ದೇಶದ ಬಹುತೇಕ ಕಡೆ ಚಳಿ ಹೆಚ್ಚಾಗಿದೆ. ಹೀಗಾಗಿ ಮಂಜು ಕವಿದ ವಾತಾವರಣದಿಂದ ಅಪಘಾತಗಳ ಪ್ರಮಾಣವೂ ಹೆಚ್ಚಾಗಿದೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಕೋಳಿ ತುಂಬಿದ ಪಿಕ್ ಅಪ್ ಟ್ರಕ್ ಅಪಘಾತಕ್ಕೀಡಾಗಿದೆ. ಇತ್ತ ಇದೇ ಹೆದ್ದಾರಿಯಲ್ಲಿ ಸಾಗುತ್ತಿದ್ದ ಜನ, ಸಿಕ್ಕಿದ್ದೇ ಚಾನ್ಸ್ ಎಂದು ಪಿಕ್‌ಅಪ್‌ನಲ್ಲಿದ್ದ ಕೋಳಿಗಳನ್ನು ಹೊತ್ತೊಯ್ದಿದ್ದಾರೆ.
ಆಗ್ರ(ಡಿ.27) ದೇಶದ ಬಹುತೇಕ ಕಡೆ ವಿಪರೀತ ಚಳಿ ಅನುಭವಾಗುತ್ತಿದೆ. ಮಂಜು ಕವಿದ ವಾತಾರಣ, ಸರಿಯಾದ ಗೋಚರತೆ ಇಲ್ಲದಿರುವ ಕಾರಣ ವಿಮಾನ ಪ್ರಯಾಣ, ವಾಹನ ಪ್ರಯಾಣಗಳು ವಿಳಂಬವಾಗುತ್ತಿದೆ. ಇಷ್ಟೇ ಅಲ್ಲ ರಸ್ತೆಯಲ್ಲಿ ಹಲವು ಅಪಘಾತಗಳು ನಡೆಯುತ್ತಿದೆ. ಹೀಗೆ ಹೆದ್ದಾರಿಯಲ್ಲಿ ಕೋಳಿ ಸಾಗಿಸುತ್ತಿದ್ದ ಪಿಕ್ಅಪ್ ಅಪಘಾತಕ್ಕೀಡಾಗಿದೆ. ಹೆದ್ದಾರಿಯಲ್ಲಿ ಆದ ಆ್ಯಕ್ಸಿಡೆಂಟ್ ಕಾರಣ ಟ್ರಾಫಿಕ್ ಜಾಮ್ ಸಂಭವಿಸಿದೆ. ಇದೇ ಹೆದ್ದಾರಿ ಹಾಗೂ ಸ್ಥಳೀಯರು ಪಿಕ್‌ಅಪ್ ಚಾಲಕ ಹಾಗೂ ಇತರ ಸವಾರರಿಗೆ ಅನುಕೂಲವಾಗುವಂತೆ ನೆರವು ನೀಡುವ ಬದಲು ಪಿಕ್‌ಅಪ್‌ನಲ್ಲಿದ್ದ ಕೋಳಿಗಳನ್ನೇ ಹೊತ್ತೊಯ್ದ ಘಟನೆ ಉತ್ತರ ಪ್ರದೇಶದ ಆಗ್ರಾದ ಬಳಿ ನಡೆದಿದೆ.
ಯಮುನಾ ಎಕ್ಸ್‌ಪ್ರೆಸ್ ವೇ ಮೂಲಕ ಆಗ್ರಾದಿಂದ ನೋಯ್ಡಾಗೆ ಕೋಳಿಗಳನ್ನು ತುಂಬಿದ ಪಿಕ್ ಅಪ್ ಸಂಚರಿಸುತ್ತಿತ್ತು. ಬೆಳಗ್ಗೆ 8 ಗಂಟೆ ಹೊತ್ತಿಗೆ ಈ ಅಪಘಾತ ಸಂಭವಿಸಿದೆ. ದೆಹಲಿ, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ಬಹುತೇಕ ರಾಜ್ಯದಲ್ಲಿನ ಮಂಜು ಕವಿದ ವಾತಾವರಣದಿಂದ ಪ್ರತಿ ದಿನ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜೆವಾರ್ ಪೊಲೀಸ್ ಠಾಣ ವ್ಯಾಪ್ತಿಯ ದಯಂತಪುರ ಬಳಿ ಸಂಚರಿಸುತ್ತಿದ್ದ ವೇಳೆ ಪಿಕ್ಅಪ್ ಅಪಘಾತಕ್ಕೀಡಾಗಿದೆ.
