I Love Muhammad row: 'ಐ ಲವ್‌ ಮೊಹಮ್ಮದ್‌' ಅಭಿಯಾನವನ್ನು ಕಾಂಗ್ರೆಸ್‌ ಪಕ್ಷವು ಸಮರ್ಥಿಸಿಕೊಂಡಿದೆ. ಕಾಂಗ್ರೆಸ್ ನಾಯಕ ಪವನ್‌ ಖೆರಾ ಅವರು, ಜನರು ತಮ್ಮ ಪ್ರವಾದಿಯ ಮೇಲೆ ಪ್ರೀತಿ ತೋರಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದು, ಈ ವಿಚಾರದಲ್ಲಿ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ನವದೆಹಲಿ (ಸೆ.29): ಕರ್ನಾಟಕ ಸೇರಿ ದೇಶದ 5ಕ್ಕೂ ಹೆಚ್ಚು ರಾಜ್ಯಗಳಲ್ಲಿ ವ್ಯಾಪಿಸಿರುವ ‘ಐ ಲವ್‌ ಮೊಹಮ್ಮದ್‌’ ಅಭಿಯಾನವನ್ನು ಕಾಂಗ್ರೆಸ್‌ ಸಮರ್ಥಿಸಿಕೊಂಡಿದೆ. ಜನರು ‘ತಮ್ಮ ದೇವರಾದ ಮೊಹಮದ್‌ರ ಪ್ರತಿ ಪ್ರೀತಿ ತೋರಿಸಿಕೊಳ್ಳುವುದರಲ್ಲಿ ತಪ್ಪೇನು?’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೆರಾ ಮಾತನಾಡಿ, ‘ಮೀರಾ ಬಾಯಿ, ಸೂಫಿ ಸಂತರು ಬಾಳಿದ ಸಾಮರಸ್ಯದ ನಾಡಿನಲ್ಲಿ, ಅನ್ಯಕೋಮಿಗೆ ಸೇರಿದ(ಮುಸಲ್ಮಾನ) 7 ವರ್ಷದ ಹುಡುಗನನ್ನು ಹಿಂದೂಗಳು ಬಲಿ ಕೊಟ್ಟಿದ್ದಾರೆ. ಆತನಿಂದ ತೊಂದರೆಯೇನಾಗಿತ್ತು? ಅತ್ತ ಯಾರಾದರೂ ತಮಗೆ ದೇವರ ಮೇಲೆ ಪ್ರೀತಿಯಿದೆ ಎಂದರೂ ನಿಮಗೆ ತೊಂದರೆಯಾಗುತ್ತದೆ’ ಎಂದು ತಿವಿದಿದ್ದಾರೆ.

ಇದನ್ನೂ ಓದಿ: ಯಾರು ಅಧಿಕಾರದಲ್ಲಿದ್ದಾರೆ ಅನ್ನೋದು ಮೌಲಾನಾ ಮರೆತಿದ್ದಾನೆ: ಸಿಎಂ ಯೋಗಿ ವಾರ್ನ್

ನೀವು ಇಂದೋರ್‌ನ ಮಾರುಕಟ್ಟೆಯಲ್ಲಿ ಮುಸ್ಲಿಮರನ್ನು ಹೊರಗೆ ಹಾಕಬೇಕೆಂದು ಹೇಳುತ್ತೀರಿ. ನಮ್ಮ ಸಂಸ್ಕೃತಿ ತುಂಬಾ ವಿಶಾಲವಾಗಿದೆ. ಈ ಕಾರ್ಮಿಕ ವರ್ಗದ ಮುಸ್ಲಿಮರು ಅಪಾಯಕಾರಿ ಎಂದು ನೀವು ಭಾವಿಸುತ್ತೀರಿ. ಯಾರಾದರೂ ನಾನು ಮುಹಮ್ಮದ್ ಅವರನ್ನು ಪ್ರೀತಿಸುತ್ತೇನೆ ಎಂದು ಹೇಳಿದರೆ, ಅದರಲ್ಲೇನು ಸಮಸ್ಯೆ ಇದೆ. ಆ ವ್ಯಕ್ತಿ ತನ್ನ ಪ್ರವಾದಿಯನ್ನು ಪ್ರೀತಿಸುತ್ತಿದ್ದರೆ, ನೀವು ಆ ವ್ಯಕ್ತಿಯನ್ನು ಪ್ರೀತಿಸಬೇಕು ಎಂದು ಖೇರಾ ಹೇಳಿದರು.

ಜನರು ತಮ್ಮ ದೇವರುಗಳು ಮತ್ತು ಪ್ರವಾದಿಗಳನ್ನು ಪ್ರೀತಿಸುತ್ತಾರೆ ಇದರಲ್ಲಿ ತಪ್ಪೇನಿದೆ? ಬಿಜೆಪಿ ವಿರುದ್ಧ ತೀವ್ರವಾಗಿ ಟೀಕಿಸಿದ್ದಾರೆ.