ತನ್ನ ಮದುವೆಗೆ ತೆರಳಲು ಯೋಧನಿಗೆ ವಿಶೇಷ ಏರ್‌ಲಿಫ್ಟ್ ನೀಡಿದ ಬಿಎಸ್‌ಎಫ್
- ಕಾಶ್ಮೀರದ ಮಚಿಲ್ ಸೆಕ್ಟರ್‌ನಲ್ಲಿ ಕರ್ತವ್ಯದಲ್ಲಿದ್ದ ಯೋಧ
- ಹಿಮಪಾತದಿಂದಾಗಿ ಕಾಶ್ಮೀರ ಕಣಿವೆಗೆ ಸಂಪರ್ಕ ಕಡಿತ
- ಮೇ. 2 ರಂದು ಯೋಧ ನಾರಾಯಣ್ ಬೆಹ್ರಾ ಮದುವೆ
ನವದೆಹಲಿ: ಗಡಿ ನಿಯಂತ್ರಣ ರೇಖೆಯಲ್ಲಿ ಕರ್ತವ್ಯದಲ್ಲಿದ್ದ ಯೋಧನಿಗೆ ತನ್ನ ಮದುವೆಯ ಸಮಯಕ್ಕೆ ಸರಿಯಾಗಿ ಮನೆಗೆ ತಲುಪಲು ಸಾಧ್ಯವಾಗಲು ಗಡಿ ಭದ್ರತಾ ಪಡೆ (BSF) ಆ ಯೋಧನಿಗೆ ವಿಶೇಷ ಏರ್‌ಲಿಫ್ಟ್ ನೀಡಲು ಆದೇಶಿಸಿದೆ. 30 ವರ್ಷದ ಕಾನ್ಸ್‌ಟೇಬಲ್ ನಾರಾಯಣ ಬೆಹೆರಾ ಅವರು ಮಚಿಲ್ ಸೆಕ್ಟರ್‌ನ ಎತ್ತರದ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದರು. ನಾರಾಯಣ ಬೆಹೆರಾ (Narayana Behera) ಅವರ ವಿವಾಹವು ಮೇ 2 ರಂದು ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ರಿಮೋಟ್ ಪೋಸ್ಟ್‌ನಲ್ಲಿ ನಿಯೋಜಿಸಲಾಗಿದ್ದ ನಾರಾಯಣ ಬೆಹೆರಾ ಅವರು ಮೂಲತ ಒಡಿಶಾದವರಾಗಿದ್ದು, ತಾನು ಕೆಲಸ ಮಾಡುವ ಸ್ಥಳದಿಂದ ಸುಮಾರು 2,500 ಕಿಮೀ ದೂರದಲ್ಲಿರುವ ಒಡಿಶಾಗೆ ತಲುಪಲು ಬಿಎಸ್‌ಎಫ್ ಗುರುವಾರ ವಿಶೇಷ ಹೆಲಿಕಾಪ್ಟರ್ ಅನ್ನು ನೀಡಿದೆ.
ಭಾರೀ ಚಿನ್ನ, ಹಣದ ದುರಾಸೆಯಿಂದ ನಿವೃತ್ತ ಯೋಧನ ಹತ್ಯೆ, ಹಂತಕರಿಗೆ ಸಿಕ್ಕಿದ್ದು ಪುಡಿಗಾಸು!
ಗಡಿ ನಿಯಂತ್ರಣ ರೇಖೆಯ ಮಚಿಲ್ ಸೆಕ್ಟರ್‌ನಲ್ಲಿ(Machil sector) ಕರ್ತವ್ಯ ನಿರ್ವಹಿಸುತ್ತಿರುವ ನಾರಾಯಣ ಬೆಹೆರಾ ಅವರ ವಿವಾಹವು ಮೇ 2 ರಂದು ನಡೆಯಲಿದೆ ಎಂದು ಹಿರಿಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾರಾಯಣ ಬೆಹೆರಾ ಅವರು ಕರ್ತವ್ಯ ನಿರ್ವಹಿಸುತ್ತಿರುವ ಎಲ್‌ಒಸಿ ಪೋಸ್ಟ್ ಹಿಮದಿಂದ ಆವೃತವಾಗಿರುವುದರಿಂದ ಮತ್ತು ಕಾಶ್ಮೀರ ಕಣಿವೆಯೊಂದಿಗಿನ ಅದರ ರಸ್ತೆ ಸಂಪರ್ಕವು ಪ್ರಸ್ತುತ ಕಡಿತಗೊಂಡಿರುವುದರಿಂದ ಈ ಸ್ಥಳಗಳಲ್ಲಿ ನಿಯೋಜಿಸಲಾದ ಸೈನಿಕರಿಗೆ ಮಿಲಿಟರಿ ವಾಯು ಸೇವೆಯೊಂದೇ ಲಭ್ಯವಿರುವ ಏಕೈಕ ಸಾರಿಗೆ ಮಾರ್ಗವಾಗಿದೆ ಎಂದು ಅವರು ಅಧಿಕಾರಿ ಹೇಳಿದರು.
