ರೈಲು ನಿಲ್ಲಿಸಿ ಎಣ್ಣೆ ಹಾಕಲು ಹೋದ ಚಾಲಕ ಒಂದು ಗಂಟೆ ನಂತರ ಹೊರಟ ಟ್ರೈನ್ ಇಲಾಖೆಯಿಂದ ನೋಟಿಸ್ ತನಿಖೆಗೆ ಆದೇಶ

ರೈಲು ಚಾಲಕನೋರ್ವ ರೈಲನ್ನು ದಾರಿ ಮಧ್ಯೆ ನಿಲ್ಲಿಸಿ ಎಣ್ಣೆ ಹಾಕಲು ಹೋಗಿದ್ದು, ಇದರಿಂದ ರೈಲು ಒಂದು ಗಂಟೆ ವಿಳಂಬವಾಗಿ ಹೊರಟ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಸಮಷ್ಠಿಪುರದಿಂದ ಸಹಸ್ರಗೆ ರೈಲು ಹೊರಟಿತ್ತು. ಆದರೆ ಹಸನ್‌ಪುರ ರೈಲು ನಿಲ್ದಾಣದಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಪಾಸಾಗಲು ದಾರಿ ಮಾಡಿಕೊಡುವ ಸಲುವಾಗಿ ಈ ರೈಲನ್ನು ನಿಲ್ಲಿಸಲಾಗಿತ್ತು. ಆದರೆ ಈ ವೇಳೆ ರೈಲು ಚಾಲಕ ಸರಾಯಿ ತರಲು ಇಳಿದು ಹೋಗಿದ್ದಾನೆ. ಇದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಕಳೆದ ನಂತರ ಈತ ಮರಳಿ ಬಂದಿದ್ದಾನೆ. 

ರಾಜಧಾನಿ ರೈಲಿಗೆ ದಾರಿ ಮಾಡಿ ಕೊಡುವ ಸಲುವಾಗಿ ರೈಲು ನಿಂತಾಗ ರೈಲಿನ ಸಹಾಯಕ ಲೋಕೋ ಪೈಲೆಟ್ ಕರಣ್‌ವೀರ್ ಯಾದವ್‌ (Karanvir Yadav) ಇಂಜಿನ್‌ ಇದ್ದ ಸ್ಥಳದಿಂದ ನಾಪತ್ತೆಯಾಗಿದ್ದಾನೆ. ಹೀಗಾಗಿ ಸಿಗ್ನಲ್ ಬಿದ್ದ ಬಳಿಕವೂ ರೈಲು ಹಸನ್‌ಪುರ ರೈಲು ನಿಲ್ದಾಣದಲ್ಲೇ ಇತ್ತು. ಇದರಿಂದ ಪ್ರಯಾಣಿಕರು ಆಕ್ರೋಶಗೊಂಡು ಗದ್ದಲವೆಬ್ಬಿಸಲು ಶುರು ಮಾಡಿದರು. ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಸರ್ಕಾರಿ ರೈಲ್ವೆ ಪೊಲೀಸ್‌ ಅವರನ್ನು ಕರೆಸಿ ಲೋಕೋ ಪೈಲಟ್‌ನನ್ನು ಹುಡುಕುವಂತೆ ಕೇಳಲಾಯಿತು. ಈ ವೇಳೆ ಅವರು ಸ್ಥಳೀಯ ಮಾರುಕಟ್ಟೆಯ ಬಳಿ ನೇರವಾಗಿ ನಿಲ್ಲಲು ಸಾಧ್ಯವಾಗದಂತಹ ಶೋಚನೀಯ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ನಂತರ ಸರ್ಕಾರಿ ರೈಲ್ವೆ ಪೊಲೀಸರು ತಕ್ಷಣವೇ ಸಹಾಯಕ ಲೋಕೋ ಪೈಲಟ್‌ನನ್ನು ಬಂಧಿಸಿದ್ದಾರೆ. 

ಇದಾದ ಬಳಿಕ ರೈಲ್ವೆ ಸ್ಟೇಷನ್ ಮಾಸ್ಟರ್ (station master) ಅವರು ಸಹಸ್ರದ ಈ ಸಹಾಯಕ ಲೋಕೋ ಪೈಲಟ್‌ಗೆ ಮೆಮೋ ಕಳುಹಿಸಿದ್ದಾರೆ. ವಿಭಾಗೀಯ ರೈಲ್ವೆ ಮ್ಯಾನೇಜರ್ (Divisional Railway Manager) ಅಲೋಕ್ ಅಗರ್ವಾಲ್ (Alok Agarwal) ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. 

