Andhra Pradesh semiconductor policy ಆಂಧ್ರಪ್ರದೇಶ ಸರ್ಕಾರವು ಹೊಸ 'ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಫ್ಯಾಬ್ ನೀತಿ 4.0' ಅನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಫ್ಯಾಬ್‌ಗಳಿಗೆ ಶೇ. 80ರಷ್ಟು ಸಬ್ಸಿಡಿ ಒದಗಿಸಲಾಗುತ್ತಿದ್ದು, ತಿರುಪತಿಯಲ್ಲಿ 5000 ಎಕರೆ ಪ್ರದೇಶದಲ್ಲಿ ವಿಶೇಷ ಪಾರ್ಕ್ ನಿರ್ಮಾಣ.

ಅಮರಾವತಿ: ಭಾರತದಲ್ಲಿ ಸೆಮಿಕಂಡಕ್ಟರ್ ಸೆಕ್ಟರ್‌(semiconductor sector)ಗೆ ಬಲ ತುಂಬಲು ಆಂಧ್ರಪ್ರದೇಶ ಸರ್ಕಾರ(Andhra pradesh Government) ಇದೀಗ ಹೊಸ 'ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಫ್ಯಾಬ್ ನೀತಿ 4.0'(Semiconductor and Display Fab Policy 4.0) ಅನ್ನು ತಂದಿದೆ. ಇದರ ಭಾಗವಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಕುರಿತಂತೆ ರಾಜ್ಯ ಐಟಿ ಸಚಿವ ನಾರಾ ಲೋಕೇಶ್(IT Minister Nara Lokesh) ಅವರು ಎಕ್ಸ್ ಪ್ಲಾಟ್‌ಫಾರ್ಮ್‌ ಹಂಚಿಕೊಂಡಿದ್ದಾರೆ. 'ಈ ಹೊಸ ನೀತಿಯಡಿ, ಸೆಮಿಕಂಡಕ್ಟರ್ ಫ್ಯಾಬ್‌ಗಳು ಶೇಕಡಾ 80 ರಷ್ಟು ಕ್ಯಾಪಿಟಲ್ ಸಪೋರ್ಟ್ ಪಡೆಯುತ್ತವೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರದ 'ISM ಸೆಮಿಕಾನ್ 2.0' ಯೋಜನೆಯಡಿಯಲ್ಲಿ 100 ಪ್ರತಿಶತ ಅನುದಾನ ಆಂಧ್ರಪ್ರದೇಶ ಸರ್ಕಾರವು ನೀಡುತ್ತದೆ ಎಂದು ಹೇಳಿದ್ದಾರೆ.

ಐಟಿ ಸಚಿವ ಚಿವ ನಾರಾ ಲೋಕೇಶ್ ಎಕ್ಸ್ ಖಾತೆಯಲ್ಲಿ ಏನಿದೆ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪ್ರೋತ್ಸಾಹದೊಂದಿಗೆ ಸಿಲಿಕಾನ್ ಫ್ಯಾಬ್‌ಗಳಿಗೆ ಶೇ. 80 ರಷ್ಟು ಸಬ್ಸಿಡಿ ಮತ್ತು Compound, Photonics, Sensor, Display ಮತ್ತು ಮುಂದುವರಿದ ಪ್ಯಾಕೇಜಿಂಗ್ ಘಟಕಗಳಿಗೆ ಶೇ. 70 ರಷ್ಟು ಸಬ್ಸಿಡಿ ಸಿಗಲಿದೆ ಎಂದು ಸಚಿವ ನಾರಾ ಲೋಕೇಶ್ ವಿವರಿಸಿದ್ದಾರೆ. ಆ ಮೂಲಕ ಆಂಧ್ರಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಪ್ರೋತ್ಸಾಹ ನೀಡುವ ರಾಜ್ಯವಾಗಿ ಹೊರಹೊಮ್ಮಿದ್ದು, ಒಡಿಶಾ, ತಮಿಳುನಾಡು (ಶೇ. 65), ಉತ್ತರ ಪ್ರದೇಶ, ಮಧ್ಯಪ್ರದೇಶ (ಶೇ. 60) ಮತ್ತು ಗುಜರಾತ್ (ಶೇ. 56) ರಾಜ್ಯಗಳನ್ನು ಹಿಂದಿಕ್ಕಿದೆ ಎಂದು ಲೋಕೇಶ್ ಹೇಳಿದರು.

Scroll to load tweet…

ತಿರುಪತಿಯತಿಯಲ್ಲಿ 5000 ಎಕರೆ ಪ್ರದೇಶದಲ್ಲಿ ವಿಶೇಷ ಸೆಮಿ ಕಂಡಕ್ಟರ್ ಪಾರ್ಕ್!

