ಮೋದಿ ಹಾಗೂ ಬಿಜೆಪಿ ವಿರುದ್ಧ ಸ್ಪರ್ಧಿಸಲು ಎಡರಂಗ ಪಕ್ಷಗಳ ಮೈತ್ರಿ ಮೈತ್ರಿ ಸಭೆಯಿಂದ ಕಾಂಗ್ರೆಸ್ ಹೊರಗಿಟ್ಟಿದ್ದ NCP ಮುಖ್ಯಸ್ಥ ಶರದ್ ಪವಾರ್ ಕೇವಲ ಎಡರಂಗದಿಂದ ಹೋರಾಟ ಅಸಾಧ್ಯ, ಕಾಂಗ್ರೆಸ್ ಬೇಕು ಎಂದ ಪವಾರ್

ಮುಂಬೈ(ಜೂ.25):  ಶರದ್ ಪವಾರ್ ನೇತೃತ್ವದಲ್ಲಿ ಇತ್ತೀಚೆಗೆ ಎಡರಂಗ ಪಕ್ಷಗಳು ಒಟ್ಟಾಗಿ ಮಹತ್ವದ ಸಭೆ ನಡೆಸಿತ್ತು. ಶರದ್ ಪವಾರ್ ನಿವಾಸದಲ್ಲಿ ನಡೆದ ಸಭೆಯಿಂದ ಕಾಂಗ್ರೆಸ್ ಪಕ್ಷವನ್ನು ಹೊರಗಿಡಲಾಗಿತ್ತು. ಈ ಸಭೆ ಬೆನ್ನಲ್ಲೇ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ 2024ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಹೋರಾಡಲು ಕೇವಲ ಎಡರಂಗ ಪಕ್ಷಗಳಿಗೆ ಸಾಧ್ಯವಿಲ್ಲ ಎಂದಿದ್ದರು. ಇದರ ಬೆನ್ನಲ್ಲೇ ಇದೀಗ ಶರದ್ ಪವಾರ್ ಹೊಸ ವರಸೆ ಶುರುಮಾಡಿದ್ದಾರೆ.

ಕಾಂಗ್ರೆಸ್ ಹೊರಗಿಟ್ಟು 8 ಪಕ್ಷಗಳ ಸಭೆ; 2024ರಲ್ಲಿ ಮೋದಿ ಎದುರಿಸಲು ಶರದ್ ಪವಾರ್‌ಗೆ ನಾಯಕತ್ವ?!

ಎಡರಂಗ ಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷಗಳ ಮೈತ್ರಿ ಚರ್ಚೆಯಾಗಿಲ್ಲ. ಮೈತ್ರಿಗೆ ಕಾಂಗ್ರೆಸ್ ಪಕ್ಷ ಬೇಕು. ಈ ಕುರಿತು ಅಂದಿನ ಸಭೆಯಲ್ಲಿ ಹೇಳಿದ್ದೇನೆ ಎಂದು ಪವಾರ್ ಹೇಳಿದ್ದಾರೆ. ಬಿಜೆಪಿಯನ್ನು ಎದುರಿಸಲು ಸಂಭಾವ್ಯ ಮೈತ್ರಿಕೂಟದ ಕುರಿತು ನಾವು ಚರ್ಚೆ ಮಾಡಿಲ್ಲ ಎಂದು ಪವಾರ್ ಹೇಳಿದ್ದಾರೆ.

ಮತ್ತೆ ಪವಾರ್‌- ಪ್ರಶಾಂತ್‌ ಭೇಟಿ: 15 ದಿನದಲ್ಲಿ 3ನೇ ಸಲ ಸಮಾಲೋಚನೆ ...

ಸಾಮೂಹಿಕ ನಾಯಕತ್ವ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎದುರಿಸುವ ಸವಾಲುಗಳ ಕುರಿತು ಮಾತನಾಡಿದ್ದೇವೆ. ಮೈತ್ರಿಯೊಂದಿಗೆ ಮುಂದೆ ಸಾಗಿದರೆ ಯಶಸ್ಸು ಸಾಧ್ಯ. ಹೀಗೆ ಮೈತ್ರಿ ಮಾಡಿಕೊಳ್ಳುವುದಾದರೆ ಕಾಂಗ್ರೆಸ್ ಹೊರಗಿಡಲು ಸಾಧ್ಯವಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.