ಒಡಿಶಾ(ಮೇ.23): ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಲಾಕ್‌ಡೌನ್ ಹಾಗೂ ಕೊರೋನಾ ವೈರಸ್ ಕಾರಣ ಮುಂಬೈನಲ್ಲಿ ಸಿಲುಕಿದ್ದರು. ಆಹಾರ , ನೀರು, ಕೈಯಲ್ಲಿ ಹಣವಿಲ್ಲದೆ ಪರದಾಡಿದ್ದರು. ಕೇಂದ್ರ ಸರ್ಕಾರ ವಲಸೆ ಕಾರ್ಮಕರನ್ನು ತವರು ಸೇರಿಸಲು ಶ್ರಮಿಕ ರೈಲು ಸೇವೆ ನೀಡಿತು. ಹೇಗಾದ್ರೂ ಮಾಡಿ ಊರು ಸೇರಿಕೊಂಡರೆ ಸೊಪ್ಪು, ಗೆಣಸು ತಿಂದು ಬದುಕಬಹುದು ಎಂದು ಕಾರ್ಮಿಕರು ರೈಲು ಹತ್ತಿದರು. ಹೀಗೆ ಮುಂಬೈನಿಂದ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ರೈಲು ಹತ್ತಿದ ವಲಸೆ ಕಾರ್ಮಿಕರ ಪಾಡು ಯಾರಿಗೂ ಬೇಡ ಅನ್ನುವಂತಾಗಿದೆ.

ಕೊರೋನಾ ವಾರಿಯರ್ಸ್ ಮೇಲೆ ಮತ್ತೆ ದಾಳಿ, ಮಸೀದಿ ಮುಂದೆ ಪೊಲೀಸರ ಅಟ್ಯಾಕ್

ಮುಂಬೈನ ವಸೈ ರೈಲು ನಿಲ್ದಾಣದಿಂದ ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ ರೈಲು ಹತ್ತಿದ್ದಾರೆ. ರಾತ್ರಿ ರೈಲು ಪ್ರಯಾಣ ಆರಂಭಗೊಂಡಿದೆ. ರಾತ್ರಿಯಿಡಿ ಪ್ರಯಾಣ , ಊರಗಿ ಹೊರಟ ವಲಸೆ ಕಾರ್ಮಿಕರು ನಿದ್ದೆಗೆ ಜಾರಿದ್ದಾರೆ. ಬೆಳಗ್ಗೆ ರೈಲು ನಿಂತಾಗ ಎಲ್ಲರು ಗೋರಖ್‌ಪುರ ತಲುಪಿದ ಖುಷಿಯಿಂದ ತಮ್ಮ ಲಗೇಜ್, ಬ್ಯಾಗ್ ಹಿಡಿದು ರೈಲಿನಿಂದ ಇಳಿದಾಗ ಅಚ್ಚರಿ ಕಾದಿತ್ತು. ಕಾರಣ ರೈಲು ಉತ್ತರ ಪ್ರದೇಶದ ಬದಲು ಒಡಿಶಾಗೆ ಬಂದಿತ್ತು. 

ಸುಬ್ರಮಣಿಯನ್ ಸ್ವಾಮಿ ವಿರುದ್ಧ ಗುಡುಗಿದ ವಿಶ್ವಸಂಸ್ಥೆ ಅಧಿಕಾರಿಗೆ ಸಂಕಷ್ಟ, ಮಾನನಷ್ಟ ಕೇಸ್ ದಾಖಲು!

ಊರು ಸೇರಲು ರೈಲು ಹತ್ತಿದ್ದರೆ ತಮ್ಮ ತವರಿನಿಂದ 750 ಕಿ.ಮೀ ದೂರದಲ್ಲಿನ ರೌರ್‌ಕೇಲಾ ನಿಲ್ದಾಣಕ್ಕೆ ಬಂದಿತ್ತು. ರೈಲಿನಿಂದ ಕೆಳಗಿಳಿದ ಕಾರ್ಮಿಕರು ನಾವು ಗೋರಖ್‌ಪುರ ತೆರಳಲು ರೈಲು ಹತ್ತಿದ್ದೇವೆ, ಇಲ್ಯಾಕೆ ನಿಲ್ಲಿಸಿದ್ದೀರಿ, ಇಲ್ಲಿಗೇಕೆ ಕರೆದುಕೊಂಡು ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅತ್ತ ರೈಲು ಅಧಿಕಾರಿಗಳು ರಾತ್ರಿಯಲ್ಲಿ ಕೆಲ ಗೊಂದಲಗಳು ಆಗಿತ್ತು. ಹೀಗಾಗಿ ಚಾಲಕ ದಾರಿ ತಪ್ಪಿ ಒಡಿಶಾಗೆ ದಾರಿ ಹಿಡಿದ್ದಾರೆ ಎಂದಿದ್ದಾರೆ.

ಇತ್ತ ರೈಲ್ವೇ ಇಲಾಖೆ ಗೊಂದಲ, ದಾರಿ ತಪ್ಪನ್ನು ಅಲ್ಲಗೆಳೆದಿದೆ. ಹೆಚ್ಚಿನ ರೈಲು ಓಡಾಡುತ್ತಿರುವುದಿಂದ ಸಂಚಾರ ದಟ್ಟಣೆ ತಪ್ಪಿಸಲು ಮಾರ್ಗ ಬದಲಾಯಿಸಿದ್ದೇವೆ. ಕೆಲ ರೈಲುಗಳನ್ನು ಬಿಹಾರ ಮೂಲಕ ರೌರ್‌ಕೇಲಾ ದಾರಿಯಲ್ಲಿ ಬಿಟ್ಟಿದ್ದೇವೆ ಎಂದಿದ್ದಾರೆ. ಇತ್ತ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಇಷ್ಟೇ ಅಲ್ಲ ರೌರ್‌ಕೇಲಾದಿಂದ ಗೋರಖ್‌ಪುರಗೆ ರೈಲು ಪ್ರಯಾಣ ಎಷ್ಟು ಹೊತ್ತಿಗೆ ಆರಂಭವಾಗುತ್ತ ಅನ್ನೋ ವಿವವರನ್ನು ನೀಡಿಲ್ಲ.

ಮೊದಲೇ ಹಣವಿಲ್ಲದೆ ಸೊರಗಿದ್ದ ವಲಸೆ ಕಾರ್ಮಿಕರು, ಇದೀಗ ಒಡಿಶಾ ರೈಲು ನಿಲ್ದಾಣದಲ್ಲಿ ಅನ್ನ, ಆಹಾರವಿಲ್ಲದೆ ಕಳೆಯುವಂತಾಗಿದೆ. ರೈಲು ಇಲಾಖೆಯ ಗೊಂದಲದಿಂದ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.