Asianet Suvarna News Asianet Suvarna News

ಭಾರತ ಯಾವುದೇ ದೇಶದ ಮಿಲಿಟರಿ ಮೈತ್ರಿಯ ಭಾಗವಾಗಿಲ್ಲ: ಅಮೆರಿಕ ಜತೆಗಿನ ಸಂಬಂಧದ ಬಗ್ಗೆ ಚೀನಾಗೆ ಸ್ಪಷ್ಟನೆ

ಭಾರತದ ಪ್ರಾದೇಶಿಕ ಭದ್ರತೆಯಲ್ಲಿ ಅಮೆರಿಕದ ಪಾತ್ರವನ್ನು ಭಾರತ ಹೇಗೆ ನೋಡಿದೆ ಮತ್ತು ಅದು ತನ್ನನ್ನು ನಾಯಕನಾಗಿ ನೋಡುತ್ತದೆಯೇ ಅಥವಾ ಹಿಂದೂ ಮಹಾಸಾಗರದ ಭದ್ರತೆಯಲ್ಲಿ ಸಮಾನ ಭಾಗಿಯೇ ಎಂದು ಚೀನಾ ಪ್ರಶ್ನೆ ಮಾಡಿದೆ. 

india is not part of any military alliance deputy nsa shuts door on chinese doubts on ties with us ash
Author
First Published Jun 6, 2023, 5:59 PM IST

ನವದೆಹಲಿ (ಜೂನ್ 6, 2023): ಭಾರತ ಮತ್ತು ಅಮೆರಿಕ ಅನೇಕ ವಿಚಾರಗಳಲ್ಲಿ ಹತ್ತಿರವಾಗುತ್ತಿದ್ದು, ಇದರಿಂದ ಚೀನಾ ಸಹಜವಾಗಿ ಕೆರಳಿದೆ. ಆದರೆ, ತಮ್ಮ ಸಂಬಂಧದ ಬಗ್ಗೆ ಎರಡೂ ದೇಶಗಳು ಸ್ಪಷ್ಟನೆ ನೀಡಿದೆ. ಭಾರತ ಮತ್ತು ಅಮೆರಿಕ ಮಿಲಿಟರಿ ಮೈತ್ರಿಯಲ್ಲಿಲ್ಲ ಎಂದು ಮನವರಿಕೆ ಮಾಡಿದೆ. ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಐಐಎಸ್ಎಸ್ ಶಾಂಗ್ರಿ-ಲಾ ಡೈಲಾಗ್ 2023 ರ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿದ ಭಾರತದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ವಿಕ್ರಮ್ ಮಿಸ್ರಿ ಮತ್ತು ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್ ಕಮಾಂಡರ್ ಅಡ್ಮಿರಲ್ ಜಾನ್ ಅಕ್ವಿಲಿನೊ ಅವರು ಹಿಂದೂ ಮಹಾಸಾಗರದಲ್ಲಿ ಯುನೈಟೆಡ್ ಸ್ಟೇಟ್ಸ್ ಜೊತೆಗಿನ ಸಹಯೋಗವನ್ನು ಬಲಪಡಿಸಿರುವ ಬಗ್ಗೆ ಚೀನಾದ ಮಿಲಿಟರಿ ಪ್ರತಿನಿಧಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದರು. 

ಭಾರತದ ಪ್ರಾದೇಶಿಕ ಭದ್ರತೆಯಲ್ಲಿ ಅಮೆರಿಕದ ಪಾತ್ರವನ್ನು ಭಾರತ ಹೇಗೆ ನೋಡಿದೆ ಮತ್ತು ಅದು ತನ್ನನ್ನು ನಾಯಕನಾಗಿ ನೋಡುತ್ತದೆಯೇ ಅಥವಾ ಹಿಂದೂ ಮಹಾಸಾಗರದ ಭದ್ರತೆಯಲ್ಲಿ ಸಮಾನ ಭಾಗಿಯೇ ಎಂಬ ಚೀನಾದ ಪ್ರತಿನಿಧಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಕ್ರಮ್‌ ಮಿಸ್ರಿ, ಈ ಪ್ರಶ್ನೆಯು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಎಂಗೇಜ್‌ಮೆಂಟ್‌ ಮತ್ತು ಸಂಬಂಧಗಳ ಮೇಲೆ ಕೇಂದ್ರೀಕೃತವಾಗಿದ್ದು, ಮತ್ತು ಪ್ರಶ್ನೆಯಲ್ಲಿ ಕೆಲವು ಗುಣಲಕ್ಷಣಗಳಿವೆ, ಅದನ್ನು ನಾನು ಅಗತ್ಯವಾಗಿ ಒಪ್ಪುವುದಿಲ್ಲ.

ಇದನ್ನು ಓದಿ: ಭಾರತೀಯ ಸೇನೆ ಮತ್ತಷ್ಟು ಬಲಿಷ್ಠವಾಗಲು, ಭವಿಷ್ಯಕ್ಕೆ ಸಿದ್ಧಗೊಳಿಸಲು ನೆರವಾಗಲಿವೆ ಈ ಯೋಜನೆಗಳು!

