ಪ್ರಧಾನಿ ಮೋದಿ ಭೇಟಿಯಾಗಿ 50 ನಿಮಿಷ ಮಾತಕತೆ ನಡೆಸಿದ NCP ಮುಖ್ಯಸ್ಥ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸತತ ಸಭೆಗಳ ಬಳಿಕ ಮೋದಿ ಭೇಟಿ ಭೇಟಿ ಕುರಿತು ಮಾಹಿತಿ ಹಂಚಿಕೊಂಡ ಶರದ್ ಪವಾರ್

ನವದೆಹಲಿ(ಜು.17): ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದ NCP ಮುಖ್ಯಸ್ಥ ಶರದ್ ಪವಾರ್ ಸತತ ಸಭೆ ನಡೆಸಿದ್ದರು. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಜೊತೆ ಮುಂದಿನ ರಾಜಕೀಯ ಹಾದಿ ಹಾಗೂ ಸವಾಲಿನ ಕುರಿತು ಸಭೆ ನಡೆಸಿದ್ದ ಶರದ್ ಪವಾರ್ ಇದೀಗ ದಿಢೀರ್ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಸಂಚಲನ ಮೂಡಿಸಿದ್ದಾರೆ.

ಪವಾರ್‌ಗೆ ರಾಷ್ಟ್ರಪತಿ ಹುದ್ದೆ: ಕಾಂಗ್ರೆಸ್‌ ಬಳಿ ಪ್ರಶಾಂತ್‌ ಕಿಶೋರ್‌ ಲಾಬಿ?

ಮೋದಿ ಜೊತೆಗೆ 50 ನಿಮಿಷಗಳ ಕಾಲ ಶರದ್ ಪವಾರ್ ಮಾತುಕತೆ ನಡೆಸಿದ್ದಾರೆ. ಬಳಿಕ ಟ್ವಿಟರ್ ಮೂಲಕ ಪವಾರ್ ತಮ್ಮ ಭೇಟಿ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ, ರಾಷ್ಟ್ರೀಯ ಹಿತಾಸಕ್ತಿ ಕುರಿತು ಹಲವು ವಿಚಾರಗಳನ್ನು ಚರ್ಚಿಸಲಾಗಿದೆ ಎಂದು ಪವಾರ್ ಹೇಳಿದ್ದಾರೆ.

Scroll to load tweet…

2024ರ ಚುನಾವಣೆ ಹೋರಾಡಲು ಎಡರಂಗ ಮಾತ್ರ ಸಾಲದು, ಕಾಂಗ್ರೆಸ್ ಬೇಕು: ಶರದ್ ಪವಾರ್!

ಜುಲೈ 19 ರಿಂದ ಮುಂಗಾರು ಅಧಿವೇಶನ ಆರಂಭವಾಗಲಿದೆ. ಇದಕ್ಕೂ ಮುನ್ನವೇ ಪವಾರ್, ಮೋದಿ ಭೇಟಿ ಭಾರಿ ಕುತೂಹಲ ಕೆರಳಿಸಿದೆ. ಇತ್ತ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರದೊಳಗಿನ ಬಿಕ್ಕಟ್ಟು ಗೌಪ್ಯವಾಗಿ ಉಳಿದಿಲ್ಲ. NCP, ಕಾಂಗ್ರೆಸ್ ಹಾಗೂ ಶಿವಸೇನಾ ಮೈತ್ರಿ ಸರ್ಕಾರ ಶೀತಲ ಸಮರದ ನಡುವೆ ಪವಾರ್ ಭೇಟಿ ಭಾರಿ ಮಹತ್ವದ ಪಡೆದುಕೊಂಡಿದೆ.