Shaurya Puraskar ಹುತಾತ್ಮನಾದ ಕರ್ನಾಟಕದ ಯೋಧನಿಗೆ ಮರಣೋತ್ತರ ಶೌರ್ಯಪ್ರಶಸ್ತಿ
- ಉಗ್ರರ ಸೆಡೆಬಡೆದಿದ್ದ ವಿಜಯಪುರದ ಹುತಾತ್ಮ ಯೋಧನಿಗೆ ಶೌರ್ಯಪ್ರಶಸ್ತಿ
- ಕಾಶಿರಾಯ ಕುಟುಂಬಕ್ಕೆ ಪ್ರಶಸ್ತಿ ನೀಡಿ ಗೌರವಿಸಿದ ಕೇಂದ್ರ ಸರ್ಕಾರ
- ಶೌರ್ಯ ಪ್ರಶಸ್ತಿ ಸ್ವೀಕರಿಸಿದ ಅತ್ತೆ-ಸೊಸೆ
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಮೇ.11): ಉಗ್ರರ ವಿರುದ್ಧ ಹೋರಾಡಿ ವೀರಮರಣಪ್ಪಿದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಹುತಾತ್ಮ ಯೋಧ ಕಾಶಿರಾಯ ಬಮ್ಮನಹಳ್ಳಿ ಅವರಿಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ಅವರ ಕುಟುಂಬಸ್ಥರಿಗೆ ನೀಡಿದೆ.
ಶೌರ್ಯ ಪ್ರಶಸ್ತಿ ಸ್ವೀಕರಿಸಿದ ಅತ್ತೆ-ಸೊಸೆ: ಕೇಂದ್ರ ಸರ್ಕಾರ ಮರಣೋತ್ತರವಾಗಿ ವೀರಯೋಧ ಕಾಶಿರಾಯ್ ಬೊಮ್ಮನಳ್ಳಿಯವರಿಗೆ ನೀಡಿದ ಶೌರ್ಯ ಪ್ರಶಸ್ತಿಯನ್ನ ಅವರ ಪತ್ನಿ ಸಂಗೀತಾ ಬೊಮ್ಮಹಳ್ಳಿ ಹಾಗೂ ತಾಯಿ ಶಾಂತಾಬಾಯಿ ಸ್ವೀಕರಿಸಿದರು. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಅತ್ತೆ-ಸೊಸೆ ಭಾವುಕರಾಗಿದ್ದು ಕಂಡು ಬಂತು. ಅದ್ರಲ್ಲೂ ಕಾಶಿರಾಯರ ತಾಯಿ ಶಾಂತಾಬಾಯಿ ಪ್ರಶಸ್ತಿ ಸ್ವೀಕಾರ ವೇಳೆ ಕಣ್ಣಂಚಲ್ಲಿ ನೀರು ಬಂತು.
ಮೂವರು ಉಗ್ರರನ್ನ ಕೊಂದು ಅಮರನಾದ ಕಾಶಿರಾಯ: 37 ವರ್ಷದ ಕಾಶಿರಾಮ ಬೊಮ್ಮನಹಳ್ಳಿ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಅಡಗಿರುವ ಮಾಹಿತಿ ಪಡೆದ ಸೇನಾ ಸಿಬ್ಬಂದಿಗಳು 2021ರ ಜುಲೈ 1ರಂದು ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಾಗ ಆ ಕಾರ್ಯಾಚರಣೆಯಲ್ಲಿ ವಿಜಯಪುರ ಜಿಲ್ಲೆಯ ಯೋಧ (ಹವಾಲ್ದಾರ) ಕಾಶಿರಾಯ ಬೊಮ್ಮನ ಹಳ್ಳಿ ಸಹ ಇದ್ದರು. ಈ ವೇಳೆ ಉಗ್ರರ ಮೇಲೆ ವೀರಾವೇಶದಿಂದ ಗುಂಡಿನ ದಾಳಿಯನ್ನು ಕಾಶಿರಾಯ ನಡೆಸಿದ್ದರು. ಅದಕ್ಕೆ ಎದುರಾಗಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ ಕಾಶಿರಾಯ ಅವರಿಗೆ ಗುಂಡು ತಗುಲಿ ಅವರು ಹುತ್ಮಾತ್ಮರಾಗಿದ್ದರು. ಆದ್ರೆ ಕಾಶೀರಾಯ ಹುತಾತ್ಮರಾಗುವುದಕ್ಕೂ ಮುನ್ನ ಮೂವರು ಉಗ್ರರನ್ನು ಗುಂಡಿಕ್ಕಿ ಕೊಂದಿದ್ದಾರೆ. ಜೊತೆಗೆ ತಮ್ಮ ಜೊತೆಗಿದ್ದ ಇತರ ಸೈನಿಕರನ್ನು ಉಗ್ರರ ದಾಳಿಯಿಂದ ರಕ್ಷಿಸಿದ್ದರು ಎಂಬುದು ಗಮನಾರ್ಹ.
