ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದ ತೀರ್ಪು ಪ್ರಕಟ/ ಅಯೋಧ್ಯೆ ಪ್ರಭು ಶ್ರೀರಾಮನಿಗೆ ಸೇರಿದ್ದು ಎಂದ ಸುಪ್ರೀಂಕೋರ್ಟ್/ ಶತಮಾನಗಳ ಧಾರ್ಮಿಕ ನಂಬಿಕೆಗೆ ಕಾನೂನಿನ ಮಾನ್ಯತೆ ದೊರಕಿಸಿಕೊಟ್ಟ ಸುಪ್ರೀಂಕೋರ್ಟ್ / ಮಂದಿರ ನಿರ್ಮಾಣದ ಹಕ್ಕನ್ನು ಟ್ರಸ್‌ಗೆ ವರ್ಗಾಯಿಸಿದ ಸುಪ್ರೀಂಕೋರ್ಟ್/ ಮುಸ್ಲಿಮರಿಗೆ ಅಯೋಧ್ಯೆಯಲ್ಲೇ ಪ್ರತ್ಯೇಕ 5 ಎಕರೆ ಜಾಗಕ್ಕೆ ಸುಪ್ರೀಂಕೋರ್ಟ್ ಆದೇಶ/ ಅಯೋಧ್ಯೆಯಲ್ಲಿ ರಾಮನ ಜನನ ಸತ್ಯ ಎಂದ ಸುಪ್ರೀಂಕೋರ್ಟ್/ ಬಾಬರಿ ಮಸೀದಿ ನಿರ್ಮಾಣಕ್ಕೂ ಮುಂಚೆ ಮಂದಿರವಿದ್ದ ಪುರಾವೆ ಒಪ್ಪಿಕೊಂಡ ಪಂಚಪೀಠ/ ಶತಮಾನಗಳಿಂದಲೂ ರಾಮಲಲ್ಲಾದಲ್ಲಿ ಪೂಜೆ ನಡೆಯುತ್ತಿದೆ ಎಂದು ಹೇಳಿದ ಸುಪ್ರೀಂಕೋರ್ಟ್/ ಸುಪ್ರೀಂ ಐತಿಹಾಸಿಕ ತೀರ್ಪು ಸ್ವಾಗತಿಸಿದ ಪ್ರಮುಖರು/

ನವದೆಹಲಿ(ನ.09): ದೇಶ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಕೊನೆಗೂ ಸುಪ್ರೀಂಕೋರ್ಟ್ ಪ್ರಕಟಿಸಿದೆ. 

ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಮೂಲಕ ವಿವಾದಿತ ಜಾಗಕ್ಕಾಗಿ ಹೋರಾಡುತ್ತಿದ್ದ ಹಿಂದೂಗಳ ನಂಬಿಕೆಗೆ ಐತಿಹಾಸಿಕ ಜಯ ಲಭಿಸಿದೆ. ಆದರೆ, ಬಾಬರಿ ಮಸೀದಿ ಪ್ರತ್ಯೇಕ ಜಾಗವನ್ನು ಕಲ್ಪಿಸಲು ಕೋರ್ಟ್ ಸರಕಾರಕ್ಕೆ ಸೂಚಿಸಿದೆ.

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!

ವಿವಾದಿತ ಸ್ಥಳದಲ್ಲಿ ರಾಮನ ಜನನ ಸತ್ಯ ಎಂದಿರುವ ಸುಪ್ರೀಂ ಕೋರ್ಟ್, ಕಾನೂನಾತ್ಮಕ ನಿಯಮ ರೂಪಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶಿಸಿದೆ.

ಈ ಮಧ್ಯೆ ಸುಪ್ರೀಂ ತೀರ್ಪನ್ನು ಸ್ವಾಗತಿಸಿರುವ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜದ ಸಾಮರಸ್ಯ ಕಾಪಾಡುವಲ್ಲಿ ಸುಪ್ರೀಂ ತೀರ್ಪು ಸಹಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿ:

"

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ಪ್ರಧಾನಿ ಮೋದಿ, ದಯವಿಟ್ಟು ತೀರ್ಪನ್ನು ಸೋಲು ಗೆಲುವಿನ ತಕ್ಕಡಿಯಲ್ಲಿ ತೂಗಬೇಡಿ ಎಂದು ರಾಷ್ಟ್ರದ ಜನತೆಗೆ ಮನವಿ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸದ್ಯದ ತುರ್ತು ಅಗತ್ಯವಾಗಿದ್ದು, ಶಾಂತಿ ಕಾಪಾಡುವಲ್ಲಿ ಜನತೆ ಸರ್ಕಾರದೊಂದಿಗಿದ್ದಾರೆ ಎಂಬ ಭರವಸೆ ಇದೆ ಎಂದು ಮೋದಿ ನುಡಿದಿದ್ದಾರೆ.

