Asianet Suvarna News Asianet Suvarna News

ರಾಗಿ, ಜೋಳದ ರೊಟ್ಟಿ ಊಟ ಸವಿದ ಸಂಸದರು, ಪ್ರಧಾನಿ

ಸಿರಿಧಾನ್ಯ ವರ್ಷದ ಅಂಗವಾಗಿ ಮಂಗಳವಾರ ಸಂಸತ್ತಿನ ಸದಸ್ಯರಿಗಾಗಿ ರಾಗಿ, ಸಜ್ಜೆ ಹಾಗೂ ಜೋಳದಿಂದ ತಯಾರಿಸಿದ ವಿಶೇಷ ಊಟವನ್ನು ಏರ್ಪಡಿಸಲಾಗಿತ್ತು. ಕರ್ನಾಟಕದಿಂದ ಬಾಣಸಿಗರನ್ನು ಕರೆಸಿ ರಾಗಿ ದೋಸೆ, ಇಡ್ಲಿ, ರೊಟ್ಟಿ, ಜೋಳದ ರೊಟ್ಟಿ, ಸಜ್ಜೆ ಹಾಗೂ ಜೋಳದ ಕಿಚಡಿ ಹಾಗೂ ಸಜ್ಜೆಯ ಪಾಯಸವನ್ನು ಸಿದ್ಧಪಡಿಸಲಾಗಿತ್ತು. 

 

 

 

 

Parliamentarians and Prime Minister enjoyed the meal of millet and corn bread akb
Author
First Published Dec 21, 2022, 10:39 AM IST

ನವದೆಹಲಿ: ಸಿರಿಧಾನ್ಯ ವರ್ಷದ ಅಂಗವಾಗಿ ಮಂಗಳವಾರ ಸಂಸತ್ತಿನ ಸದಸ್ಯರಿಗಾಗಿ ರಾಗಿ, ಸಜ್ಜೆ ಹಾಗೂ ಜೋಳದಿಂದ ತಯಾರಿಸಿದ ವಿಶೇಷ ಊಟವನ್ನು ಏರ್ಪಡಿಸಲಾಗಿತ್ತು. ಕರ್ನಾಟಕದಿಂದ ಬಾಣಸಿಗರನ್ನು ಕರೆಸಿ ರಾಗಿ ದೋಸೆ, ಇಡ್ಲಿ, ರೊಟ್ಟಿ, ಜೋಳದ ರೊಟ್ಟಿ, ಸಜ್ಜೆ ಹಾಗೂ ಜೋಳದ ಕಿಚಡಿ ಹಾಗೂ ಸಜ್ಜೆಯ ಪಾಯಸವನ್ನು ಸಿದ್ಧಪಡಿಸಲಾಗಿತ್ತು. ಸಿರಿಧಾನ್ಯಗಳನ್ನು ತಿನ್ನುವ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಔತಣಕೂಟವನ್ನು ಆಯೋಜಿಸಲಾಗಿತ್ತು.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಜೊತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh), ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ (Devegowda), ಬಿಜೆಪಿ ಅಧ್ಯಕ್ಷ ಜಗತ್ ಪ್ರಸಾದ್ ನಡ್ಡಾ (J P Nadda), ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ (Prahlad Joshi), ವಿದೇಶಾಂಗ ಸಚಿವ ಜೈಶಂಕರ್ (Jai Shankar) ಅವರು ಸೇರಿದಂತೆ ಅನೇಕರು ಒಟ್ಟಾಗಿ ಕುಳಿತು ಸಿರಿಧಾನ್ಯದಿಂದ ತಯಾರಿಸಿದ ಊಟ ಮಾಡಿದರು.  ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಿರಿಧಾನ್ಯಗಳ (Millets) ಬಳಕೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. ಅಲ್ಲದೇ ಸಿರಿಧಾನ್ಯಗಳ ಬಳಕೆ ಹೆಚ್ಚುತ್ತಿದ್ದಂತೆ ಅವುಗಳನ್ನು ಬೆಳೆಯುವ ಸಣ್ಣ ರೈತರಿಗೂ ಅನುಕೂಲಕರವಾಗುತ್ತದೆ. ಹೀಗಾಗಿ ಸಂಸದರು ಸಿರಿಧಾನ್ಯ ಸಂಸ್ಕೃತಿಯ ಪ್ರಚಾರ ನಡೆಸಬೇಕು ಎಂದು ಕರೆ ನೀಡಿದರು.

ಸಂಸತ್ತಿನಲ್ಲಿ ಎಲ್ಲಾ ಸಂಸದರಿಗಾಗಿ ಕರ್ನಾಟಕದ ಆಹಾರ ಶೈಲಿಯ ರಾಗಿ ದೋಸೆ ಮತ್ತು ಜೋಳದ ರೊಟ್ಟಿ ಊಟವನ್ನು ನಿನ್ನೆ ಏರ್ಪಡಿಸಲಾಗಿತ್ತು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಇದನ್ನು ಆಯೋಜಿಸಿದ್ದರು.  ಈ ಅಡುಗೆಗಳನ್ನು ತಯಾರಿಸಲು ಕರ್ನಾಟಕದಿಂದ ನುರಿತ ಬಾಣಸಿಗರನ್ನು ಕರೆಸಿಕೊಳ್ಳಲಾಗಿತ್ತು. ಇವರು ರಾಗಿ ದೋಸೆ, ಇಡ್ಲಿ, ರಾಗಿ ಹಾಗೂ ಜೋಳದ ರೊಟ್ಟಿ, ಸಜ್ಜೆ ಹಾಗೂ ಜೋಳದ ಕಿಚಡಿ ಮತ್ತು ಸಜ್ಜೆ ಪಾಯಸವನ್ನು ತಯಾರು ಮಾಡಿದ್ದರು. ಪ್ರಧಾನಿ ಮೋದಿ ಅವರ ಶಿಫಾರಸ್ಸಿನ ಮೇಲೆ 2023ನೇ ವರ್ಷವನ್ನು ವಿಶ್ವಸಂಸ್ಥೆ ‘ಸಿರಿಧಾನ್ಯ ವರ್ಷ’ ಎಂದು ಘೋಷಿಸಿದೆ. ಸರ್ಕಾರವು ಸಹ ಸಿರಿಧಾನ್ಯ ಸೇವನೆಗೆ ಹೆಚ್ಚು ಒತ್ತು ನೀಡಿದ್ದು, ಇದನ್ನು ಪೋಷಣ್‌ ಮಿಶನ್‌ ಆಂದೋಲನದಲ್ಲಿ ಸೇರಿಸಿದೆ.

ಇಂದು ಸಂಸತ್ತಲ್ಲಿ ರಾಗಿ, ಜೋಳದ ರೊಟ್ಟಿ ಊಟ

Follow Us:
Download App:
  • android
  • ios