Asianet Suvarna News Asianet Suvarna News

ಜಾಗತಿಕ ಉಗ್ರ ಪಟ್ಟಿಗೆ 26/11 ಆರೋಪಿ ಸಾಜಿದ್‌ ಮಿರ್‌: ಭಾರತದ ಪ್ರಯತ್ನಕ್ಕೆ ಚೀನಾ ತಡೆ; ಡ್ರ್ಯಾಗನ್‌ ರಾಷ್ಟ್ರದ ಬಣ್ಣ ಬಯಲು

ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಾಜಿದ್ ಮಿರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಚೀನಾ ನಿರಾಕರಿಸಿದ ಬೆನ್ನಲ್ಲೇ, ಈ ಬಗ್ಗೆ ಟೀಕೆ ಮಾಡಿದ ಭಾರತ ‘’ಕ್ಷುಲ್ಲಕ ಭೌಗೋಳಿಕ ರಾಜಕೀಯ ಹಿತಾಸಕ್ತಿ" ಎಂದು ಗುರುವಾರ ಬಣ್ಣಿಸಿದೆ.

petty geopolitical interests india on china blocking bid to blacklist 26 11 accused sajid mir ash
Author
First Published Jun 21, 2023, 10:48 AM IST

ನವದೆಹಲಿ (ಜೂನ್ 21, 2023): 26/11 ಆರೋಪಿ ಸಾಜಿದ್ ಮಿರ್ ಅವರನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಚೀನಾ ತಣ್ಣೀರೆರಚಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಾಜಿದ್ ಮಿರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯಲ್ಲಿ ಘೋಷಿಸಲು ಚೀನಾ ತಡೆಯೊಡ್ಡಿದೆ. ಈ ಹಿನ್ನೆಲೆ ಡ್ರ್ಯಾಗನ್‌ ರಾಷ್ಟ್ರದ ವಿರುದ್ಧ ವಿದೇಶಾಂಗ ಸಚಿವಾಲಯ ತರಾಟೆಗೆ ತೆಗೆದುಕೊಂಡಿದೆ. 

ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಾಜಿದ್ ಮಿರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಚೀನಾ ನಿರಾಕರಿಸಿದ ಬೆನ್ನಲ್ಲೇ, ಈ ಬಗ್ಗೆ ಟೀಕೆ ಮಾಡಿದ ಭಾರತ ‘’ಕ್ಷುಲ್ಲಕ ಭೌಗೋಳಿಕ ರಾಜಕೀಯ ಹಿತಾಸಕ್ತಿ" ಎಂದು ಗುರುವಾರ ಬಣ್ಣಿಸಿದೆ.

ಇದನ್ನು ಓದಿ: ಸ್ಟಾರ್‌ವಾರ್‌ ಶೈಲಿ ಯುದ್ಧನೌಕೆಗೆ ಚೀನಾ ಸಜ್ಜು: ಇತರೆ ದೇಶಗಳಿಗಿಂತ 100 ವರ್ಷ ಮುಂದೆ ಹೋಗಲು ಪ್ಲ್ಯಾನ್!

ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಸಭೆಯಲ್ಲಿ ಮಾತನಾಡಿದ UN ರಾಜಕೀಯದ ಜಂಟಿ ಕಾರ್ಯದರ್ಶಿ ಪ್ರಕಾಶ್ ಗುಪ್ತಾ, 'ಕ್ಷುಲ್ಲಕ ಭೌಗೋಳಿಕ ರಾಜಕೀಯ ಹಿತಾಸಕ್ತಿಗಳಿಗಾಗಿ' ಚೀನಾ ಈ ಪ್ರಸ್ತಾಪವನ್ನು ನಿರ್ಬಂಧಿಸಿದೆ ಎಂದು ಹೇಳಿದ್ದಾರೆ. 

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಚೀನಾ ಯುಎನ್‌ನಲ್ಲಿ ಸಾಜಿದ್‌ ಮೀರ್‌ ಅನ್ನು ನೇಮಿಸುವ ಪ್ರಸ್ತಾಪವನ್ನು ತಡೆಹಿಡಿದಿದೆ ಎಂದು ತಿಳಿದುಬಂದಿದ್ದು, ನಂತರ ಬೀಜಿಂಗ್‌ ಈಗ ಈ ಪ್ರಸ್ತಾವನೆಯನ್ನು ನಿರ್ಬಂಧಿಸಿದೆ.

