Asianet Suvarna News

ಸಂಸತ್ ಮುಂಗಾರು ಅಧಿವೇಶನ: 23 ಮಸೂದೆ ಮಂಡನೆಗೆ ಕೇಂದ್ರ ತಯಾರಿ!

  • ಜುಲೈ 19ರಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ
  • ಈ ಬಾರಿ 23 ಮಸೂದೆ ಮಂಡನೆಗೆ ಸಕಲ ಸಿದ್ಧತೆ ಮಾಡಿಕೊಂಡ ಕೇಂದ್ರ
  • ಭಾರಿ ಚರ್ಚೆಯಾಗಲಿರುವ ಮಸೂದೆಗಳ ಮಂಡನೆಗೆ ಕೇಂದ್ರ ತಯಾರಿ
central government is set to table 23 Bills in Monsoon Session of Parliament ckm
Author
Bengaluru, First Published Jul 13, 2021, 6:58 PM IST
  • Facebook
  • Twitter
  • Whatsapp

ನವದೆಹಲಿ(ಜು.13):  ಸಂಸತ್ ಮುಂಗಾರು ಅಧಿವೇಶನ್ ಜುಲೈ 19 ರಿಂದ ಆರಂಭಗೊಳ್ಳಲಿದೆ. ಆಗಸ್ಟ್ 13ಕ್ಕೆ ಅಂತ್ಯಗೊಳ್ಳಲಿದೆ. ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ 23 ಮಸೂದೆ ಮಂಡನೆಗೆ ಕೇಂದ್ರ ಮುಂದಾಗಿದೆ. 23 ಮಸೂದೆಗಳ ಪೈಕಿ 17 ಹೊಸ ಮಸೂದೆಗಳಾಗಿದ್ದು, ಎಲ್ಲರ ಕುತೂಹಲ ಕೆರಳಿಸಿದೆ.

ಜುಲೈ 19 ರಿಂದ ಆರಂಭಗೊಳ್ಳಲಿದೆ ಸಂಸತ್ ಮುಂಗಾರು ಅಧಿವೇಶನ!

ಮೂರು ಮಸೂದೆಗಳು ದಿವಾಳಿತ ಸಂಹಿತೆ ತಿದ್ದುಪಡಿ, ಸೆನ್ಷಿಯಲ್ ಡಿಫೆನ್ಸ್ ಸರ್ವಿಸ್ ಬಿಲ್, ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿನ ವಾಯು ಗುಣಮಟ್ಟ ನಿರ್ವಹಣೆ ಮಸೂದೆಗಳು ಮಂಡನೆಯಾಗಲಿದೆ. ದಿವಾಳಿತನ ಸಂಹಿತೆ (ತಿದ್ದುಪಡಿ ಮಸೂದೆ)ಯಲ್ಲಿ  ಸಂಕಷ್ಟದಲ್ಲಿರುವ ಕಾರ್ಪೊರೇಟ್ ಸಾಲಗಾರರ ದಿವಾಳಿತನಕ್ಕೆ ತ್ವರಿತ ಪರಿಹಾರಕ್ಕೆ ಸಂಬಂಧಿಸಿದ ಮಹತ್ವದ ತಿದ್ದುಪಡಿಗಳನ್ನು ಮಾಡಲಾಗಿದೆ.

ವಾಯು ಗುಣಮಟ್ಟ ನಿರ್ವಹಣೆ ಮಸೂದೆ ಅಡಿಯಲ್ಲಿ, ಸಾರ್ವಜನಿಕ ಭಾಗವಹಿಸುವಿಕೆ, ಅಂತರರಾಜ್ಯ ಸಹಕಾರ ಮತ್ತು ತಜ್ಞರ ಒಳಗೊಳ್ಳುವಿಕೆ, ಸಂಶೋಧನೆ  ಮೂಲಕ ವಾಯು ಗುಣಮಟ್ಟ ನಿರ್ವಹಣೆಗೆ ಆಯೋಗವನ್ನು ರಚಿಸಲಾಗುವುದು. ಈ ಕ್ರಮಗಳೊಂದಿಗೆ ವಾಯುಮಾಲಿನ್ಯಕ್ಕೆ ಶಾಶ್ವತ ಪರಿಹಾರವನ್ನು ನೀಡಲು ಮಸೂದೆ ನೆರವಾಗಲಿದೆ.

ಇದರ ಜೊತೆಗೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಲು ಕೇಂದ್ರ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಕೇಂದ್ರ ಮುಂದಾಗಿದೆ.
 

Follow Us:
Download App:
  • android
  • ios