ನವೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರವು ಬರ ಪರಿಹಾರ ನಿಧಿ ಬಿಡುಗಡೆ ಕುರಿತು ಪ್ರಧಾನಿಯವರೊಂದಿಗೆ ಚರ್ಚಿಸಲು ಸರ್ವಪಕ್ಷ ನಿಯೋಗದ ಭೇಟಿಗೆ ಸಮಯಾವಕಾಶ ಕೇಳಲಿದೆ. ಜೊತೆಗೆ ಇತ್ತೀಚಿನ ಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆಯೂ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮುಂದಿನ ತಿಂಗಳು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ನವೆಂಬರ್ 15ರಂದು ಬೆಂಗಳೂರಿಗೆ ಪ್ರಧಾನಿಗಳು ಆಗಮಿಸಲಿದ್ದು, ಪಿಂಕ್ ಮೆಟ್ರೋ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೂ ಇವರ ಪಿಂಕ್ ಮೆಟ್ರೋ ಸಂಚಾರಕ್ಕೆ ಕೌಂಡ್ ಡೌನ್ ಶುರುವಾಗಿದೆ.
ಪಿಂಕ್ ಮೆಟ್ರೋ ಮಾರ್ಗ ಕಾಳೇನ ಅಗ್ರಹಾರ ದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗವೂ ಒಟ್ಟು ಉದ್ದ ಸುಮಾರು 21.25 ಕಿ.ಮೀ ಇದ್ದು, ಒಟ್ಟು 18 ನಿಲ್ದಾಣಗಳಿದೆ. ಸದ್ಯ 7.5 ಕಿ.ಮೀ. ಎತ್ತರಿಸಿದ (Elevated) ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಈ ಎಲಿವೇಟೆಡ್ ಮೆಟ್ರೋ ಮಾರ್ಗವನ್ನು ಪ್ರಧಾನಿಗಳು ಉದ್ಘಾಟನೆ ಮಾಡಲಿದ್ದಾರೆ. ಉಳಿದ 13.76 ಕಿ.ಮೀ. ಭೂಗತ ಸುರಂಗ ಮಾರ್ಗ ಕಾಮಗಾರಿಯಲಿದ್ದು, ಈ ಮಾರ್ಗ ಮುಂದಿ ವರ್ಷ ಉದ್ಘಾಟನೆ ಆಗುವ ಸಾಧ್ಯತೆ ಇದೆ. ಡೈರಿ ಸರ್ಕಲ್ನಿಂದ ನಾಗವಾರ, ಶಿವಾಜಿನಗರ ಹಾಗೂ ಕಂಟೋನ್ಮೆಂಟ್ ಮೂಲಕ ನಾಗವಾರ ವರೆಗೂ ಸಂಪರ್ಕ ಕಲ್ಪಿಸಲಿದೆ.
ನಮ್ಮ ಮೆಟ್ರೋ ದಾಖಲೆ
ಪಿಂಕ್ ಲೈನ್ ಉದ್ಘಾಟನೆ ಮೂಲಕ ನಮ್ಮ ಮೆಟ್ರೋ ಸಂಚಾರದ ಒಟ್ಟು ಕಾರ್ಯಾಚರಣೆಯ ಉದ್ದ 100 km ದಾಟಲಿದೆ. ಸದ್ಯ 96.1 ಕಿಮೀ ಮೆಟ್ರೋ ಮಾರ್ಗ ಇದ್ದು, ಪಿಂಕ್ ಮೆಟ್ರೋ ಮಾರ್ಗ ಉದ್ಘಾಟನೆ ಮೂಲಕ ಮೆಟ್ರೋ ಜಾಲ 100 ಕಿಮೀ ಉದ್ದದಾಟಲಿದೆ. ದೆಹಲಿ ಬಿಟ್ಟರೆ ದೇಶದ 2ನೇ ಅತೀ ಉದ್ದ ಮೆಟ್ರೋ ಮಾರ್ಗ ಎಂಬ ಹೆಗ್ಗಳಿಕೆಯನ್ನು ನಮ್ಮ ಮೆಟ್ರೋ ಪಡೆದುಕೊಳ್ಳಲಿದೆ.