ವಿನಯ ಕುಲಕರ್ಣಿ ಪೋಟೋ ಹಾಕಿಲ್ಲವೆಂದು ಪಂಚಮಸಾಲಿ ಮುಖಂಡರ ಪ್ರತಿಭಟನೆ
ಗಣರಾಜ್ಯೋತ್ಸವದ ದಿನ ಘೋಷಣೆಯಾಗಿದ್ದ ಶೌರ್ಯ ಪ್ರಶಸ್ತಿ: ಕೇಂದ್ರ ಸರ್ಕಾರ 2022ರ ಜನವರಿ 26ರಂದು ಮರಣೋತ್ತರವಾಗಿ ಹುತಾತ್ಮ ಯೋಧ ಕಾಶಿರಾಮ ಬೊಮ್ಮನ ಹಳ್ಳಿಯವರಿಗೆ ಶೌರ್ಯ ಪ್ರಶಸ್ತಿ ಘೋಷಣೆ ಮಾಡಿತ್ತು. ನಿನ್ನೆ ಮೇ 10ರಂದು ಪ್ರಶಸ್ತಿ ಪದಕ ನೀಡಿ ಗೌರವಿಸಲಾಯಿತು.
ವೀರಯೋಧ ಕಾಶೀರಾಯ ಕೌಟುಂಬಿಕ ಹಿನ್ನೆಲೆ: ಪೂರ್ತಿ ಹೆಸರು ಕಾಶೀರಾಯ ಶಂಕ್ರಪ್ಪ ಬೊಮ್ಮನಹಳ್ಳಿ 30-06-1986ರಲ್ಲಿ ಜನಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಉಕ್ಕಲಿ ಗ್ರಾಮದಲ್ಲಿ ಮುಗಿಸಿದ್ರು. ಬಳಿಕ ಪಿಯುಸಿ ಕಾಮರ್ಸ್ ಅನ್ನು ವಿಜಯಪುರದಲ್ಲಿ ಮುಗಿಸಿದ್ದರು. ನಂತರ 2005 ರಲ್ಲಿ ಸೇನೆಗೆ ಆಯ್ಕೆಯಾಗಿ 2006 ರಲ್ಲಿ ಸೇನೆ ಸೇವೆಗೆ ಸೇರಿದ್ದರು. ಬೆಂಗಳೂರಿನ MRG ಸೆಂಟರ್ ನಲ್ಲಿ ಎರಡೂವರೇ ವರ್ಷ ಮೊದಲ ಸೇವೆ ಸಲ್ಲಿಸಿದ ಬಳಿಕ ಪಟಿಯಾಲ (ಪಂಜಾಬ್) 3 ವರ್ಷ ಸೇವೆ. ಜಮ್ಮುವಿನ ಪುಲ್ವಾಮಾದಲ್ಲಿ 3 ವರ್ಷ ಸೇವೆ. ಬಡಿಯಾಂಡಾ( ಪಂಜಾಬ್) 2 ವರ್ಷ ಸೇವೆ ಮತ್ತೆ ವಾಪಸ್ ಜಮ್ಮು ಪುಲ್ವಾಮಾದ 44RRನಲ್ಲಿ (ರಾಷ್ಟೀಯ ರೈಫಲ್) ವಾಲೇಂಟರಿ ತೆಗೆದುಕೊಂಡು ಸೇವೆ ಸಲ್ಲಿಸುತ್ತಿದ್ದರು. ಸುಮಾರು 9-10 ಬಾರಿ ಉಗ್ರರ ಜೊತೆಗಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಹೆಮ್ಮೆ ಇವರದ್ದಾಗಿತ್ತು.