ಇದನ್ನೂ ಓದಿ: ಭಾರತ ಯಾವುದೇ ದೇಶದ ಮಿಲಿಟರಿ ಮೈತ್ರಿಯ ಭಾಗವಾಗಿಲ್ಲ: ಅಮೆರಿಕ ಜತೆಗಿನ ಸಂಬಂಧದ ಬಗ್ಗೆ ಚೀನಾಗೆ ಸ್ಪಷ್ಟನೆ

ಸಾಜಿದ್ ಮಿರ್‌ ಯಾರು?
ಸಾಜಿದ್‌ ಮಿರ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದು, 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿನ ಪಾತ್ರಕ್ಕಾಗಿ ಅಮೆರಿಕ ಈತನ ತಲೆಯ ಮೇಲೆ 5 ಮಿಲಿಯನ್ ಅಮೆರಿಕ ಡಾಲರ್‌ ಬಹುಮಾನ ನೀಡಿದೆ. ಕಳೆದ ವರ್ಷ ಜೂನ್‌ನಲ್ಲಿ, ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಭಯೋತ್ಪಾದನೆ-ಹಣಕಾಸು ಪ್ರಕರಣದಲ್ಲಿ ಸಾಜಿದ್‌ ಮಿರ್‌ನನ್ನು 15 ವರ್ಷಗಳ ಕಾಲ ಜೈಲಿನಲ್ಲಿರಿಸಿತ್ತು.

ಇನ್ನು, ಪಾಕಿಸ್ತಾನಿ ಅಧಿಕಾರಿಗಳು ಈ ಹಿಂದೆ ಸಾಜಿದ್‌ ಮಿರ್ ಸತ್ತಿದ್ದಾರೆ ಎಂದು ಹೇಳಿದ್ದರಾದರೂ, ಪಾಶ್ಚಿಮಾತ್ಯ ದೇಶಗಳು ಅದನ್ನು ನಂಬಿರಲಿಲ್ಲ ಹಾಗೂ ಆ ಬಗ್ಗೆ ಪುರಾವೆ ಒದಗಿಸುವಂತೆ ಆಗ್ರಹಿಸಿದ್ದವು. ಹಾಗೂ, ಕಳೆದ ವರ್ಷದ ಕೊನೆಯಲ್ಲಿ ಪಾಕಿಸ್ತಾನದ ಪ್ರಗತಿಯನ್ನು ಮೌಲ್ಯಮಾಪನ ಮಾಡುವ FATF ಸಹ ಇದನ್ನು ಪ್ರಮುಖವಾಗಿ ಚರ್ಚಿಸಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಚೀನಾದ ರಕ್ಷಣಾ ಬಜೆಟ್‌ 18 ಲಕ್ಷ ಕೋಟಿಗೆ ಏರಿಕೆ: ಭಾರತಕ್ಕಿಂತ 3 ಪಟ್ಟು ಹೆಚ್ಚು ರಕ್ಷಣಾ ಬಜೆಟ್‌

ಸಾಜಿದ್‌ ಮಿರ್ ಪಾಕಿಸ್ತಾನ ಮೂಲದ ಎಲ್‌ಇಟಿಯ ಹಿರಿಯ ಸದಸ್ಯನಾಗಿದ್ದು, ನವೆಂಬರ್ 2008 ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಭಾರತ, ಅಮೆರಿಕಕ್ಕೆ ಬೇಕಾಗಿದ್ದಾನೆ. "ದಾಳಿಗಳಿಗೆ ಸಾಜಿದ್‌ ಮಿರ್ ಎಲ್ಇಟಿ ಕಾರ್ಯಾಚರಣೆಯ ವ್ಯವಸ್ಥಾಪಕರಾಗಿದ್ದರು. ಅವರು 26 / 11 ಉಗ್ರ ದಾಳಿಯಲ್ಲಿ ಯೋಜನೆ, ಸಿದ್ಧತೆ ಮತ್ತು ಮರಣದಂಡನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿದೆ.

ಇದನ್ನೂ ಓದಿ: ಅದಾನಿ ಗೆಳೆತನದ ವಿದೇಶಿ ಕಂಪನಿಗೆ ರಕ್ಷಣಾ ಗುತ್ತಿಗೆ? ರಾಷ್ಟ್ರೀಯ ಭದ್ರತೆ ಅಪಾಯದಲ್ಲಿ ಎಂದು ವಿಪಕ್ಷ ಹೊಸ ಆರೋಪ

Follow Us:
Download App:
  • android
  • ios