ಮೊದಲನೆಯದಾಗಿ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಬಲವಾದ ಮತ್ತು ದೃಢವಾದ ರಕ್ಷಣಾ ಹಾಗೂ ಮಿಲಿಟರಿ ಸಂಬಂಧವನ್ನು ಹೊಂದಿವೆ ಎಂದು ನಾನು ಹೇಳುತ್ತೇನೆ. ನಾವು ವಿವಿಧ ಕ್ಷೇತ್ರಗಳಲ್ಲಿ ಸಹಕರಿಸುತ್ತೇವೆ. ನಾವು ಯುನೈಟೆಡ್ ಸ್ಟೇಟ್ಸ್‌ನ ಪಾಲುದಾರರಾಗಿದ್ದೇವೆ ಮತ್ತು ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ವಿವಿಧ ಒಪ್ಪಂದಗಳನ್ನು ಅಂತ್ಯಗೊಳಿಸಲು ಅಂತಹ ಸಂಬಂಧಗಳ ಸಾಮಾನ್ಯ ಲಕ್ಷಣವಾಗಿದೆ. ಇದನ್ನು ನೀವು ಗುಪ್ತಚರ ಸಂವಹನ ಎನ್ನುತ್ತೀರಿ’’ ಎಂದೂ ಹೇಳಿದ್ದಾರೆ.

ಎರಡನೆಯದಾಗಿ, ವ್ಯಾಖ್ಯಾನಕಾರ ನಿಮಗೆ ಸರಿಯಾಗಿ ಅನುವಾದಿಸಿದ್ದಾರೆಯೇ ಎಂದು ನನಗೆ ತಿಳಿದಿಲ್ಲ, ಆದರೆ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ದ್ವಿಪಕ್ಷೀಯ ಮಿಲಿಟರಿ ಮೈತ್ರಿಯ ವಿಚಾರದ ಬಗ್ಗೆ ಸ್ಪಷ್ಟನೆ ನೀಡ್ಬೆಕಂದ್ರೆ, ಭಾರತವು ಮಿಲಿಟರಿ ಮೈತ್ರಿಗಳಲ್ಲಿ ಪಾಲುದಾರನಾಗುವುದನ್ನು ನಂಬುವುದಿಲ್ಲ. ಆದರೂ ನಾವು ಮಿಲಿಟರಿ ಮತ್ತು ರಕ್ಷಣಾ ಕ್ಷೇತ್ರಗಳು ಸೇರಿದಂತೆ ಹಲವು ದೇಶಗಳಿಗೆ ಪಾಲುದಾರರಾಗಿದ್ದೇವೆ. ಮೈತ್ರಿಯು ಅದಕ್ಕೆ ವಿಭಿನ್ನವಾದ ಪ್ರಸ್ತಾಪವಾಗಿದೆ ಮತ್ತು ಅದಕ್ಕೆ ವಿಭಿನ್ನವಾದ ವ್ಯಾಖ್ಯಾನವಾಗಿದೆ. ಈ ಹಿನ್ನೆಲೆ ನಾವು ಯಾವುದೇ ಮಿಲಿಟರಿ ಮೈತ್ರಿಯ ಭಾಗವಾಗಿಲ್ಲ ಎಂದು ನಾನು ಹೇಳುತ್ತೇನೆ’’ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಮೇಕ್‌ ಇನ್‌ ಇಂಡಿಯಾ ಹೆಸರಲ್ಲಿ ಕಡಿಮೆ ಗುಣಮಟ್ಟದ ಯುದ್ಧ ವಿಮಾನ ಖರೀದಿ? ದೇಶೀಯ ರಕ್ಷಣಾ ಉತ್ಪಾದನೆ ವಿಚಾರದಲ್ಲಿ ಚರ್ಚೆ

ಇನ್ನು, ಮುಕ್ತ ಮತ್ತು ಒಳಗೊಳ್ಳುವಿಕೆಯ ಹಿಂದೂ ಮಹಾಸಾಗರಕ್ಕೆ ಬೇಡಿಕೆ ಇಡುತ್ತಿರುವ ಚೀನಾ ವಿರುದ್ಧ ಆರೋಪ ಮಾಡಿದ ಡೆಪ್ಯೂಟಿ NSA, 'ನಾವು ಭಾಗವಾಗಿರುವ ಎಲ್ಲಾ ಕಾರ್ಯವಿಧಾನಗಳಲ್ಲಿ ಸಮಾನ ಭಾಗಿಗಳಾಗಿ ನಮ್ಮನ್ನು ನೋಡುತ್ತೇವೆ. ಆ ಸಮಾನತೆಯು ನಾನು ಮಾತನಾಡಿದ ಈ ಹಲವು ಕಾರ್ಯವಿಧಾನಗಳು ಮತ್ತು ವೇದಿಕೆಗಳ ಅಡಿಪಾಯದ ತತ್ವವಾಗಿದೆ. ಹಾಗಾಗಿ ಯಾರಾದರೂ ನಾಯಕರಾಗುವುದು ಹಾಗೂ ಉಳಿದವರು ಹಿಂಬಾಲಕರಾಗುವ ಪ್ರಶ್ನೆಯೇ ಇಲ್ಲ. ನಾನು ಹೇಳಿದ ಈ ಪ್ರಾದೇಶಿಕ ರಚನೆಗಳಲ್ಲಿ ನಾವೆಲ್ಲರೂ ಸಮಾನ ಭಾಗಿಗಳಾಗಿದ್ದೇವೆ.' ಎಂದೂ ಸ್ಪಷ್ಟನೆ ನೀಡಿದರು.