ಯೋಧನ ಪೋಷಕರು ಇತ್ತೀಚೆಗೆ ಅವರ ಘಟಕದ ಕಮಾಂಡರ್‌ಗಳನ್ನು ಸಂಪರ್ಕಿಸಿದರು ಹಾಗೂ ರಸ್ತೆ ಸಂಪರ್ಕವಿಲ್ಲದ ಕಾರಣ ತಮ್ಮ ಮಗ ಮದುವೆಗೆ ಬರಲು ಸಾಧ್ಯವಾಗದ ಆತಂಕವನ್ನು ವ್ಯಕ್ತಪಡಿಸಿದರು. ಹೇಳಿದ ದಿನಾಂಕಕ್ಕೆ ಸರಿಯಾಗಿ ಮದುವೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರಿಂದ ಬೆಹರಾ ಪೋಷಕರು ಆತಂಕಕ್ಕೊಳಗಾಗಿದ್ದರು ಎಂದು ಅಧಿಕಾರಿಗಳು ಹೇಳಿದರು.
ನಂತರ ಈ ವಿಷಯವನ್ನು ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ (ಕಾಶ್ಮೀರ ಗಡಿಭಾಗ) ರಾಜಾ ಬಾಬು ಸಿಂಗ್ (Raja Babu Singh) ಅವರಿಗೆ ತಿಳಿಸಲಾಯಿತು. ಹೀಗಾಗಿ ಅವರು ತಕ್ಷಣವೇ ಶ್ರೀನಗರದಲ್ಲಿ ಬೀಡುಬಿಟ್ಟಿರುವ ಬಿಎಸ್‌ಎಫ್ ಪಡೆಯ ಚೀತಾ ಹೆಲಿಕಾಪ್ಟರ್ (Cheetah helicopter) ಮೂಲಕ ನಾರಾಯಣ್ ಬೆಹರಾ ಅವರನ್ನು ಊರಿಗೆ ಕಳುಹಿಸಬೇಕೆಂದು ಆದೇಶಿಸಿದರು.
ಶತ್ರುಗಳ ದಾಳಿಗೆ ಎದೆಗುಂದಲಿಲ್ಲ ಚಿಮನ್ ಸಿಂಗ್, ವೀರನನ್ನು ನೋಡಲು ಬಾಂಗ್ಲಾ ಆಸ್ಪತ್ರೆಗೆ ತೆರಳಿದ್ದ ಇಂದಿರಾ
ಹೀಗಾಗಿ ಹೆಲಿಕಾಪ್ಟರ್ ಗುರುವಾರ ಮುಂಜಾನೆ ಬೆಹೆರಾ ಅವರನ್ನು ಶ್ರೀನಗರಕ್ಕೆ (Srinagar) ಕರೆತಂದಿತು. ಇದೀಗ ಅವರು ಒಡಿಶಾದ ಧೆಂಕನಲ್ (Dhenkanal) ಜಿಲ್ಲೆಯ ಆದಿಪುರ(Adipur) ಗ್ರಾಮದ ತಮ್ಮ ಮನೆಗೆ ತೆರಳುತ್ತಿದ್ದಾರೆ. ಸೈನಿಕರ ಕಲ್ಯಾಣವು ತನ್ನ ಮೊದಲ ಮತ್ತು ಅಗ್ರಗಣ್ಯ ಆದ್ಯತೆಯಾಗಿದೆ ಎಂದು ಐಜಿ ಸಿಂಗ್ (IG Singh) ಅವರು ಹೇಳಿದ್ದಾರೆ.