ನಂಬರ್ ಪ್ಲೇಟ್‌ ಮೇಲೆ ವಿಚಿತ್ರವಾಗಿ ಬರೆದ ಯುವಕ ನಾಗರಕೊಯಿಲ್ ಕ್ಷೇತ್ರದ ಶಾಸಕನ ಮೊಮ್ಮಗ ಎಂಬ ಬರಹ ಇತ್ತ ನಾಗರಕೊಯಿಲ್ ಎಂ.ಆರ್ ಗಾಂಧಿ ಅವಿವಾಹಿತ

ಮೊನ್ನೆಯಷ್ಟೇ ಉತ್ತರಪ್ರದೇಶದಲ್ಲಿ ಮೂವರು ಸ್ನೇಹಿತರು ನಂಬರ್‌ ಪ್ಲೇಟ್‌ನಲ್ಲಿ ವಿಚಿತ್ರವಾಗಿ ಬರೆದು ಕಂಬಿ ಎಣಿಸಿದ್ದರು. ಈಗ ತಮಿಳುನಾಡಿನ ಯುವಕನೋರ್ವ ನಂಬರ್‌ಪ್ಲೇಟ್‌ನಲ್ಲಿ ನಂಬರ್ ಬದಲು ನಾಗರಕೊಯಿಲ್ ವಿಧಾನಸಭಾ ಕ್ಷೇತ್ರದ ಶಾಸಕನ ಮೊಮ್ಮಗ ಎಂದು ನಂಬರ್‌ ಪ್ಲೇಟ್‌ನಲ್ಲಿ ಬರೆದಿದ್ದು, ಈ ನಂಬರ್ ಪ್ಲೇಟ್ ವೈರಲ್‌ ಆಗಿದೆ. ಆದರೆ ಇನ್ನೂ ವಿಚಿತ್ರವೆಂದರೆ ಈತ ನಂಬರ್‌ ಪ್ಲೇಟ್‌ನಲ್ಲಿ ಶಾಸಕನ ಮೊಮ್ಮಗ ಎಂದು ಬರೆದಿದ್ದರೆ ಅತ್ತ ಆ ನಾಗಕೊಯಿಲ್‌ನ ಶಾಸಕರಿಗಿನ್ನೂ ಮದುವೆಯೇ ಆಗಿಲ್ಲ. ಅವರು ಪ್ರಸ್ತುತ ಅವಿವಾಹಿತರು ಎಂದು ತಿಳಿದು ಬಂದಿದೆ.

ನಾಗರಕೊಯಿಲ್ ವಿಧಾನಸಭಾ ಕ್ಷೇತ್ರವೂ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಬರುವ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಜೊತೆಗೆ ಈ ಕ್ಷೇತ್ರದ ಬಿಜೆಪಿ ಶಾಸಕ ಎಂ.ಆರ್ ಗಾಂಧಿ ಅವಿವಾಹಿತರು ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್‌ ಮೇಲೆ ಕುಳಿತುಕೊಂಡಿದ್ದು, ಈ ಬೈಕ್‌ನ ನಂಬರ್‌ ಪ್ಲೇಟ್‌ನಲ್ಲಿ ನಂಬರ್ ಬದಲು ನಾಗರಕೊಯಿಲ್ ಶಾಸಕ ಎಂ.ಆರ್ ಗಾಂಧಿ ಮೊಮ್ಮಗ ಎಂದು ಬರೆದಿದೆ.

Scroll to load tweet…

ಇತ್ತ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ರೀತಿವಿಚಿತ್ರವಾಗಿ ನಂಬರ್ ಪ್ಲೇಟ್‌ ಮೇಲೆ ಬರೆಸಿದಾತನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ತಮಿಳುನಾಡಿನಲ್ಲಿ ಇಂತಹ ಧೈರ್ಯ ಮತ್ತು ಅಧಿಕಾರದ ದುರುಪಯೋಗವಾಗುತ್ತಿದೆ. ಇದು ಚಲನಚಿತ್ರ ಕಥೆಗಳನ್ನು ಮೀರಿಸುತ್ತದೆ ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. ಅದು ಅವನ ಅರ್ಹತೆ ಎಂದು ಮತ್ತೊಬ್ಬ ನೋಡುಗರು ಕಾಮೆಂಟ್ ಮಾಡಿದ್ದಾರೆ. 'ತೂ ಜಂತಾ ನಹೀ ಮೇರಾ ದಾದಾ ಕೌನ್ ಹೈ'(ನಿನಗೆ ಗೊತ್ತಿಲ್ಲ ನನ್ನ ತಾತಾ ಯಾರೆಂದು) ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ಶಾಸಕ ಗಾಂಧಿ ಅವಿವಾಹಿತ ಎಂದು ಅನೇಕ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಗಮನಸೆಳೆದಿದ್ದಾರೆ.

ಬರೀ ನಂಬರ್‌ ಪ್ಲೇಟ್‌ಗೆ 17 ಲಕ್ಷ ಕೊಟ್ಟ ಜೂ.NTR, ಕಾರ್ ಬೆಲೆ ಎಷ್ಟು ?