ಕೋಳಿ ಅಂಗಡಿಯಾದ ಪಾಕಿಸ್ತಾನದ ಪ್ರಸಿದ್ಧ ರಾಮ-ಸೀತೆ ದೇವಸ್ಥಾನ!
ಈ ಅಪಘಾತದಿಂದ ಪಿಕ್‌ಅಪ್ ಚಾಲಕ ಹಾಗೂ ಸಹ ಚಾಲಕನಿಗೆ ಗಾಯವಾಗಿದೆ. ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಕಾರಣ ಟ್ರಾಫಿಕ್ ಜಾಮ್ ಸಂಭವಿಸಿದೆ. ಗಾಯಗೊಂಡ ಪಿಕ್‌ಅಪ್ ಚಾಲಕ ಹಾಗೂ ಸಹ ಚಾಲಕನಿಗೆ ನೆರವು ನೀಡುವ ಬದಲು ಪಿಕ್‌ಅಪ್‌ನಲ್ಲಿದ್ದ ಕೋಳಿಗಳನ್ನು ಹೊತ್ತೊಯ್ದಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಕೆಲ ಸವಾರರು ವಾಹನವನ್ನು ಬದಿಗೆ ತಳ್ಳಿ ಇತರ ವಾಹನದ ಸಂಚಾರಕ್ಕೆ ಅನುವು ಮಾಡಿದ್ದಾರೆ.
ಆದರೆ ಕೋಳಿ ಲಾರಿ ಅಪಘಾತಕ್ಕೀಡಾಗಿದೆ ಅನ್ನೋ ಸುದ್ದಿ ತಿಳಿದ ಅಕ್ಕ ಪಕ್ಕದ ಸ್ಥಳೀಯರು ಆಟೋ ರಿಕ್ಷಾ ಮೂಲಕ ಆಗಮಿಸಿ ಕೋಳಿಗಳನ್ನು ಹೊತ್ತೊಯ್ದಿದ್ದಾರೆ. 30 ನಿಮಿಷದಲ್ಲಿ ಪಿಕ್ಅಪ್‌ನಲ್ಲಿ ಕೋಳಿಗಳನ್ನು ಜನ ಖಾಲಿ ಮಾಡಿದ್ದಾರೆ. ಇತ್ತ ಗಾಯಗೊಂಡ ಚಾಲಕ ಹಾಗೂ ಸಹ ಚಾಲಕನಿಗೆ ಚಿಕಿತ್ಸೆ ನೀಡಲಾಗಿದೆ. ಇದರ ಬೆನ್ನಲ್ಲೇ ಕಲ ಸರಣಿ ಅಪಘಾತಗಳು ಸಂಭವಿಸಿದೆ. ಆಧರೆ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ಆಡಿಷನಲ್ ಡೆಪ್ಯೂಟಿ ಕಮಿಷನರ್ ಅಶೋಕ್ ಕುಮಾರ್ ಹೇಳಿದ್ದಾರೆ.
ಕೋಳಿ ಸಾಕಣೆ ವಾಣಿಜ್ಯ ಚಟುವಟಿಕೆ ಅಲ್ಲ, ತೆರಿಗೆ ವಿಧಿಸಲು ಗ್ರಾಪಂಚಾಯ್ತಿಗೆ ಅಧಿಕಾರವಿಲ್ಲ: ಹೈಕೋರ್ಟ್