'ಖಂಡಿತವಾಗಿಯೂ ಅದು ಮುಕ್ತವಾಗಿರಬೇಕು ಮತ್ತು ಒಳಗೊಳ್ಳುವಿಕೆ ಇರಬೇಕು. ಎಲ್ಲೆಡೆ ಸಹಯೋಗವು ಮುಕ್ತವಾಗಿರಬೇಕು ಮತ್ತು ಒಳಗೊಳ್ಳಬೇಕು. ಮತ್ತು ವಾಸ್ತವವಾಗಿ, ನಾನು ತಪ್ಪಾಗಿ ಭಾವಿಸದಿದ್ದರೆ ಅದು ಇಂಡೋ-ಪೆಸಿಫಿಕ್‌ನ ಭಾರತದ ಪರಿಕಲ್ಪನೆಯಲ್ಲಿದೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಒಳಗೊಳ್ಳುವಿಕೆ ಖಂಡಿತವಾಗಿಯೂ ನಮ್ಮ ಚಿಂತನೆಯ ಒಂದು ಭಾಗವಾಗಿದೆ ಮತ್ತು ಈ ರಚನೆಗಳ ನಮ್ಮ ವ್ಯಾಖ್ಯಾನವಾಗಿದೆ. ಆದರೆ ನೀವು ಭಾಗವಹಿಸುವಿಕೆಯ ವಿಷಯದಲ್ಲಿ ಮುಕ್ತತೆ ಮತ್ತು ಒಳಗೊಳ್ಳುವಿಕೆಯ ಬಗ್ಗೆ ಮಾತನಾಡುತ್ತಿರುವುದರಿಂದ, ಈ ತತ್ವವನ್ನು ಸಮಾನವಾಗಿ ಮತ್ತು ಬೇರೆ ಬೇರೆ ಭೌಗೋಳಿಕತೆಗಳಲ್ಲಿ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದೂ ಭಾರತದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ವಿಕ್ರಮ್ ಮಿಸ್ರಿ ಹೇಳಿದ್ದಾರೆ.

ಇದನ್ನೂ ಓದಿ: ಅದಾನಿ ಗೆಳೆತನದ ವಿದೇಶಿ ಕಂಪನಿಗೆ ರಕ್ಷಣಾ ಗುತ್ತಿಗೆ? ರಾಷ್ಟ್ರೀಯ ಭದ್ರತೆ ಅಪಾಯದಲ್ಲಿ ಎಂದು ವಿಪಕ್ಷ ಹೊಸ ಆರೋಪ

ಅದೇ ರೀತಿ, ಅಡ್ಮಿರಲ್ ಜಾನ್ ಅಕ್ವಿಲಿನೊ ಕೂಡ, ಯುನೈಟೆಡ್ ಸ್ಟೇಟ್ಸ್ ಖಂಡಿತವಾಗಿಯೂ ಭಾರತದೊಂದಿಗೆ ಮಿಲಿಟರಿ ಮೈತ್ರಿ ಹೊಂದಿಲ್ಲ ಎಂದು ಹೇಳಿದರು.

'QUAD ಮಿಲಿಟರಿ ಸಂಬಂಧವಲ್ಲ'
ಅಲ್ಲದೆ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಕ್ವಾಡ್ ಮೈತ್ರಿಯು ಮಿಲಿಟರಿ ಸಂಬಂಧವಲ್ಲ, ಆದರೆ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧವಾಗಿದೆ ಎಂದೂ ಎರಡೂ ರಾಷ್ಟ್ರಗಳು ಸ್ಪಷ್ಟಪಡಿಸಿವೆ. 

ಇದನ್ನೂ ಓದಿ: ಚೀನಾದ ರಕ್ಷಣಾ ಬಜೆಟ್‌ 18 ಲಕ್ಷ ಕೋಟಿಗೆ ಏರಿಕೆ: ಭಾರತಕ್ಕಿಂತ 3 ಪಟ್ಟು ಹೆಚ್ಚು ರಕ್ಷಣಾ ಬಜೆಟ್‌

Follow Us:
Download App:
  • android
  • ios