ಉಗ್ರರನ್ನ ಬಿಡೋಲ್ಲ ಸಾಯಿಸಿ ಬಿಡ್ತೀನಿ ಎನ್ತಿದ್ದ ವೀರಯೋಧ: ಯೋಧ ಕಾಶೀರಾಯನಿಗೆ ಮದುವೆಯಾಗಿ 8 ವರ್ಷ ಕಳೆದಿದ್ದು, 7 ವರ್ಷದ ಪೃಥ್ವಿ ಹೆಸರಿನ ಪುತ್ರಿ, ಭಗತ್‌ಸಿಂಗ್ ಹೆಸರಿನ 5 ವರ್ಷ ಮಗನಿದ್ದಾನೆ. ಅಪ್ಪಟ ದೇಶ ಪ್ರೇಮಿಯಾಗಿದ್ದ ಯೋಧ ಕಾಶೀರಾಯ ಸರ್ವಿಸ್ ನಲ್ಲಿ 15 ವರ್ಷ ಕಳೆದಿದ್ದರು, ಉಗ್ರರ ಸೆದೆಬಡೆಯುವ ಛಲ ಹೊಂದಿದ್ದ ಯೋಧ ಊರಿಗೆ ಬಂದಾಗಲು ಉಗ್ರರನ್ನ ಬಿಡೋಲ್ಲ ಹೊಡೆದು ಬಿಸಾಕ್ತೀನಿ ಎನ್ನುತ್ತಿದ್ದನಂತೆ. ನಾನು ಹಾಗೇ ಸಾಯೊಲ್ಲ, ಉಗ್ರರನ್ನ ಹೊಡೆದೆ ಸಾಯುತ್ತೇನೆ ಎನ್ನುತ್ತಿದ್ದರಂತೆ. ಹಾಗೇ ಉಗ್ರರ ದಾಳಿ ವೇಳೆ ಮುನ್ನುಗ್ಗಿ ಉಗ್ರರ ಸೆದೆಪಡೆದು ಪ್ರಾಣಬಿಟ್ಟಿದ್ದಾರೆ.
Tumakuru ಊರ ಜಾತ್ರೆಯಲ್ಲಿ ಎತ್ತುಗಳನ್ನು ಬಲಿಕೊಟ್ಟ ಗ್ರಾಮಸ್ಥರು!
ಅಪ್ಪಟ ದೇಶಭಕ್ತನಾಗಿದ್ದ ಕಾಶಿರಾಯ: ಯೋಧ ಕಾಶೀರಾಯ ಅದೆಂಥ ದೇಶಭಕ್ತನಾಗಿದ್ದ ಎಂದ್ರೇ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸಂದರ್ಭದಲ್ಲಿ ರಜೆ ಹಾಕಿಕೊಂಡು ಊರಿಗೆ ಬಂದು ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತಿದ್ದನಂತೆ. ಮಗನಿಗೂ ಸಹಿತ ಭಗತ್‌ಸಿಂಗ್ ಎಂದು ಹೆಸರಿಟ್ಟು ದೇಶಾಭಿಮಾನ ಮರೆದಿದ್ದ ಎಂದು ಇಡೀ ಊರು ಮಾತನಾಡಿಕೊಳ್ಳುತ್ತಿದೆ.