ಗೃಹ ಉಳಿಸಿಕೊಂಡ ಶಾ, ಮೋದಿ 3.0 ಸಂಪುಟದ ಸಚವರಿಗೆ ಖಾತೆ ಹಂಚಿಕೆ; ಯಾರು ಯಾವ ಮಂತ್ರಿ!
ನರೇಂದ್ರ ಮೋದಿ 3.O ಸರ್ಕಾರದಲ್ಲಿ 72 ಸಚಿವರು ಪ್ರಮಾಣವಚನ ಸ್ವೀಕರಿಸಿ ಸಂಪುಟ ಸೇರಿಕೊಂಡಿದ್ದರು. ಇದೀಗ ಎಲ್ಲಾ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ನವದೆಹಲಿ(ಜೂ.10) ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ರಚನೆಯಾಗಿದೆ. ಭಾನುವಾರ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮೋದಿ ಜೊತೆಗೆ 71 ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ನಿತಿನ್ ಗಡ್ಕರಿಗೆ ತಮ್ಮ ರಸ್ತೆ ಹಾಗೂ ಸಾರಿಗೆ ಸಚಿವಾಲಯ ಖಾತೆಯನ್ನು ಉಳಿಸಿಕೊಂಡಿದ್ದಾರೆ. ಇನ್ನು ಎಸ್ ಜೈಶಂಕರ್ ತಮ್ಮ ವಿದೇಶಾಂಗ ಸಚಿವ ಖಾತೆ ಉಳಿಸಿಕೊಂಡಿದ್ದಾರೆ. ಗೃಹ ಖಾತೆಯಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಅಮಿತ್ ಶಾ ಈ ಬಾರಿಯೂ ಗೃಹ ಸಚಿವರಾಗಿ ಮುಂದುವರಿಯಲಿದ್ದಾರೆ.
ರಾಜನಾಥ್ ಸಿಂಗ್‌ಗೆ ಕಳೆದ ಬಾರಿಯಂತೆ ಈ ಬಾರಿಯೂ ರಕ್ಷಣಾ ಖಾತೆ ನೀಡಲಾಗಿದೆ. ಅಶ್ವಿನಿ ವೈಷ್ಣವ್‌ಗೆ ಮಾಹಿತಿ ಹಾಗೂ ತಂತ್ರಜ್ಞಾನ ಖಾತೆ ಜೊತೆಗೆ ರೈಲ್ವೇ ಖಾತೆ ನೀಡಲಾಗಿದೆ. ನಿರ್ಮಾಲಾ ಸೀತಾರಾಮನ್‌ಗೆ ಎರಡನೇ ಬಾರಿಗೆ ಹಣಕಾಸು ಖಾತೆ ಹಂಚಿಕೆ ಮಾಡಲಾಗಿದೆ. ಮನೋಹರ್ ಲಾಲ್ ಖಟ್ಟರ್‌ಗೆ ಇಂಧನ ಹಾಗೂ ವಸತಿ ಖಾತೆ ನೀಡಲಾಗಿದೆ. ಜೆಪಿ ನಡ್ಡಾಗೆ ಆರೋಗ್ಯ ಖಾತೆ ನೀಡಲಾಗಿದೆ. ಪಿಯೂಷ್ ಗೋಯೆಲ್‌ಗೆ ವಾಣಿಜ್ಯ ಖಾತೆ ನೀಡಲಾಗಿದೆ. ಧರ್ಮೇಂದ್ರ ಪ್ರಧಾನ್‌ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ನೀಡಲಾಗಿದೆ. ಮಾನ್ಸುಕ್ ಮಾಂಡವಿಯಾಗೆ ಕಾರ್ಮಿಕ ಸಚಿವಾಲಯ ಖಾತೆ ನೀಡಲಾಗಿದೆ. ಶಿವರಾಜ್ ಸಿಂಗ್‌ಗೆ ಕೃಷಿ ಖಾತೆ ನೀಡಲಾಗಿದೆ. ಶೋಭಾ ಕರಂದ್ಲಾಜೆಗೆ ಸಣ್ಣ ಮತ್ತು ಅತೀ ಸೂಕ್ಷ್ಮ ಕೈಗಾರಿಕೆ ರಾಜ್ಯ ಖಾತೆ ಹಂಚಿಕೆ ಮಾಡಲಾಗಿದೆ.
ಮೋದಿ ಪ್ರಧಾನಿಯಾದ ಮೊದಲ ದಿನವೇ ರೈತರ ಖಾತೆಗೆ 20,000 ಕೋಟಿ ರೂ ಹಣ ಜಮೆ!
