ತರಲೆ ಮಾಡಲು ಹೋಗಿ ತಗಲಾಕೊಂಡ ಗೆಳೆಯರು... ನಂಬರ್‌ ಪ್ಲೇಟ್‌ನಲ್ಲಿ ಬರೆದಿದ್ದೇನು?

  • ನಂಬರ್‌ ಪ್ಲೇಟ್ ಮೇಲೆ ತರಲೆ ಬರಹ
  • ಕಂಬಿ ಎಣಿಸುವಂತಾದ ಮೂವರು ಯುವಕರು
  • ಉತ್ತರಪ್ರದೇಶದ ಔರೆಯಾದಲ್ಲಿ ಘಟನೆ
bol dena pal saheb aaye the written on the bike police caught them know what happend next akb

ನಂಬರ್‌ ಪ್ಲೇಟ್‌ ಮೇಲೆ ನಂಬರ್‌ ಬದಲು ಪಾಲ್ ಸಾಹೇಬ್ ಬಂದಿದ್ರು ಅಂತ ಹೇಳು ಎಂದು ವಿಚಿತ್ರವಾಗಿ ಬರೆದಿದ್ದ ಬೈಕ್‌ನ್ನು ವಶಕ್ಕೆ ಪಡೆದ ಪೊಲೀಸರು ಈ ಬೈಕ್‌ನ ಮೇಲೆ ಪ್ರಯಾಣಿಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಸಾಮಾನ್ಯವಾಗಿ ವಾಹನಗಳ ನಂಬರ್‌ ಪ್ಲೇಟ್‌ ಮೇಲೆ ನಂಬರ್‌ಗಳ ಹೊರತಾಗಿ ಬೇರೇನು ಇರುವುದಿಲ್ಲ. ಆದರೆ ಉತ್ತರಪ್ರದೇಶದ ಔರೆಯಾ ಜಿಲ್ಲೆಯ ಬೈಕೊಂದರ ನಂಬರ್‌ ಪ್ಲೇಟ್ ಮೇಲೆ ನಂಬರ್ ಬದಲು 'ಪಾಲ್ ಸಾಹೇಬ್ ಬಂದಿದ್ರು ಅಂತ ಹೇಳು' ಎಂದು ವಿಚಿತ್ರವಾಗಿ ಬರೆಯಲಾಗಿತ್ತು.  

ಮಂಗಳವಾರ ಮುರದ್‌ಗಂಜ್ ಔಟ್‌ಪೋಸ್ಟ್ ಇನ್‌ಚಾರ್ಜ್ ಅವ್ನಿಶ್ ಕುಮಾರ್ ಅವರು ವಾಹನಗಳ ತಪಾಸಣೆ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಅವರಿಗೆ ಮೂವರು ಹುಡುಗರು ಒಂದೇ ಬೈಕ್‌ನಲ್ಲಿ ಕುಳಿತು ತ್ರಿಬಲ್ ರೈಡಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದು ಆ ಬಗ್ಗೆ ವಿಚಾರಿಸಲು ಬೈಕ್‌ನ್ನು ತಡೆದಿದ್ದಾರೆ. ಈ ವೇಳೆ ಅವರಿಗೆ ಬೈಕ್‌ನಲ್ಲಿ ಮತ್ತೊಂದು ವಿಚಿತ್ರ ಕಾಣಿಸಿಕೊಂಡಿದೆ. ಅದು ನಂಬರ್‌ ಪ್ಲೇಟ್‌. ಅದರಲ್ಲಿ ನಂಬರ್‌ ಬದಲು ಪಾಲ್‌ ಸಾಹೇಬ್ ಬಂದಿದ್ರು ಅಂತ ಹೇಳು ಎಂದು ಬರೆದಿತ್ತು. ಅಷ್ಟೇ ಅಲ್ಲ ಬೈಕ್‌ನಲ್ಲಿ ಜೋರಾಗಿ ಸದ್ದು ಮಾಡುವ ಸೈಲೆನ್ಸರ್ ಅನ್ನು ಕೂಡ ಅಳವಡಿಸಲಾಗಿತ್ತು.