ಚಾಲಕನಿಲ್ಲದೇ 90 ಕಿಮೀ ಚಲಿಸಿದ ಗೂಡ್ಸ್‌ರೈಲು!

ಕಾಡಾನೆ ಮತ್ತು ಮರಿ ಹಳಿ ದಾಟಲು ರೈಲು ನಿಲ್ಲಿಸಿದ ಚಾಲಕ 

ಈ ಭೂಮಿಯ ಮೇಲೆ ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಮನುಷ್ಯರಂತೆ ಪ್ರಾಣಿ ಪಕ್ಷಿಗಳಿಗೂ ಕೂಡ ತಮ್ಮದೇ ಜೀವನ ಶೈಲಿ ಇದೆ. ಆದರೆ ಮನುಷ್ಯರಂತೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಾಣಿ ಪಕ್ಷಿಗಳಿಗೆ ಅವಕಾಶವಿಲ್ಲ. ಹಾಗಾಗಿ ಪ್ರಾಣಿ ಪಕ್ಷಿಗಳ ಮೇಲೆ ದಯೆ, ಕರುಣೆ ತೋರಿಸುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ. ಮೂಕ ಪ್ರಾಣಿಯೊಂದಕ್ಕೆ ದಯೆ ತೋರಿಸಿರುವ ಘಟನೆ ಈಗ ನಡೆದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಶ್ಚಿಮ ಬಂಗಾಳದ ಅಲಿಪುರ್ದ್ವಾರ್ ರೆಲ್ವೇ ಟ್ವೀಟರ್ ಖಾತೆಯಿಂದ ವೀಡಿಯೋ ಪೋಸ್ಟ್ ಮಾಡಲಾಗಿದ್ದು ಕಾಡು ಆನೆ ಮತ್ತು ಅದರ ಮರಿ ರೈಲು ಹಳಿ ದಾಟುವ ವೇಳೆಯಲ್ಲಿ ಚಾಲಕ ರೈಲನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಾಡು ಆನೆಯನ್ನು ನೋಡುತ್ತಿದ್ದಂತೆಯೇ ಎಮರ್ಜನ್ಸಿ ಬ್ರೇಕ್ ಹಾಕಿದ ರೈಲು ಚಾಲಕರು ರೈಲನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಿದ್ದಾರೆ. ಕಾಡು ಆನೆ ಮತ್ತು ಮರಿ ರೈಲಿನ ಟ್ರ್ಯಾಕ್ ದಾಟಿದ ನಂತರ ಮತ್ತೆ ರೈಲು ಮುಂದಕ್ಕೆ ಸಾಗಿದೆ.

ರೈಲು ಹತ್ತಿದ ಕಾರ್ಮಿಕರು ಬೆಳಗ್ಗೆ ಎದ್ದಾಗ ಶಾಕ್, ತವರು ತಲುಪಲೇ ಇಲ್ಲ ಶ್ರಮಿಕ ಟ್ರೈನ್!

ಯುಪಿ ಕ್ಯಾಪಿಟಲ್ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲಿನ ಲೋಕೊ ಪೈಲೆಟ್ ಎಸ್.ಸಿ ಸರಕಾರ್ ಮತ್ತು ಅಸಿಸ್ಟೆಂಟ್ ಲೋಕೊ ಪೈಲೆಟ್ ಶ್ರೀ ಟಿ. ಕುಮಾರ್ 4.45ಕ್ಕೆ ಆನೆ ಮತ್ತು ಅದರ ಮರಿ ರೈಲು ಹಳಿ ದಾಟುವುದನ್ನು ನೋಡಿ ಎಮರ್ಜನ್ಸಿ ಬ್ರೇಕ್ ಹಾಕಿದ್ದಾರೆ ಎಂದು ಅಲಿಪುರ್ದ್ವಾರ್ ರೆಲ್ವೇ ಟ್ವೀಟರ್ ಖಾತೆ ಪೊಸ್ಟ್‌ನಲ್ಲಿ ಬರೆದು ಕೊಂಡಿದ್ದಾರೆ. ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಚಾಲಕರ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.