ಹೆಚ್‌ಡಿ ಕುಮಾರಸ್ವಾಮಿಗೆ ಉಕ್ಕ ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಲಾಗಿದೆ. ಅನ್ನಪೂರ್ಣ ದೇವಿಗೆ ಮಹಿಳಾ ಮತ್ತು ಕಲ್ಯಾಣ ಇಲಾಖೆ ನೀಡಲಾಗಿದೆ. ನರೇಂದ್ರ ಮೋದಿ 2.0 ಸರ್ಕಾರದಲ್ಲಿ ಪ್ರಮುಖ ಖಾತೆ ನಿರ್ವಹಿಸಿದ ಸಚಿವರಿಗೆ ಅದೇ ಖಾತೆ ಹಂಚಿಕೆ ಮಾಡಲಾಗಿದೆ. ಪ್ರಮುಖ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸಾರಿಗೆ ಹೆದ್ದಾರಿ ರಾಜ್ಯ ಖಾತೆಯನ್ನು ಇಬ್ಬರಿಗೆ ಹಂಚಲಾಗಿದೆ. ಹರ್ಷ ಮಲ್ಹೋತ್ರ ಹಾಗೂ ಅಜಯ್ ತಮ್ತಾ ಇಬ್ಬರಿಗೆ ಸಾರಿಗೆ ಹೆದ್ದಾರಿ ಖಾತೆ ಹಂಚಲಾಗಿದೆ.
ಕ್ಯಾಬಿನೆಟ್ ಮಂತ್ರಿಗಳು
ರಾಜ್ ನಾಥ್ ಸಿಂಗ್: ರಕ್ಷಣಾ ಖಾತೆ
ಅಮಿತ್ ಶಾ: ಗೃಹ ಖಾತೆ
ನಿತಿನ್ ಗಡ್ಕರಿ: ರಸ್ತೆ ಹೆದ್ದಾರಿ ಖಾತೆ
ಜೆಪಿ ನಡ್ಡಾ: ಆರೋಗ್ಯ ಖಾತೆ, ರಾಸಾಯನಿಕ ಹಾಗೂ ರಸಗೊಬ್ಬರ
ಶಿವರಾಜ್ ಸಿಂಗ್ ಚೌಹಾಣ್: ಕೃಷಿ ಖಾತೆ, ಗ್ರಾಮೀಣ ಅಭಿವೃದ್ಧಿ
ನಿರ್ಮಲಾ ಸೀತಾರಾಮನ್: ಹಣಕಾಸು, ಕಾರ್ಪೋರೇಟ್ ಅಫೈರ್ಸ್
ಡಾ.ಸುಬ್ರಹ್ಮಣ್ಯಂ ಜೈಶಂಕರ್: ವಿದೇಶಾಂಗ
ಮನೋಹರ್ ಲಾಲ್: ಇಂಧನ ಹಾಗೂ ವಸತಿ ಖಾತೆ
ಹೆಚ್ ಡಿ ಕುಮಾರಸ್ವಾಮಿ: ಉಕ್ಕು ಮತ್ತು ಬೃಹತ್ ಕೈಗಾರಿಕೆ
ಪಿಯೂಷ್ ಗೋಯಲ್: ವಾಣಿಜ್ಯ ಖಾತೆ
ಧರ್ಮೇಂದ್ರ ಪ್ರಧಾನ್: ಶಿಕ್ಷಣ
ಜಿತನ್ ರಾಮ್ ಮಾಂಝಿ: ಸಣ್ಣ ಮತ್ತು ಅತೀ ಸೂಕ್ಷ್ಮ ಕೈಗಾರಿಕೆ
ರಾಜೀವ್ ರಂಜನ್ ಸಿಂಗ್ : ಪಶುಸಂಗೋಪನೆ ಮತ್ತು ಮೀನುಗಾರಿಕೆ
ಸರ್ಬಾನಂದ ಸೋನೋವಾಲ್: ಬಂದರು
ವೀರೇಂದ್ರ ಕುಮಾರ್ ಡಾ: ಸಾಮಾಜಿಕ ನ್ಯಾಯ ಖಾತೆ
ರಾಮಮೋಹನ್ ನಾಯ್ಡು: ನಾಗರೀಕ ವಿಮಾನಯಾನ
ಪ್ರಲ್ಹಾದ ಜೋಶಿ: ಆಹಾರ ಮತ್ತು ಗ್ರಾಹಕ ವ್ಯವಹಾರ, ನವೀಕರಿಸಬಹುದಾದ ಇಂಧನ
ಜುಯಲ್ ಓರಮ್: ಬುಡಕಟ್ಟು ಖಾತೆ
ಗಿರಿರಾಜ್ ಸಿಂಗ್: ಜವಳಿ
ಅಶ್ವಿನಿ ವೈಷ್ಣವ್: ರೈಲ್ವೇ , ಮಾಹಿತಿ ಮತ್ತು ಪ್ರಸಾರ, ಮಹಾತಿ ಮತ್ತು ತಂತ್ರಜ್ಞಾನ