 

ಘಟನೆಯ ಬಳಿಕ ಈ ಮೂವರನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ಕೂಡಿಸಿದ್ದಾರೆ. ಹೀಗೆ ತರಲೆ ಮಾಡಿ ಸಿಕ್ಕಿ ಹಾಕಿಕೊಂಡ ಯುವಕರನ್ನು ಸಹೋದರರಾದ ಅಂಕಿತ್ ಪಾಲ್‌ ಹಾಗೂ ಅನುಜ್‌ ಪಾಲ್ ಹಾಗೂ ಇವರಿಬ್ಬರ ಸ್ನೇಹಿತ ಶಿವಂ ಸಿಂಗ್‌ ಎಂದು ಗುರುತಿಸಲಾಗಿದೆ. ಔರೈಯಾ ನಗರದ ಆನೆಪುರ್ ಗ್ರಾಮದಲ್ಲಿರುವ ಸಾಯಿ ಮಂದಿರಕ್ಕೆ ಈ ಮೂವರು ಸ್ನೇಹಿತರು ಬಂದಿದ್ದರು ಎಂದು ತಿಳಿದು ಬಂದಿದೆ. ಔರೈಯಾ ಎಸ್ಪಿ ಅಭಿಷೇಕ್ ವರ್ಮಾ ಈ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದು ಜೊತೆಗೆ ಬೈಕ್‌ನ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಎಣ್ಣೆ ಸಿಕ್ತು ಅಂತ ಬೇಕಾಬಿಟ್ಟಿ ಕುಡಿದು ತನ್ನ ಮನೆಗೇ ಬೆಂಕಿ ಇಟ್ಟ..!

ಟಿ ಅಕ್ಷರದಿಂದ ಶುರುವಾಗೋ ಹೆಸರಿನವರ ಒಂದು ಪ್ರಮುಖ ಲಕ್ಷಣ ಅಂದರೆ ತಂಟೆ, ತರಲೆ, ಚೇಷ್ಟೆ. ಸದಾ ಕಾಲ ಏನಾದರೊಂದು ತರಲೆ ಮಾಡದೇ ಇದ್ದರೆ ಇವರಿಗೆ ತಿಂದ ಅನ್ನ ಜೀರ್ಣ ಆಗುವುದೇ ಇಲ್ಲ. ತರಲೆ ಎಂದರೇನು ಸಾಮಾನ್ಯವೇ, ಅದು ಮನೆಯಲ್ಲೂ, ಕಚೇರಿಯಲ್ಲೂ ತರಲೆ ಮಾಡುತ್ತಲೇ ಇರುತ್ತಾರೆ. ಹಾಗಂತ ಕೆಡುಕು ಬುದ್ಧಿಯವರೇನೂ ಅಲ್ಲ. ತಾವು ಮಾಡಿದ ತರಲೆಯಿಂದ ಇನ್ನೊಬ್ಬರಿಗೆ ತೀರಾ ನೋವಾದರೆ ತಾವೇ ನೊಂದುಕೊಳ್ತಾರೆ. ಹಾಗಂತ ಮುಂದಿನ ಸಲ ತಂಟೆ ಮಾಡದೇ ಇರುವುದಿಲ್ಲ. ಹಾಗಂತ ಇವರು ಇನ್ನೊಬ್ಬರ ಸಹಾಯಕ್ಕೆ ಹೋಗದ ವಿಘ್ನ ಸಂತೋಷಿಗಳೂ ಅಲ್ಲ. ಅಕ್ಕಪಕ್ಕದವರು ಸಂಕಷ್ಟದಲ್ಲಿ ಇದ್ದಾಗ ಮೊದಲಿಗೆ ನೆರವಿಗೆ ಧಾವಿಸುವವರೇ ಇವರು. ಇವರೊಂಥರಾ ಹಲವು ವಿರುದ್ಧ ಗುಣಗಳ ಮೊತ್ತ. ಇನ್ನೊಬ್ಬರಿಗೆ ಕೇಡು ಮಾಡದ ತರಲೆತನವೂ ಇನ್ನೊಬ್ಬರಿಗೆ ಸಹಾಯ ಮಾಡುವ ಒಳ್ಳೆಯತನವೂ ಇವರಲ್ಲಿ ಸಮಾನವಾಗಿ ಇರುತ್ತೆ.

1 ವಾರ ಅಳದೇ ಗಲಾಟೆ ಮಾಡದೇ ಇದ್ದರೆ 100 ರೂ. ಬಹುಮಾನ : ತುಂಟ ಮಗನ ನಿರ್ವಹಿಸಲು ತಂದೆಯ ಹೊಸ ಐಡಿಯಾ 

Latest Videos
Follow Us:
Download App:
  • android
  • ios