಬಗ್ಗೆ ಖುದ್ದು ಪಿತ್ರೋಡಾ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಏನು ಹೇಳಿದ್ದಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ನವದೆಹಲಿ: ರಾಹುಲ್ ಗಾಂಧಿ ಅವರ ಆಪ್ತ, ಕಾಂಗ್ರೆಸ್ ಓವರ್‍‌ಸಿಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರಾ ಎಂಬ ಚರ್ಚೆ ಗುಲ್ಲೆದ್ದಿದೆ. ಅದಕ್ಕೆ ಕಾರಣ, ಅವರ ಇತ್ತೀಚೆಗಿನ ಬೆಳವಣಿಗೆಗಳು. ಹಿರಿಯ ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ ನೀಡಿದ ಹೇಳಿಕೆ ಈ ಸಂಚಲನಕ್ಕೆ ಕಾರಣವಾಗಿದೆ.

ಏನಿದು ಸಮಾಚಾರ?

ಸ್ಯಾಮ್ ಪಿತ್ರೋಡಾ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯನ್ನ ಹೊಗಳಿದ್ದರು. ಇದಕ್ಕೆ ಕುಪಿತಗೊಂಡ ಹುಸೇನ್ ದಳವಾಯಿ.. ಸ್ಯಾಮ್ ಪಿತ್ರೋಡಾ ದೇಶದಲ್ಲಿ ವಾಸಿಸುವುದಿಲ್ಲ. ಅವರು ದೇಶದ ಹೊರಗೆ ವಾಸಿಸುತ್ತಾರೆ. ಇಲ್ಲಿನ ಪರಿಸ್ಥಿತಿ ಬಗ್ಗೆ ಅವರಿಗೆ ಹೆಚ್ಚು ತಿಳಿದಿಲ್ಲ. ಅವರು ದಂಗೆಯ ಬಗ್ಗೆ ಯೋಚಿಸುತ್ತಿರಬೇಕು. ಅವರ ತಲೆಯಲ್ಲಿ ಏನು ಓಡುತ್ತಿದೆ ಎಂದು ನನಗೆ ತಿಳಿದಿಲ್ಲ. ಬಿಜೆಪಿ ಸೇರಿದರೂ ಸೇರಬಹುದು ಎಂಬ ಅರ್ಥದಲ್ಲಿ ಅವರು ಮಾತನ್ನಾಡಿದ್ದರು.

ಬೆನ್ನಲ್ಲೇ ಸ್ಯಾಮ್ ಪಿತ್ರೋಡಾ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಜೋರಾಗಿತ್ತು. ಇದೀಗ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವ ಬಗ್ಗೆ ಮಾತನ್ನಾಡಿದ್ದಾರೆ. ಹುಸೇನ್ ದಲ್ವಾಯಿ ಹುಚ್ಚರಾಗಿದ್ದಾರೆ. ನಾನು ಯಾವತ್ತೂ ಕಾಂಗ್ರೆಸ್ ಬಿಡೋದಿಲ್ಲ. ಕಾಂಗ್ರೆಸ್ ನನಗೆ ಭಾರತದಲ್ಲಿ ಕೆಲಸ ಮಾಡಲು ಅವಕಾಶ ನೀಡಿತು. ಗಾಂಧೀಜಿ ನನಗೆ ಬದುಕಲು ಒಂದು ಉದ್ದೇಶ ನೀಡಿದರು. ನಾನು ಜ್ಯಾತ್ಯಾತಿತತೆ ನಂಬುತ್ತೇನೆ. ನಾನು ಕಾಂಗ್ರೆಸ್ ಸಿದ್ಧಾಂತದೊಂದಿಗೆ ಹುಟ್ಟಿದ್ದೇನೆ. ದಲ್ವಾಯಿ ಏನು ಯೋಚಿಸುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಎಂದಿದ್ದರು.

ಮೋದಿ ಬಗ್ಗೆ ಪಿತ್ರೋಡಾ ಏನು ಹೇಳಿದ್ದರು?

ಮೋದಿ ನನ್ನ ಗುಜರಾತಿ ಸ್ನೇಹಿತ. ನಾನು ಅವರನ್ನು ಒಬ್ಬ ವ್ಯಕ್ತಿಯಾಗಿ ಗೌರವಿಸುತ್ತೇನೆ. ನಾನು ಮತ್ತು ನನ್ನ ಪತ್ನಿ ಅವರನ್ನು ಭೇಟಿಯಾಗಿದ್ದೇವೆ. ವೈಯಕ್ತಿಕ ಮಟ್ಟದಲ್ಲಿ ತುಂಬಾ ಆತ್ಮೀಯರು. ಅತೀವ ಕಾಳಜಿ ವಹಿಸುವಹಿಸುತ್ತಾರೆ. ಅವರು ಉತ್ತಮ ವಾಗ್ಮಿ ಮತ್ತು ಕಠಿಣ ಪರಿಶ್ರಮಿ. ನಮ್ಮ ನಡುವೆ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಒಬ್ಬ ಸ್ನೇಹಿತನಾಗಿ ಮತ್ತು ಹಿತೈಷಿಯಾಗಿ ನನಗೆ ಮೋದಿ ಅವರ ವಿರುದ್ಧ ಏನೂ ಇಲ್ಲ. ನಾನು ಗುಜರಾತ್‌ನಲ್ಲಿರುವ ಅವರ ಮನೆಗೆ ಹಲವಾರು ಬಾರಿ ಭೇಟಿ ನೀಡಿದ್ದೇನೆ. ಆದರೆ ಜಗತ್ತನ್ನು ನೋಡುವ ಅವರ ದೃಷ್ಟಿಕೋನ ಮತ್ತು ಅವರ ಸಿದ್ಧಾಂತದ ಬಗ್ಗೆ ನನಗೆ ಭಿನ್ನಾಭಿಪ್ರಾಯಗಳಿರಬಹುದು. ಅದು ವ್ಯಕ್ತಿಯ ವಿರುದ್ಧವಲ್ಲ, ಬದಲಾಗಿ ಸಿದ್ಧಾಂತದ ವಿರುದ್ಧವಾಗಿದೆ. ಇವೆರಡೂ ಪ್ರತ್ಯೇಕ ವಿಷಯಗಳು. ನಾನು ಮೋದಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಬಹುದು ಮತ್ತು ಅದೇ ಸಮಯದಲ್ಲಿ ಅವರೊಂದಿಗೆ ಕುಳಿತು ಊಟ ಮಾಡಿ, ನಗಬಲ್ಲೆ ಎಂದಿದ್ದರು.

ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ, ಸ್ಯಾಮ್ ಪಿತ್ರೋಡಾಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನ ತಿಳಿಸಿದ್ದರು. ಇದು ಕೆಲವು ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿತ್ತು.

Scroll to load tweet…