ಈ ಬಗ್ಗೆ ಮಾತನಾಡಿರುವ ಸಚಿವ ಕೃಷ್ಣಬೈರೆಗೌಡ ಹೇಳಿಕೆ ಅವರು, ಬೆಂಗಳೂರು ಜನರಿಗೆ ಗುಡ್ ನ್ಯೂಸ್ ಇದೆ. ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ ಶೀಘ್ರವೇ ಆಗಲಿದೆ. ಉದ್ಘಾಟನಾ ಸಮಾರಂಭಕ್ಕೆ ಯಾರು ಬರ್ತಾರೆ ಗೊತ್ತಿಲ್ಲ. ಕೇಂದ್ರ ಸಚಿವರ ಭೇಟಿಗೆ ಅವಕಾಶ ಕೇಳಿದ್ದೇವೆ. ನವೆಂಬರ್ ಮಧ್ಯ ಭಾಗದಲ್ಲಿ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಯೇ ಸರ್ವ ಪಕ್ಷ ನಿಯೋಗ ಭೇಟಿಯಾಗಲು ಮೋದಿಗೆ ಮನವಿ
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಅವರು, ಬರ ಪರಿಹಾರ ಹಣ ವಿಳಂಬ ಆಗುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದರು. ರೈತರ ಖಾತೆಗಳಿಗೆ ಪರಿಹಾರ ಹಣ ನೇರವಾಗಿ ಹೋಗುತ್ತೆ, ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಹಣ ಸಂದಾಯ ಮಾಡಲು ಅಕೌಂಟ್ ಗಳೆಲ್ಲವೂ ಟ್ಯಾಲಿ ಆಗಬೇಕಿದೆ. ಈಗಾಗಲೇ ಹಣ ಬಿಡುಗಡೆ ಮಾಡಿದ್ದೇವೆ. ಈ ಬಗ್ಗೆ ಸರ್ಕಾರ ಆದೇಶವನ್ನೂ ಹೊರಡಿಸಿದೆ. ಕೇಂದ್ರಕ್ಕೆ ತಂಡ ಕೊಂಡೊಯ್ಯಲು ವಿಚಾರ ಮಾಡುತ್ತಿದ್ದೇವೆ. ನವೆಂಬರ್ 1ರವರೆಗೆ ಕಾಯುತ್ತೇವೆ ಅವರು ಸಮಯ ಕೊಡ್ತಾರಾ ನೋಡೋಣ, ಪ್ರಧಾನಿ ಮಂತ್ರಿಗಳು ನವೆಂಬರ್ 15ಕ್ಕೆ ಬೆಂಗಳೂರಿಗೆ ಬರ್ತಿದ್ದಾರೆ. ಇಲ್ಲೇ ಅವರ ಸಮಯಾವಕಾಶ ಕೇಳುತ್ತೇನೆ. ಮೆಟ್ರೋ ವಿಚಾರವಾಗಿ ಬೆಂಗಳೂರಿಗೆ ಮೋದಿಯವರು ಬರ್ತಿದ್ದಾರೆ. ಇಲ್ಲೇ ಸರ್ವ ಪಕ್ಷ ನಿಯೋಗ ಭೇಟಿಯಾಗಲು ಪ್ರಧಾನಿಗೆ ಸಮಯ ಕೇಳುತ್ತೇನೆ, ಬರಪರಿಹಾರ ಕೊಡಿ ಅಂತ ಮನವಿ ಮಾಡುತ್ತೇವೆ ಎಂದು ಹೇಳಿದರು.
ಇನ್ನು, ಪರಿಷತ್ ಚುನಾವಣೆಯ ಫಲಿತಾಂಶವನ್ನು ಗೌರವದಿಂದ ಸ್ವೀಕಾರ ಮಾಡುತ್ತೇವೆ ಎಂದು ಹೇಳಿರುವ ಸಿಎಂ, ಸೋಲಿನ ಪರಾಮರ್ಶೆ ಮಾಡುತ್ತೇವೆ. ಸರಿಪಡಿಸಿಕೊಳ್ಳುವ ಕೆಲಸ ಮಾಡ್ತೇವೆ. ಬಿಜೆಪಿ-ಜೆಡಿಎಸ್ ಇದನ್ನು ಮುಂದಿನ ಚುನಾವಣೆ ದಿಕ್ಸೂಚಿ ಅಂತಾರೆ. ಚನ್ನಪಟ್ಟಣ ಹಾಗೂ ಶಿಗ್ಗಾಂವ್ ಫಲಿತಾಂಶ ಏನು ಹಾಗಾದ್ರೆ? ನಮಗೆ ಬ್ಯಾಲೇಟ್ ಪೇಪರ್ ಬೇಕು. ಸಾಕಷ್ಟು ಸಮಸ್ಯೆಗಳಿವೆ . ಹೊಸ ಯೋಜನೆಗಳೊಂದಿಗೆ ನಮ್ಮ ಪಕ್ಷ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.






