ಕೃಷ್ಣಜನ್ಮಭೂಮಿ ವಿವಾದ: ಜಾಮಾ ಮಸೀದಿ ಸರ್ವೆಗೆ ಮಥುರಾ ಕೋರ್ಟ್‌ನಲ್ಲಿ ಮನವಿ!

ರಾಮ ಜನ್ಮಭೂಮಿ ವಿವಾದ ಅಂತ್ಯವಾದ ಬೆನ್ನಲ್ಲೇ ಕೃಷ್ಣ ಜನ್ಮಭೂಮಿ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಕಾಶೀ ವಿಶ್ವನಾಥ ದೇವಾಲಯ ಸಂಕೀರ್ಣ ಸಮೀಕ್ಷೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಇದೀಗ, ಜಾಮಾ ಮಸೀದಿ ಅಡಿಯಲ್ಲಿ ಕೃಷ್ಣನ ವಿಗ್ರಹ ಹೂಳಲಾಗಿದೆ ಅನ್ನೋದನ್ನು ತಿಳಿಯಲು ASI ರೇಡಿಯಾಲಜಿ ಸರ್ವೆಗೆ ಮಥುರಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿದೆ.

Petition filed in Mathura court seeking a ground radiology test of Agra Jama Masjid ckm

ಮಥುರಾ(ಏ.15):  ಕಾಶೀ ವಿಶ್ವನಾಥ ದೇವಾಲಯ ಧ್ವಂಸಗೊಳಿಸಿ ಮಸೀದಿ ನಿರ್ಮಿಸಲಾಗಿದೆ ಅನ್ನೋ ವಾದದಲ್ಲಿ ಸತ್ಯವಿದೆಯೇ ಅನ್ನೋದನ್ನು ಬಹಿರಂಗ ಪಡಿಸಿಲು ವಾರಣಾಸಿ ನ್ಯಾಯಾಲಯ ಪುರಾತತ್ವ ಇಲಾಖೆಗೆ ಸಮೀಕ್ಷೆ ನಡೆಸಲು ಸೂಚಿಸಿದೆ. ಇದರ ಬೆನ್ನಲ್ಲೇ ಇದೀಗ ಮಥುರಾ ನ್ಯಾಯಾಲಯದಲ್ಲಿ ಕೃಷ್ಣ ಜನ್ಮಬೂಮಿ ವಿವಾದ ಕುರಿತು ಮನವಿಯೊಂದು ಸಲ್ಲಿಕೆಯಾಗಿದೆ.

ಕೃಷ್ಣ ಜನ್ಮಭೂಮಿ ವಿವಾದ: ಮಸೀದಿ ತೆರವು ಅರ್ಜಿ ರದ್ದತಿಗೆ ಕೋರ್ಟ್ ಹತ್ತಿದ ಶಾಹಿ ಈದ್ಗಾ ಸಮಿತಿ!

ಮಥುರಾ ಜನ್ಮಭೂಮಿ ವಿವಾದವೂ ಹಲವು ದಶಕಗಳಿಂದ ನಡೆಯುತ್ತಿದೆ. ಇದೀಗ ಮಥುರಾ ಕೃಷ್ಣ ಜನ್ಮಭೂಮಿಯಲ್ಲಿ ಶ್ರೀಕೃಷ್ಣನ ಮಂದಿರವನ್ನು ಕೆಡವಿ, ಇಲ್ಲಿನ ವಿಗ್ರಹಗಳನ್ನು ಆಗ್ರಾದ ಜಾಮಾ ಮಸೀದಿ ಅಡಿಯಲ್ಲಿ  ಹೂಳಲಾಗಿದೆ. ಈ ಕುರಿತು ಸತ್ಯ ಬಹಿರಂಗ ಪಡಿಸಲು  ಪುರಾತತ್ವ ಇಲಾಖೆ ರೇಡಿಯಾಲಜಿ ಸರ್ವೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ. 

ಕೃಷ್ಣನ ವಂಶಸ್ಥರೆಂದು ಹೇಳಿಕೊಳ್ಳುವ ಮನೀಶ್ ಯಾದವ್ ಹಾಗೂ ಮಥುರಾ ಕೃಷ್ಣದೇವಾಲಯ ಕುರಿತು ಹೋರಾಟ ಮಾಡುತ್ತಿರುವ ವಕೀಲ ಶೈಲೇಂದ್ರ ಸಿಂಗ್ ಈ ಮನವಿ ಸಲ್ಲಿಸಿದ್ದಾರೆ. ಎಎಸ್ಐ ರೇಡಿಯಾಲಜಿ ಸರ್ವೆಯಲ್ಲಿ ಮಸೀದಿ ಅಡಿಯಲ್ಲಿ ದೇವಾಲಯವಿದೆಯಾ ಅನ್ನೋ ಮಾಹಿತಿ ತಿಳಿಯಲಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. 

ಅಯೋಧ್ಯೆ ಬೆನ್ನಲ್ಲೇ ಕೋರ್ಟ್‌ ಮೆಟ್ಟಿಲೇರಿದ ಕೃಷ್ಣ ಜನ್ಮಭೂಮಿ ವಿವಾದ, ಈದ್ಗಾ ಮರೆಯಾಗುತ್ತಾ?

ಮೊಘಲ್ ದಾಳಿಕೋರ ಔರಂಗಜೇಬ್ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನದಲ್ಲಿದ್ದ ಕೃಷ ದೇವಸ್ಥಾನ ಧ್ವಂಸಗೊಳಿದ್ದಾನೆ. ಬಳಿಕ ಭಗವಾನ್ ಕೃಷ್ಣನ ವಿಗ್ರಹಗಳನ್ನು ಮಥುರಾದಿಂದ ಆಗ್ರಾಗೆ ಸಾಗಿಸಲಾಗಿದೆ. ಆಗ್ರಾದಲ್ಲಿ ನಿರ್ಮಿಸಿದ ಜಾಮಾ ಮಸೀದಿ ಅಡಿಯಲ್ಲಿ ಈ ವಿಗ್ರಹಗಳನ್ನೂ ಹೂತು ಹಾಕಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Latest Videos
Follow Us:
Download App:
  • android
  • ios