ಹಿಂಸಾಚಾರಕ್ಕೆ ತಿರುಗಿದ ಐ ಲವ್ ಮೊಹಮ್ಮದ್, ಮುಸ್ಲಿಂ ಗುರು ತೌಕೀರ್ ರಾಜಾ ಖಾನ್ ಅರೆಸ್ಟ್ ಮಾಡಲಾಗಿದೆ. ಹಿಂಸಾಚಾರದಲ್ಲಿ ಗುಂಡಿನ ದಾಳಿಯಾಗಿದ್ದು, 10 ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಮುಸ್ಲಿಂ ಗುರು ಕೌಕೀರ್ ರಜಾ ಖಾನ್ ಅರೆಸ್ಟ್ ಮಾಡಲಾಗಿದೆ.

ಬರೇಲಿ (ಸೆ.27) ಐ ಲವ್ ಮೊಹಮ್ಮದ್ ಆಂದೋಲನ ಇದೀಗ ಗಲಭೆಯಾಗಿ ಪರಿವರ್ತನೆಗೊಂಡಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಐ ಲವ್ ಮೊಹಮ್ಮದ್ ಹಿಂಸಾಚಾರದ ಪರಿಸ್ಥಿತಿ ಕೈಮೀರುತ್ತಿದ್ದಂತೆ ಉತ್ತರ ಪ್ರದೇಶ ಸರ್ಕಾರ ತಕ್ಷಣ ಕಾರ್ಯಪ್ರವೃತ್ತರಾಗಿದೆ. ಐ ಲವ್ ಮೊಹಮ್ಮದ್ ಆಂದೋಲನ ರೂಪದಲ್ಲಿ ಆರಂಭಗೊಂಡು ಬಳಿಕ ಗಲಭೆಯಾಗಿ ಪರಿವರ್ತನೆಗೊಳ್ಳಲು ಕಾರಣರಾದ ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮುಸ್ಲಿಂ ಗುರು ತೌಕೀರ್ ರಜಾ ಖಾನ್ ಅರೆಸ್ಟ್ ಮಾಡಲಾಗಿದೆ.

ಐ ಲವ್ ಮೊಹಮ್ಮದ್ ಅಭಿಯಾನ ಬೆಂಬಲಿಸಲು ಕರೆ

ಐ ಲವ್ ಮೊಹಮ್ಮದ್ ಅಭಿಯಾನ ಆರಂಭಗೊಂಡು ಕೆಲ ದಿಗಳಾಗಿವೆ.ಕಾನ್ಪುರದಲ್ಲಿ ಆಯೋಜಿಸಿದ ಈದ್ ಮಿಲಾದ್ ಮೆರವಣಿಗೆಯಲ್ಲಿ ಮೊದಲ ಬಾರಿಗೆ ಐ ಲವ್ ಮೊಹಮ್ಮದ್ ಪ್ಲಕಾರ್ಡ್, ಬ್ಯಾನರ್‌ ರಾರಾಜಿಸಿತ್ತು. ಹಲವರು ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಈದ್ ಮಿಲಾದ್ ಮೆರವಣಿಗೆಯಲ್ಲಿನ ಐ ಲವ್ ಮೊಹಮ್ಮದ್ ಅಭಿಯಾನಕ್ಕೆ ಬ್ರೇಕ್ ಹಾಕಿದ್ದರು. ಇದರ ಬೆನ್ನಲ್ಲೇ ಹಲೆವೆಡೆ ಐ ಲವ್ ಮೊಹಮ್ಮದ್ ಆಂದೋಲನ ಆರಂಭಗೊಂಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಆಗಿತ್ತು. ಇದರ ಬೆನ್ನಲ್ಲೇ ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮುಸ್ಲಿಂ ಗುರು ತೌಕೀರ್ ರಜಾ ಖಾನ್ ಐ ಲವ್ ಮೊಹಮ್ಮದ್ ಆಂದೋಲನ ಬೆಂಬಲಿಸಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ರಜಾ ಖಾನ್ ಬಂಧನವಾಗಿದೆ.

ಮಸೀದಿ ಪ್ರಾರ್ಥನೆ ವೇಳೆ ಕರೆ, ಭುಗಿಲೆದ್ದ ಹಿಂಸಾಚಾರ

ಶುಕ್ರವಾರ ಪ್ರಾರ್ಥನೆ ವೇಳೆ ಮುಸ್ಲಿ ಗುರು ಐ ಲವ್ ಮೊಹಮ್ಮದ್ ಬೆಂಬಲಿಸಿ ಪ್ರತಿಭಟನೆಗೆ ಕರೆ ನೀಡಿದ್ದು. ಇದು ಹಿಂಸಾಚಾರಕ್ಕೆ ತಿರುಗಿತ್ತು. ಶುಕ್ರವಾರ ಪ್ರಾರ್ಥನೆ ಬಳಿಕ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಈ ಪ್ರತಿಭಟನೆ ಹಿಂಸಾಚಾರವಾಗಿ ತಿರುಗಿದೆ. ಪೊಲೀಸರು ರಜಾ ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ.

ಗಲಭೆಯಲ್ಲಿ ಗುಂಡಿನ ದಾಳಿ

ಹಿಂಸಾಚಾರ ಪ್ರಕರಣ ಸಂಬಂಧ ಬರೇಲಿ ಪೊಲೀಸರು ಒಟ್ಟು 10 ಎಫ್ಐಆರ್ ದಾಖಲಿಸಿದ್ದಾರೆ. ಈ ಪೈಕಿ 7ರಲ್ಲಿ ರಜಾ ಖಾನ್ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಇತ್ತ ಗಲಭೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಗಲಭೆಯಲ್ಲಿ ಗುಂಡಿನ ದಾಳಿ ಶಬ್ದ ಕೇಳಿಬಂದಿದೆ. ಗಲಭೆಯಲ್ಲಿ 10ಕ್ಕೂ ಹೆಚ್ಚು ಮಂದಿ ಪೊಲೀಸರು ಗಾಯಗೊಂಡಿದ್ಕಾರೆ.

ರಜಾ ಖಾನ್ ಬೆಂಬಲಿಸಿ ಭಾರಿ ಪ್ರತಿಭಟೆನೆ

ರಜಾ ಖಾನ್ ಬಂಧನ ವಿರೋಧಿಸಿ ಭಾರಿ ಸಂಖ್ಯೆಯಲ್ಲಿ ಮುಸ್ಲಿಮರು ರಜಾ ಖಾನ್ ನಿವಾಸದ ಬಳಿಕ ಜಮಾಯಿಸಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.