ಕೃಷ್ಣ ಜನ್ಮಭೂಮಿ ವಿವಾದ: ಮಸೀದಿ ತೆರವು ಅರ್ಜಿ ರದ್ದತಿಗೆ ಕೋರ್ಟ್ ಹತ್ತಿದ ಶಾಹಿ ಈದ್ಗಾ ಸಮಿತಿ!
ಕೃಷ್ಣ ಜನ್ಮಭೂಮಿ ವಿವಾದ ತೀವ್ರಗೊಳ್ಳುತ್ತಿದೆ. ಕೃಷ್ಣ ದೇಗುಲ ಹಾಗೂ ಅಲ್ಲಿರುವ ಶಾಹಿ ಮಸೀದಿಯನ್ನು ತೆರವುಗೊಳಿಸಲು ಈಗಾಗಲೇ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿ ಅಂಗೀಕರಿಸಲಾಗಿದೆ..ಇದೀಗ ಶಾಹಿ ಈದ್ಗಾ ಸಮಿತಿ, ಈ ಅರ್ಜಿಯನ್ನು ರದ್ದುಗೊಳಿಸುವಂತೆ ಕೋರ್ಟ್ ಮೆಟ್ಟಿಲೇರಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಮಥುರಾ(ಜ.08): ರಾಮಜನ್ಮ ಭೂಮಿ ವಿವಾದ ಇತ್ಯರ್ಥಗೊಂಡಿದೆ. ಆದರೆ ಕೃಷ್ಣ ಜನ್ಮ ಭೂಮಿ ವಿವಾದ ಮಾತ್ರ ಇನ್ನೂ ಬಗೆ ಹರಿದಿಲ್ಲ. ಇದೀಗ ಕೃಷ್ಣ ಜನ್ಮಭೂಮಿಗಾಗಿ ಕಾನೂನು ಹೋರಾಟ ತೀವ್ರಗೊಂಡಿದೆ. ಕೃಷ್ಣ ದೇಗುಲದ ಆವರಣದಲ್ಲಿರುವ 13.7 ಏಕರೆ ಜಮೀನನ್ನು ಮರಳಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ಅಂಕಗೀರಿಸಿದೆ. ಇದುಗ ಇದೇ ಕೃಷ್ಣ ಜನ್ಮ ಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿ ಸಮಿತಿಗೆ ಆತಂಕ ತಂದಿದೆ. ಹೀಗಾಗಿ ತಕ್ಷಣವೇ ಶಾಹಿ ಈದ್ಗಾ ಸಮಿತಿ ಈ ಮೇಲ್ಮನವಿಯನ್ನು ಆಕ್ಷೇಪಿಸಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಅಯೋಧ್ಯೆ ಬೆನ್ನಲ್ಲೇ ಕೋರ್ಟ್ ಮೆಟ್ಟಿಲೇರಿದ ಕೃಷ್ಣ ಜನ್ಮಭೂಮಿ ವಿವಾದ, ಈದ್ಗಾ ಮರೆಯಾಗುತ್ತಾ?
ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ ಸೇರಿದಂತೆ ಐವರು ಶಾಹಿ ಈದ್ಗಾ ಮಸೀದಿ ಹಾಗೂ ಒಟ್ಟು 13.7 ಏಕರೆ ಸ್ಥಳವನ್ನು ಮರಳಿ ನೀಡಬೇಕು ಎಂದು ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇನ್ನು 1968ರಲ್ಲಿ ದೇವಾಲಯ ಆಡಳಿತ ಮಂಡಳಿ ಹಾಗೂ ಮಸೀದಿ ಸಮಿತಿ ನಡುವಿನ ರಾಜಿ ತೀರ್ಪನ್ನು ರದ್ದುಗೊಳಿಸುವಂತೆ ಕೋರಿದೆ.
ಈ ಮೇಲ್ಮನವಿ ಅಂಗೀಕರಿಸಿದ ಕಾರಣ ಇದೀಗ ಶಾಹಿ ಈದ್ಗಾ ಕಾನೂನು ಹೋರಾಟಕ್ಕೆ ಇಳಿದೆ. ಇದಕ್ಕೆ ಮುಖ್ಯ ಕಾರಣವೂ ಇದೆ. ಕೃಷ್ಣ ಜನ್ಮಭೂಮಿಯಲ್ಲಿ ಕೃಷ್ಣನ ಕೇಶವದೇವ ದೇವಾಲಯವಿತ್ತು. ಆದರೆ 1658 ರಿಂದ 1707ರ ವರೆಗಿನ ಮೊಘಲ್ ದೊರೆ ಔರಂಗಬೇಜ ತನ್ನ ಸೈನ್ಯ ಬಳಸಿ 1670ರಲ್ಲಿ ಧ್ವಂಸಗೊಳಿಸಿ ಇಲ್ಲಿ ಮಸೀದಿ ನಿರ್ಮಿಸಿದ್ದಾನೆ. ಈ ಕುರಿತು ಇತಿಹಾಸದಲ್ಲಿ ಸ್ಪಷ್ಟ ಉಲ್ಲೇಖವಿದೆ. ಅಂದಿನಿಂದ ಕೃಷ್ಣಜನ್ಮಭೂಮಿ ವಿವಾದ ಭುಗಿಲೆದ್ದಿದೆ.
ಕೃಷ್ಣ ಜನ್ಮ ಭೂಮಿ ವಿವಾದ ಕುರಿತು 3 ಅರ್ಜಿಗಳು ಕೋರ್ಟ್‌ಗೆ ಸಲ್ಲಿಕೆಯಾಗಿದೆ. ಅರ್ಜಕರು, ಸಾಮಾಜಿಕ ಸಂಘಟನೆ ಹಾಗೂ ಹಿಂದೂ ಸೇನೆ ಕೃಷ್ಣನ ಜನ್ಮ ಸ್ಥಳದಲ್ಲಿರುವ ಮಸೀದಿ ಹಾಗೂ 13.7 ಏಕರೆ ಜಾಗವನ್ನು ಮರಳಿ ನೀಡುವಂತೆ ಅರ್ಜಿ ಸಲ್ಲಿಸಲಾಗಿದೆ. ಇದೀಗ ಕಾನೂನು ಹೋರಾಟ ತೀವ್ರಗೊಳ್ಳುತ್ತಿದೆ.