Asianet Suvarna News Asianet Suvarna News

ಜುಲೈ 22ರಿಂದ ಸಂಸತ್ ಹೊರಭಾಗದಲ್ಲಿ ಬೃಹತ್ ರೈತ ಪ್ರತಿಭಟನೆ; ಪೊಲೀಸರಿಗೆ ಶುರುವಾಯ್ತು ಟೆನ್ಶನ್!

  • ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಚುರುಕುಗೊಳಿಸಿದ ರೈತ ಸಂಘಟನೆ
  • ಅಧಿವೇಶನದ ವೇಳೆ ಸಂಸತ್ ಹೊರಭಾಗದಲ್ಲಿ ಪ್ರತಿಭಟನೆಗೆ ಕರೆ
  • ಜುಲೈ 22ರಿಂದ ಬೃಹತ್ ಪತಿಭಟನೆಗೆ ಮುಖಂಡ ರಾಕೇಶ್ ಟಿಕಾಯತ್ ಕರೆ
Farmer Union planned protest outside Parliament on July 22 against farm law ckm
Author
Bengaluru, First Published Jul 17, 2021, 5:27 PM IST

ನವದೆಹಲಿ(ಜು.17):  ಕೇಂದ್ರ ಸರ್ಕಾರ ತಂದಿರುವ 3 ಕೃಷಿ ಕಾಯ್ದೆ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನಗಳು ಇದೀಗ ಮುಂಗಾರು ಅಧಿವೇಶನ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಟ್ರಾಕ್ಟರ್ ರ್ಯಾಲಿ ಆಯೋಜಿಸಿ ಗಲಭೆಗೆ ಕಾರಣವಾಗಿದ್ದ ರೈತ ಸಂಘಟನೆಗಳು ಇದೀಗ ಸಂಸತ್ ಹೊರಭಾಗದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. 

ಕೆಂಪುಕೋಟೆ ವಶಪಡಿಸಲು ಸಂಚು ನಡೆದಿತ್ತು;ಟ್ರಾಕ್ಟರ್ ರ‍್ಯಾಲಿ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!

ಜುಲೈ 22 ರಿಂದ ಪ್ರತಿಭಟನೆ ಆರಂಭಿಸಲು ಭಾರತೀಯ ಕಿಸಾನ್ ಯೂನಿಯನ್ ಸಂಘಟದ ಮುಖಂಡ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ. ಜುಲೈ 19 ರಿಂದ ಮುಂಗಾರು ಅಧಿವೇಶನ ಆರಂಭಗೊಳ್ಳಲಿದೆ. ಈ ವೇಳೆ ಕೇಂದ್ರದ ಮೇಲೆ ಒತ್ತಡ ತರಲು ರೈತ ಸಂಘಟನೆಗಳು ಮುಂದಾಗಿದೆ. 

ಜುಲೈ 22 ರಿಂದ ಆರಂಭಗೊಳ್ಳಲಿರುವ ಸಂಸತ್ ಹೊರಭಾಗದಲ್ಲಿನ ರೈತ ಪ್ರತಿಭಟನೆ ಮುಂಗಾರು ಅಧಿವೇಶನ ಅಂತ್ಯದವರೆಗೆ ಅಂದರೆ ಆಗಸ್ಟ್ 13ರ ವರೆಗೆ ನಡೆಸಲು ರೈತ ಸಂಘಟನೆ ನಿರ್ಧರಿಸಿದೆ. ರೈತ ಸಂಘಟನೆಗಳ ನಿರ್ಧಾರ ಇದೀಗ ದೆಹಲಿ ಪೊಲೀಸರಿಗೆ ತಲೆನೋವಾಗಿದೆ. 

ಟ್ರ್ಯಾಕ್ಟರ್ ರ‍್ಯಾಲಿ ಬಳಿಕ ಸಂಸತ್ ಚಲೋ ರ‍್ಯಾಲಿಗೆ ಸಜ್ಜಾದ ರೈತ ಸಂಘಟನೆ!

ನಾಳೆ(ಜು.18) ದೆಹಲಿ ಹಿರಿಯ ಪೊಲೀಸ್ ಅಧಿಕಾರಿಗಳು ರೈತ ಮುಖಂಡರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಪ್ರತಿಭಟನೆ ಸ್ಥಳ ಬದಲಾಯಿಸಲು ಸೂಚಿಸಲಿದ್ದಾರೆ. ಭದ್ರತೆಯ ಕಾರಣದಿಂದ ಸಂಸತ್ ಹೊರಭಾಗದಲ್ಲಿ ಪ್ರತಿಭಟನೆ ಅಸಾಧ್ಯವಾಗಿದೆ. ಹೀಗಾಗಿ ಸ್ಥಳ ಬದಲಿಸುವಂತೆ ದೆಹಲಿ ಪೊಲೀಸರು ಸೂಚಿಸಿದ್ದಾರೆ. 
 

Follow Us:
Download App:
  • android
  • ios