ತಿರುಪತಿಯಲ್ಲಿ 5,000 ಎಕರೆ ಪ್ರದೇಶದಲ್ಲಿ ವಿಶೇಷ ಎಪಿ ಸೆಮಿಕಂಡಕ್ಟರ್ ಪಾರ್ಕ್ ಅನ್ನು ಸ್ಥಾಪಿಸಲಾಗುವುದು ಎಂದು ನಾರಾ ಲೋಕೇಶ್ ಘೋಷಿಸಿದ್ದಾರೆ. ಇದು ಹೂಡಿಕೆದಾರರಿಗೆ ಸಂಪೂರ್ಣ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸುತ್ತದೆ. ಕ್ಲೀನ್‌ರೂಮ್‌ಗಳು, ನಿರಂತರ ಹೈ-ವೋಲ್ಟೇಜ್ ವಿದ್ಯುತ್, ಅಲ್ಟ್ರಾಪ್ಯೂರ್ ನೀರು, ವಿಶೇಷ ಅನಿಲಗಳು, Testing Laboratories ಮತ್ತು ಲಾಜಿಸ್ಟಿಕ್ಸ್ ಸೌಲಭ್ಯ ಸೇರಿದಂತೆ ಇದನ್ನೊಂದು ಪೂರ್ಣ ಪ್ರಮಾಣದ ಚೈನ್ ಕ್ಲಸ್ಟರ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಈ ನೀತಿಯು ಚಿಪ್ ವಿನ್ಯಾಸ, ಯಂತ್ರೋಪಕರಣಗಳು, ವಸ್ತುಗಳು, ಫ್ಯಾಬ್‌ಗಳು, ATMP/OSAT, R&D ಸೇರಿದಂತೆ ಎಲ್ಲಾ 10 ಸೆಮಿಕಾನ್ 2.0 ವಲಯಗಳಿಗೆ ಅನ್ವಯಿಸುತ್ತದೆ.

ವಿನ್ಯಾಸ ಸ್ಟಾರ್ಟ್‌ಅಪ್‌ಗಳು, ಆರ್ & ಡಿ ಮತ್ತು ಟ್ಯಾಲೆಂಟ್ ಸ್ಕೀಂಗಳಿಗೆ ಆಂಧ್ರ ಪ್ರದೇಶ ಸರ್ಕಾರವು 22.5 ಕೋಟಿ ರೂ.ಗಳವರೆಗೆ ಹಣಕಾಸು ಸೌಲಭ್ಯ ನೀಡುತ್ತದೆ. ಅಂದರೆ ಯೋಜನಾ ವೆಚ್ಚದ 25 ಪ್ರತಿಶತವನ್ನು ಒದಗಿಸುತ್ತದೆ. ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ Andhra Pradesh Semiconductor Growth and Innovation Council ಮೂಲಕ ಹೂಡಿಕೆದಾರರು ಒಂದೇ ಸಮಯಕ್ಕೆ ಅನುಮೋದನೆ ಪಡೆಯುತ್ತಾರೆ. ಐಐಟಿ ತಿರುಪತಿಯಲ್ಲಿ ಫೋಟೊನಿಕ್ಸ್ ಮೇಲೆ ವಿಶೇಷ ಗಮನ ಹರಿಸಿ ಹೊಸ ಸಂಶೋಧನಾ ಕೇಂದ್ರವನ್ನು ತೆರೆಯಲಾಗುವುದು ಎಂದು ಹೇಳಿದ್ದಾರೆ.

ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ನಾರಾ ಲೋಕೇಶ್

ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಈ ಉದ್ಯಾನವನದಲ್ಲಿ 'ಎಪಿ ಸೆಮಿಕಂಡಕ್ಟರ್ ತರಬೇತಿ ಕೇಂದ್ರ'ವನ್ನು ಸ್ಥಾಪಿಸಲಾಗುತ್ತಿದೆ ಎಂದು ಲೋಕೇಶ್ ಹೇಳಿದರು. ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಸಹಭಾಗಿತ್ವದಲ್ಲಿ ವಿನ್ಯಾಸಗೊಳಿಸಲಾದ ಪಠ್ಯಕ್ರಮದೊಂದಿಗೆ ಇಲ್ಲಿ ತರಬೇತಿ ನೀಡಲಾಗುವುದು. ತರಬೇತಿ ಪಡೆಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೆ 6 ತಿಂಗಳವರೆಗೆ ತಿಂಗಳಿಗೆ 10,000 ರೂ. ಸ್ಟೈಫಂಡ್ ನೀಡಲಾಗುವುದು ಎಂದು ಹೇಳಿದರು ಇದೇ ವೇಳೆ ಹೂಡಿಕೆದಾರರು ಮುಂದೆ ಬಂದು ತಮ್ಮೊಂದಿಗೆ ಕೆಲಸ ಮಾಡುವಂತೆ ನಾರಾ ಲೋಕೇಶ್ ಕರೆ ನೀಡಿದರು