ಜ್ಯೋತಿರಾದಿತ್ಯ ಸಿಂಧಿಯಾ: ಟೆಲಿಕಾಂ ಖಾತೆ
ಭೂಪೇಂದರ್ ಯಾದವ್: ಪರಿಸರ
ಗಜೇಂದ್ರ ಸಿಂಗ್ ಶೇಖಾವತ್: ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಖಾತೆ
ಅನ್ನಪೂರ್ಣ ದೇವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ
ಕಿರಣ್ ರಿಜಿಜು: ಸಂಸದೀಯ ವ್ಯವಹಾರ
ಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂ
ಡಾ. ಮನ್ಸುಖ್ ಮಾಂಡವಿಯಾ: ಕಾರ್ಮಿಕ, ಯುವಜನ ಮತ್ತು ಕ್ರೀಡಾ ಖಾತೆ
ಜಿ. ಕಿಶನ್ ರೆಡ್ಡಿ: ಕಲ್ಲಿದ್ದಲು ಖಾತೆ
ಚಿರಾಗ್ ಪಾಸ್ವಾನ್: ಆಹಾರ ಖಾತೆ
ಆರ್ ಪಾಟೀಲ್: ಜಲ ಶಕ್ತಿ
ಎನ್‌ಡಿಎ ಅಂದ್ರೆ ನರೇಂದ್ರ ಡಿಸ್ಟ್ರಕ್ಟಿವ್ ಅಲಯನ್ಸ್: ಕಾಂಗ್ರೆಸ್‌ನ ಜೈರಾಮ್ ರಮೇಶ್ ಟೀಕೆ
ರಾಜ್ಯ ಖಾತೆ ಸಚಿವರು (ಸ್ವತಂತ್ರ ಉಸ್ತುವಾರಿ)
ರಾವ್ ಇಂದ್ರಜಿತ್ ಸಿಂಗ್: ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ರಾಜ್ಯ ಖಾತೆ, ಯೋಜನಾ ಖಾತೆ
ಡಾ. ಜಿತೇಂದ್ರ ಸಿಂಗ್ : ವಿಜ್ಞಾನ ಹಾಗೂ ತಂತ್ರಜ್ಞಾನ ರಾಜ್ಯ ಖಾತೆ
ಅರ್ಜುನ್ ರಾಮ್ ಮೇಘವಾಲ್: ಕಾನೂನು ಹಾಗೂ ನ್ಯಾಯ, ಸಂಸದೀಯ ವ್ಯವಾಹರ
ಜಾಧವ ಪ್ರತಾಪ್ರಾವ್ ಗಣಪತರಾವ್:ಆಯುಷ್ ಹಾಗೂ ಆರೋಗ್ಯ
ಜಯಂತ್ ಚೌಧರಿ: ಕೌಶಾಲ್ಯಾಭಿವೃದ್ಧಿ, ಶಿಕ್ಷಣ
ರಾಜ್ಯ ಖಾತೆ ಸಚಿವರು
ಜಿತಿನ್ ಪ್ರಸಾದ್: ವಾಣಿಜ್ಯ ಕೈಗಾರಿಕೆ, ಎಲೆಕ್ಟ್ರಾನಿಕ್ಸ್ ಮಾಹಿತಿ ತಂತ್ರಜ್ಞಾನ
ಶ್ರೀಪಾದ್ ನಾಯ್ಕ್:ಇಂಧನ, ನವೀಕರಿಸಬಹುದಾದ ಇಂಧನ ಖಾತೆ
ಪಂಕಜ್ ಚೌಧರಿ: ಹಣಕಾಸು
ಕೃಷ್ಣ ಪಾಲ್: ವ್ಯವಾಹಾರ
ರಾಮದಾಸ್ ಅಠವಳೆ: ಸಾಮಾಜಿಕ ನ್ಯಾಯ
ರಾಮ್ ನಾಥ್ ಠಾಕೂರ್: ಕೃಷಿ ಹಾಗೂ ರೈತರ ಅಭಿವೃದ್ಧಿ
ನಿತ್ಯಾನಂದ ರೈ: ಗೃಹ ಖಾತೆ
ಅನುಪ್ರಿಯಾ ಪಟೇಲ್: ಆರೋಗ್ಯ ಹಾಗೂ ಕೌಟಿಂಬಿಕ ಕಲ್ಯಾಣ, ರಾಸಾಯನಿಕ ಹಾಗೂ ರಸಗೊಬ್ಬರ
