ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಪಿನ ಬೆನ್ನಲ್ಲೇ ಮತ್ತೊಂದು ವಿವಾದ|  ಕೃಷ್ಣ ಜನ್ಮಭೂಮಿಯ ಪ್ರತಿ ಇಂಚು ಜಾಗವೂ ಕೃಷ್ಣನ ಭಕ್ತರು ಹಾಗೂ ಹಿಂದೂ ಸಮುದಾಯದವರಿಗೆ ಪವಿತ್ರವಾದುದು| ಈದ್ಗಾ ಮಸೀದಿ ಕೆಡವಲು ಮನವಿ

ಮಥುರಾ(ಸೆ.26): ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಪು ಹೊರ ಬಂದಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಪಿಎಂ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಅತ್ತ ಬಾಬರಿ ಮಸೀದಿ ನಿರ್ಮಾಣಕ್ಕೂ ಭರದ ಸಿದ್ಧತೆ ಆರಂಭವಾಗಿದೆ. ಆದರೀಗ ಈ ವಿಚಾರ ಇತ್ಯರ್ಥಗೊಂಡ ಬೆನ್ನಲ್ಲೇ ಕೃಷ್ಣ ಜನ್ಮಭೂಮಿ ವಿಚಾರ ಸದ್ದು ಮಾಡಲಾರಂಭಿಸಿದೆ. ಮಥುರಾದ ನ್ಯಾಯಾಲಯದಲ್ಲಿ ಈ ವಿಚಾರವಾಗಿ ಅರ್ಜಿ ಸಲ್ಲಿಸಲಾಗಿದ್ದು, ಕೃಷ್ಣ ಜನ್ಮಭೂಮಿಯ ಪ್ರತಿ ಇಂಚು ಜಾಗವೂ ಕೃಷ್ಣನ ಭಕ್ತರು ಹಾಗೂ ಹಿಂದೂ ಸಮುದಾಯದವರಿಗೆ ಪವಿತ್ರವಾದುದು' ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಡ್ವೊಕೇಟ್ ಹರಿ ಶಂಕರ್ ಹಾಗೂ ವಿಷ್ಣು ಜೈನ್ ಕೋರ್ಟ್‌ಗೆ ಈ ಹೊಸ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಶ್ರೀ ಕೃಷ್ಣ ಜನ್ಮಭೂಮಿಯ 13.37 ಎಕರೆ ಪ್ರದೇಶದಲ್ಲಿರುವ ಶಾಹಿ ಈದ್ಗಾ ಮಸೀದಿ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. 

ಅಲ್ಲದೇ ಮಸೀದಿ ಸಮಿತಿ ಒತ್ತುವರಿ ಮಾಡಿಕೊಂಡಿರುವ ಹಾಗೂ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸುವಂತೆಯೂ ಈ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.