ಈ ನಡುವೆ ಹೀಗೆ ನಾಗರಕೋಯಿಲ್ (Nagercoil) ಶಾಸಕ ಎಂ.ಆರ್.ಗಾಂಧಿಯವರ (MR Gandhi) ಮೊಮ್ಮಗ ಎಂದು ಬರೆದು ನಂಬರ್‌ ಪ್ಲೇಟ್‌ ಮೇಲೆ ಬರೆದಿರುವ ಬೈಕ್ ಮೇಲೆ ಪೋಸ್ ಕೊಟ್ಟಿರುವ ವ್ಯಕ್ತಿಯನ್ನು ಶಾಸಕ ಗಾಂಧಿಯವರ ಸಹಾಯಕ ಕಣ್ಣನ್ ಅವರ ಪುತ್ರ ಅಮರೀಶ್ (Amrish)ಎಂದು ಗುರುತಿಸಲಾಗಿದೆ ಎಂದು ಸುದ್ದಿ ಚಾನೆಲ್‌ವೊಂದು ವರದಿ ಮಾಡಿದೆ. ಈತ ಈ ಬೈಕ್‌ನಲ್ಲಿ ನಗರದಲ್ಲಿ ಸುತ್ತಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಎರಡು ದಿನಗಳ ಹಿಂದೆ ಉತ್ತರಪ್ರದೇಶದ ನಂಬರ್‌ ಪ್ಲೇಟ್‌ ಮೇಲೆ ನಂಬರ್‌ ಬದಲು ಪಾಲ್ ಸಾಹೇಬ್ ಬಂದಿದ್ರು ಅಂತ ಹೇಳು ಎಂದು ವಿಚಿತ್ರವಾಗಿ ಬರೆದಿದ್ದ ಬೈಕ್‌ನ್ನು ವಶಕ್ಕೆ ಪಡೆದ ಪೊಲೀಸರು ಈ ಬೈಕ್‌ನ ಮೇಲೆ ಪ್ರಯಾಣಿಸುತ್ತಿದ್ದ ಮೂವರನ್ನು ಬಂಧಿಸಿದ್ದರು. ಸಾಮಾನ್ಯವಾಗಿ ವಾಹನಗಳ ನಂಬರ್‌ ಪ್ಲೇಟ್‌ ಮೇಲೆ ನಂಬರ್‌ಗಳ ಹೊರತಾಗಿ ಬೇರೇನು ಇರುವುದಿಲ್ಲ. ಆದರೆ ಉತ್ತರಪ್ರದೇಶದ ಔರೆಯಾ ಜಿಲ್ಲೆಯ ಬೈಕೊಂದರ ನಂಬರ್‌ ಪ್ಲೇಟ್ ಮೇಲೆ ನಂಬರ್ ಬದಲು 'ಪಾಲ್ ಸಾಹೇಬ್ ಬಂದಿದ್ರು ಅಂತ ಹೇಳು' ಎಂದು ವಿಚಿತ್ರವಾಗಿ ಬರೆಯಲಾಗಿತ್ತು.

ತರಲೆ ಮಾಡಲು ಹೋಗಿ ತಗಲಾಕೊಂಡ ಗೆಳೆಯರು... ನಂಬರ್‌ ಪ್ಲೇಟ್‌ನಲ್ಲಿ ಬರೆದಿದ್ದೇನು?
ಮುರದ್‌ಗಂಜ್ ಔಟ್‌ಪೋಸ್ಟ್ ಇನ್‌ಚಾರ್ಜ್ ಅವ್ನಿಶ್ ಕುಮಾರ್ ಅವರು ವಾಹನಗಳ ತಪಾಸಣೆ ಕಾರ್ಯದಲ್ಲಿ ತೊಡಗಿದ್ದಾಗ ಮೂವರು ಹುಡುಗರು ಒಂದೇ ಬೈಕ್‌ನಲ್ಲಿ ಕುಳಿತು ತ್ರಿಬಲ್ ರೈಡಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದು ಆ ಬಗ್ಗೆ ವಿಚಾರಿಸಲು ಬೈಕ್‌ನ್ನು ತಡೆದಿದ್ದಾರೆ. ಈ ವೇಳೆ ಅವರಿಗೆ ಬೈಕ್‌ನಲ್ಲಿ ಮತ್ತೊಂದು ವಿಚಿತ್ರ ಕಾಣಿಸಿಕೊಂಡಿದೆ. ಅದು ನಂಬರ್‌ ಪ್ಲೇಟ್‌. ಅದರಲ್ಲಿ ನಂಬರ್‌ ಬದಲು ಪಾಲ್‌ ಸಾಹೇಬ್ ಬಂದಿದ್ರು ಅಂತ ಹೇಳು ಎಂದು ಬರೆದಿತ್ತು. ಅಷ್ಟೇ ಅಲ್ಲ ಬೈಕ್‌ನಲ್ಲಿ ಜೋರಾಗಿ ಸದ್ದು ಮಾಡುವ ಸೈಲೆನ್ಸರ್ ಅನ್ನು ಕೂಡ ಅಳವಡಿಸಲಾಗಿತ್ತು.