ವಿ.ಸೋಮಣ್ಣ:ಜಲ ಶಕ್ತಿ ಹಾಗೂ ರೈಲ್ವೇ
ಚಂದ್ರಶೇಖರ್ ಪೆಮ್ಮಸಾನಿ: ಗ್ರಾಮೀಣ ಅಭಿವೃದ್ಧಿ, ಸಂವಹನ
ಎಸ್.ಪಿ.ಸಿಂಗ್ ಬಘೇಲ್: ಮೀನುಗಾರಿಗೆ, ಪಶು ಸಂಗೋಪನೆ
ಶೋಭಾ ಕರಂದ್ಲಾಜೆ: ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆ, ಕಾರ್ಮಿಕ
ಕೀರ್ತಿವರ್ಧನ್ ಸಿಂಗ್: ಪರಿಸರ, ಹವಾಮಾನ ಬದಲಾವಣೆ, ವಿದೇಶಾಂಗ ಖಾತೆ
ಬಿ ಎಲ್ ವರ್ಮಾ: ಆಹಾರ ನಾಗರೀಕರ ಸರಬರಾಜು, ವ್ಯವಹಾರ, ಸಾಮಾಜಿಕ ನ್ಯಾಯ
ಶಂತನು ಠಾಕೂರ್: ಬಂದರು ಹಾಗೂ ಜಸಸಾರಿಗೆ
ಸುರೇಶ್ ಗೋಪಿ: ಸಂಸ್ಕೃತಿ ಹಾಗೂ ಪ್ರವಾಸೋದ್ಯಮ, ಪೆಟ್ರೋಲಿಯಂ ಗ್ಯಾಸ್
ಡಾ.ಎಲ್.ಮುರುಗನ್: ಮಾಹಿತಿ ಪ್ರಸಾರ, ಸಂಸದೀಯ ವ್ಯವಹಾರ
ಅಜಯ್ ತಮ್ತಾ: ಸಾರಿಗೆ ಹೆದ್ದಾರಿ ರಾಜ್ಯ ಖಾತೆ
ಬಂಡಿ ಸಂಜಯ್ ಕುಮಾರ್: ಹೋಮ್ ಅಫೈರ್ಸ್
ಕಮಲೇಶ್ ಪಾಸ್ವಾನ್: ಗ್ರಾಮೀಣ ಅಭಿವೃದ್ಧಿ
ಭಗೀರಥ ಚೌಧರಿ: ಕೃಷಿ , ರೈತ ಕಲ್ಯಾಣ
ಸತೀಶ್ ಚಂದ್ರ ದುಬೆ: ಕಲ್ಲಿದ್ದಲ್ಲು ಗಣಿ
ಸಂಜಯ್ ಸೇಠ್: ರಕ್ಷಣಾ
ರವನೀತ್ ಸಿಂಗ್ : ರೈಲ್ವೇ, ಫುಡ್ ಪ್ರೊಸೆಸಿಂಗ್
ದುರ್ಗಾದಾಸ್ ಯುಕೆ: ಬಡುಕಟ್ಟು ರಾಜ್ಯ ಖಾತೆ
ರಕ್ಷಾ ನಿಖಿಲ್ ಖಡ್ಸೆ: ಯುವಜನ ಕ್ರೀಡಾ ಖಾತೆ
ಸುಕಾಂತ ಮಜುಂದಾರ್: ಶಿಕ್ಷಣ, ಈಶಾನ್ಯ ರಾಜ್ಯ ಅಭಿವೃದ್ಧಿ
ಸಾವಿತ್ರಿ ಠಾಕೂರ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ
ತೋಖಾನ್ ಸಾಹು: ವಸತಿ
ರಾಜ್ ಭೂಷಣ ಚೌಧರಿ: ಜಲ ಶಕ್ತಿ
ಭೂಪತಿ ರಾಜು ಶ್ರೀನಿವಾಸ ವರ್ಮ: ಉಕ್ಕು ಬೃಹತ್ ಕೈಗಾರಿಕೆ
ಹರ್ಷ್ ಮಲ್ಹೋತ್ರಾ: ಸಾರಿಗೆ ಹೆದ್ದಾರಿ ರಾಜ್ಯ ಖಾತೆ
ನಿಮುಬೇನ್ ಜಯಂತಿಭಾಯ್ ಬಮ್ಭಾನಿಯಾ: ಆಹಾರ ನಾಗರೀಕರ ಸರಬರಾಜು
ಮುರಳೀಧರ ಮೊಹೋಲ್: ವಿಮಾನಯಾನ
ಜಾರ್ಜ್ ಕುರಿಯನ್: ಅಲ್ಪ ಸಂಖ್ಯಾತ
ಪಬಿತ್ರಾ ಮಾರ್ಗರಿಟಾ: ಜವಳಿ, ವಿದೇಶಾಂಗ ರಾಜ್ಯ ಖಾತೆ