ಜುಲೈ 19 ರಿಂದ ಮುಂಗಾರು ಅಧಿವೇಶನ ಆರಂಭ ಅಧಿವೇಶನ ಆರಂಭಕ್ಕೂ ಮುನ್ನ ಸರ್ವ ಪಕ್ಷ ಸಭೆ 33 ಪಕ್ಷದ 40ಕ್ಕೂ ಹೆಚ್ಚು ಮುಖಂಡರು ಭಾಗಿ

ನವದೆಹಲಿ(ಜು.18):  ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷ ಸಭೆ ನಡೆಸಿದ್ದಾರೆ. 33 ಪಕ್ಷಗಳ 40ಕ್ಕೂ ಹೆಚ್ಚು ಮುಖಂಡರ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಿದ ಮೋದಿ, ಆರೋಗ್ಯಕರ ಚರ್ಚೆಗೆ ಒತ್ತಾಯಿಸಿದ್ದಾರೆ.

ಸಂಸತ್ ಮುಂಗಾರು ಅಧಿವೇಶನ: 23 ಮಸೂದೆ ಮಂಡನೆಗೆ ಕೇಂದ್ರ ತಯಾರಿ!

ನಾಳೆಯಿಂದ(ಜು,19) ಮುಂಗಾರು ಅಧಿವೇಶನ ಆರಂಭಗೊಳ್ಳಲಿದೆ. ಸಂಸತ್ತಿನಲ್ಲಿ ಆರೋಗ್ಯಕರ ಹಾಗೂ ಫಲಪ್ರದ ಚರ್ಚೆಗೆ ಒತ್ತು ನೀಡಬೇಕು ಎಂದು ಮೋದಿ ಆಗ್ರಹಿಸಿದ್ದಾರೆ. ಸಂಸತ್ತಿನ ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರಕಾರ ಎದ್ದರೆ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಾಗಿದೆ ಎಂದು ಪ್ರಧಾನಿ ಹೇಳಿದರು.

Scroll to load tweet…

ಸಂಸತ್ತಿನ ಚರ್ಚೆಯಲ್ಲಿ ವಿರೋಧ ಪಕ್ಷದ ಪಾಲ್ಗೊಳ್ಳುವಿಕೆ ಅತೀ ಅಗತ್ಯ ಹಾಗೂ ಮುಖ್ಯವಾಗಿದೆ. ಜನಪ್ರತಿನಿಧಿಗಳ ಸಲಹೆ ಮೌಲ್ಯಯುತವಾಗಿದೆ. ವಿರೋಧ ಪಕ್ಷಗಳು ಚರ್ಚೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಸತ್ ಚರ್ಚೆ ಶ್ರೀಮಂತಗೊಳ್ಳಲಿದೆ.

ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಮತ್ತು ರಾಜ್ಯಸಭೆಯ ಸದನ ಮುಖಂಡ ಪಿಯೂಷ್ ಗೋಯಲ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.

ಜುಲೈ 22ರಿಂದ ಸಂಸತ್ ಹೊರಭಾಗದಲ್ಲಿ ಬೃಹತ್ ರೈತ ಪ್ರತಿಭಟನೆ; ಪೊಲೀಸರಿಗೆ ಶುರುವಾಯ್ತು ಟೆನ್ಶನ್!

ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯಲ್ಲಿನ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಸರ್ವ ಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು. ಇವರೊಂದಿಗೆ ವಿರೋಧ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.

Scroll to load tweet…

NDA ಮುಖಂಡರ ಜೊತೆ ಸಭೆ
ಸರ್ವ ಪಕ್ಷ ಸಭೆ ಮಾತ್ರವಲ್ಲ, ಬಿಜೆಪಿ ಮೈತ್ರಿ ಕೂಟವಾಗಿರುವ NDA ಮುಖಂಡರ ಜೊತೆಗೂ ಮೋದಿ ಸಭೆ ನಡೆಸಿದ್ದಾರೆ. ಈ ಮೂಲಕ ನಾಳೆಯಿಂದ ಆರಂಭಗೊಳ್ಳಲಿರುವ ಮುಂಗಾರು ಅಧಿವೇಶನಕ್ಕೆ NDA ತಯಾರಿ ಹಾಗೂ ಸಿದ್ದತೆಗಳು, ಚರ್ಚಾ ವಿಷಯ, ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ.