ಪುಟ್ಟ ಕಂದನನ್ನು ರಕ್ಷಿಸಿದ ಯೋಧನಿಗೆ ಹ್ಯಾಟ್ಸ್ ಆಫ್ ಎನ್ನುತ್ತಿದ್ದಾರೆ ಭಾರತೀಯರು!

ಯೋಧನೋರ್ವ ಪುಟ್ಟ ಕಂದನಿಗೆ ಬಾಟಲ್ ಫೀಡಿಂಗ್ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವ ಯೋಧನ ಕಾರ್ಯಕ್ಕೆ ನೆಟ್ಟಿಗರು ಸೆಲ್ಯೂಟ್ ಹೇಳಿದ್ದಾರೆ.

photo of an army officer feeding a toddler goes viral akb

ಯೋಧನೋರ್ವ ಪುಟ್ಟ ಕಂದನಿಗೆ ಬಾಟಲ್ ಫೀಡಿಂಗ್ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವ ಯೋಧನ ಕಾರ್ಯಕ್ಕೆ ನೆಟ್ಟಿಗರು ಸೆಲ್ಯೂಟ್ ಹೇಳಿದ್ದಾರೆ.

ಸಾಮಾನ್ಯವಾಗಿ ದೇಶದಲ್ಲಿ ಏನೇ ಸಂಕಷ್ಟ ಬರಲಿ ಮೊದಲಿಗೆ ಓಡಿ ರಕ್ಷಣೆಗೆ ಓಡಿ ಬರುವವವರು ನಮ್ಮ ಭಾರತೀಯ ಯೋಧರು. ಅದು ಪ್ರವಾಹವೇ ಇರಲಿ. ಭೂಕಂಪನವೇ ಇರಲಿ ಅಥವಾ ಇನ್ಯಾವುದೋ ನೈಸರ್ಗಿಕ ವಿಕೋಪವಿರಲಿ, ಭಾರತೀಯ ಸೇನೆ ಅಲ್ಲಿ ಸದಾ ಹಾಜರು. ತಮ್ಮ ಜೀವವನ್ನು ಪಣಕ್ಕಿಟ್ಟು ಕೂಡ ಯೋಧರು ನಾಗರಿಕರನ್ನು ರಕ್ಷಿಸಿದ ಹಲವು ನಿದರ್ಶನಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಅದೇ ರೀತಿ ಯುವ ಸೇನಾಧಿಕಾರಿಯೊಬ್ಬರು ನವಜಾತ ಶಿಶುವಿಗೆ ಬಾಟಲಿಯಲ್ಲಿ ಹಾಲು ಕುಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 

 

ಗೃಹ ಸಚಿವ ರಾಜ್ಯ ಖಾತೆ ( Home Minister (State)) ಹರ್ಷ ಸಂಘವಿ (Harsh Sanghavi) ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಆಂಬ್ಯುಲೆನ್ಸ್‌ನ ಹಿಂಭಾಗದಲ್ಲಿ ಸೇನಾ ಅಧಿಕಾರಿ ಕುಳಿತಿರುವ ಚಿತ್ರವನ್ನು ಹರ್ಷ ಸಂಘವಿ ಹಂಚಿಕೊಂಡಿದ್ದಾರೆ. ಅಧಿಕಾರಿ ತನ್ನ ಕೈಯಲ್ಲಿ ಮಗುವನ್ನು  ಹಿಡಿದುಕೊಂಡು ಮಗುವಿಗೆ ಆಹಾರವನ್ನು  ಶ್ರದ್ಧೆಯಿಂದ  ನೀಡುತ್ತಿದ್ದಾರೆ. ಮತ್ತೊಬ್ಬ ಅಧಿಕಾರಿ ಕೈಯಲ್ಲಿ ಬಟ್ಟೆಯನ್ನು ಹಿಡಿದುಕೊಂಡು ಜೊತೆಯಲ್ಲೇ ನಿಂತಿದ್ದಾರೆ. 

ತನ್ನ ಮದುವೆಗೆ ತೆರಳಲು ಯೋಧನಿಗೆ ವಿಶೇಷ ಏರ್‌ಲಿಫ್ಟ್‌ ನೀಡಿದ ಬಿಎಸ್‌ಎಫ್

ಭಾವನೆಗಳು ಮತ್ತು ಕರ್ತವ್ಯವು ಜೊತೆಯಾದಾಗ, ಹ್ಯಾಟ್ಸ್ ಆಫ್ ಟು ಇಂಡಿಯನ್ ಆರ್ಮಿ ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ. ಈ ಪೋಸ್ಟ್‌ನ್ನು ನೆಟ್ಟಿಗರು ಶ್ಲಾಘಿಸಿದ್ದಲ್ಲದೇ ತ್ವರಿತವಾಗಿ ವೈರಲ್ ಆಗಿದೆ. ಅವರ ಮಾನವೀಯತೆ ಅವರ ಸಮರ್ಪಣೆ ಮತ್ತು ಈ ಪವಿತ್ರ ಮಣ್ಣಿನ ಮೇಲಿನ ಅವರ ಭಕ್ತಿಗೆ ಹ್ಯಾಟ್ಸ್ ಆಫ್ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಸಾವಿರ ಪದಗಳಿಗೂ ಹೆಚ್ಚು ಮೆಚ್ಚುಗೆಗೆ ಯೋಗ್ಯವಾದ ಚಿತ್ರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

Shaurya Puraskar ಹುತಾತ್ಮನಾದ ಕರ್ನಾಟಕದ ಯೋಧನಿಗೆ ಮರಣೋತ್ತರ ಶೌರ್ಯಪ್ರಶಸ್ತಿ

ಪತ್ನಿ ಸೀಮಂತಕ್ಕೆ ಬಂದಿದ್ದ ಯೋಧ ಅಪಘಾತದಲ್ಲಿ ದುರ್ಮರಣ!

ಪತ್ನಿಯ ಸೀಮಂತ ಕಾರ್ಯ (baby shower) ಅದ್ಧೂರಿಯಾಗಿ ಮಾಡಬೇಕೆಂದು ರಜೆ ಮೇಲೆ ಮನೆಗೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಳಿ ಜೂನ್ 2ರ ರಾತ್ರಿ ನಡೆದಿದೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹೊಸೂರಿನ ಗ್ರಾಮದವರಾಗಿದ್ದ ಯೋಧ 28 ವರ್ಷದ ಪ್ರಕಾಶ್ ಮಡಿವಾಳಪ್ಪ ಸಂಗೊಳ್ಳಿ (Prakash Madiwalappa Sangolli) ಕಳೆದ 9 ವರ್ಷಗಳ ಹಿಂದೆ ಬೆಳಗಾವಿಯ (belagavi) ಮರಾಠಾ ಲಘು ಪದಾತಿದಳದಲ್ಲಿ ಸೈನಿಕನಾಗಿ ಸೇವೆಗೆ ಸೇರಿದ್ದರು‌.

ಎರಡು ವರ್ಷಗಳ ಹಿಂದೆಯಷ್ಟೇ ಜ್ಯೋತಿ ಎಂಬುವರ ಜೊತೆ ಯೋಧ ಪ್ರಕಾಶ್ ಸಂಗೊಳ್ಳಿ ವಿವಾಹವಾಗಿದ್ದ. ಜೂನ್ 12ರಂದು ಅದ್ಧೂರಿಯಾಗಿ ಪತ್ನಿ ಜ್ಯೋತಿಯ ಸೀಮಂತ ಕಾರ್ಯ ಮಾಡಬೇಕು ಎಂದುಕೊಂಡಿದ್ದ‌‌. ಪ್ರಕಾಶ್ ತಂದೆ ಮಡಿವಾಳಪ್ಪ ಸಹ ಯೋಧರಾಗಿ ದೇಶ ಸೇವೆ ಸಲ್ಲಿಸಿದ್ದರು‌. ನಿವೃತ್ತರಾದ ಬಳಿಕ ಹೊಸೂರು ಗ್ರಾಮದಲ್ಲಿ ನೆಲೆಸಿದ್ದರು‌. ಎರಡು ತಿಂಗಳ ಹಿಂದೆಯಷ್ಟೇ ಯೋಧ ಪ್ರಕಾಶ್ ತಂದೆ ಸಹ ಮೃತಪಟ್ಟಿದ್ದರು‌.

ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಪ್ರಕಾಶ್ ಕಾರ್ಯನಿಮಿತ್ತ ಬೆಳಗಾವಿಗೆ ತೆರಳಿದ್ದರು. ಬೆಳಗಾವಿಯಿಂದ ಹೊಸೂರು ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುವ ವೇಳೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯೋಧ ಪ್ರಕಾಶ್ ಪಾರ್ಥಿವ ಶರೀರವನ್ನು ಬೈಲಹೊಂಗಲ ಪಟ್ಟಣದಿಂದ ನೂರಾರು ಯುವಕರು ಹೊಸೂರು ಗ್ರಾಮಕ್ಕೆ ತಂದಿದ್ದರು. 

Latest Videos
Follow Us:
Download App:
  • android
  • ios