Scroll to load tweet…

ಬಾಬರ್ ಅಯೋಧ್ಯೆ(5 ಎಕರೆ)ಯಲ್ಲೇ ಇರಲಿದ್ದಾನೆ: ಸಹೋದರರ ನಂಬಿಕೆ ಮುಖ್ಯ ಎಂದ ಸುಪ್ರೀಂ!

ಹಿಂದೂ ಮಹಾಸಭಾ:

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ಹಿಂದೂ ಮಹಾಸಭಾ, ಘನ ನ್ಯಾಯಾಲಯ ವಿವಿಧತೆಯಲ್ಲಿ ಏಕತೆಯ ಸಂದೇಶ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದೆ. ಅಲ್ಲದೇ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗ ನೀಡಿರುವುದು ಸ್ವಾಗತಾರ್ಹ ಎಂದು ಹಿಂದೂ ಮಹಾಸಭಾ ಅಭಿಪ್ರಾಯಪಟ್ಟಿದೆ.

Scroll to load tweet…

ಅಮಿತ್ ಶಾ:

"

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಮಾಜದ ಸಾಮರಸ್ಯ ಕಾಪಾಡುವುದು ಎಲ್ಲ ಸಮುದಾಯದ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

Scroll to load tweet…

ರಾಜನಾಥ್ ಸಿಂಗ್:

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇದೊಂದು ಲ್ಯಾಂಡ್ ಮಾರ್ಕ್ ಜಡ್ಜಮೆಂಟ್ ಎಂದು ಬಣ್ಣಿಸಿದ್ದಾರೆ. ಸುಪ್ರೀಂ ತೀರ್ಪು ಸಮಾರಸ್ಯ ಕಾಪಾಡುವಲ್ಲಿ ಸಹಾಯಕಾರಿ ಎಂದು ರಾಜನಾಥ್ ಅಭಿಪ್ರಾಯಪಟ್ಟಿದ್ದಾರೆ.

Scroll to load tweet…

ನಿತಿನ್ ಗಡ್ಕರಿ:

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಎಲ್ಲರೂ ಸುಪ್ರೀಂಕೋರ್ಟ್ ತೀರ್ಪನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Scroll to load tweet…

ನಿತಿಶ್ ಕುಮಾರ್:

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ಬಿಹಾರ ಸಿಎಂ ನಿತಿಶ್ ಕುಮಾರ್, ಭವಿಷ್ಯದಲ್ಲಿ ಇಂತಹ ಯಾವುದೇ ಭಿನ್ನಾಭಿಪ್ರಾಯ ಉದ್ಭವಿಸದಿರಲಿ ಎಂದು ಆಶಿಸಿದ್ದಾರೆ.

Scroll to load tweet…

ಸುಬ್ರಮಣಿಯನ್ ಸ್ವಾಮಿ:

 ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ರಾಮ ಮಂದಿರಕ್ಕಾಗಿ ತಮ್ಮ ಜೀವನವನ್ನೇ ಸವೆಸಿದ ದಿವಂಗತ ಅಶೋಕ್ ಸಿಂಘಾಲ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ಮೋದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Scroll to load tweet…

ರವಿಶಂಕರ್ ಗುರೂಜಿ:

"

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ, ತೀರ್ಪು ಎರಡೂ ಸಮುದಾಯಗಳ ಜನರಿಗೆ ನಿರಾಳತೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Scroll to load tweet…

ಕಾಂಗ್ರೆಸ್:
ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ವಿಪಕ್ಷ ಕಾಂಗ್ರೆಸ್, ಜನರ ನಂಬಿಕೆಗಳಿಗೆ ಗೌರವ ನೀಡಿದ ಸುಪ್ರೀಂಕೋರ್ಟ್’ಗೆ ಧನ್ಯವಾದ ಅರ್ಪಿಸಿದೆ. ಆದರೆ ಪ್ರಭು ಶ್ರೀರಾಮ ಅಧಿಕಾರ ತ್ಯಾಗದ ಪ್ರತೀಕವಾಗಿದ್ದು, ಅಧಿಕಾರದ ಹಸಿವಿನ ಪ್ರತೀಕವಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದೆ.

Scroll to load tweet…

ಅಯೋಧ್ಯೆ ತೀರ್ಪು ಪ್ರಕಟಿಸಿದ ಐವರು ನ್ಯಾಯಾಧೀಶರಿವರು