ಇಂದು ಸಂಸತ್ತಲ್ಲಿ ರಾಗಿ, ಜೋಳದ ರೊಟ್ಟಿ ಊಟ
ಸಿರಿಧಾನ್ಯ ವರ್ಷ’ದ ಪ್ರಯುಕ್ತ ಇಂದು ಸಂಸತ್ತಿನಲ್ಲಿ ಎಲ್ಲಾ ಸಂಸದರಿಗೂ ಕರ್ನಾಟಕದ ರಾಗಿ ದೋಸೆ ಮತ್ತು ಜೋಳದ ರೊಟ್ಟಿ ಊಟವನ್ನು ಏರ್ಪಡಿಸಲಾಗಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇದನ್ನು ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸಹ ಭಾಗಿಯಾಗಲಿದ್ದಾರೆ.
ನವದೆಹಲಿ: ‘ಸಿರಿಧಾನ್ಯ ವರ್ಷ’ದ ಪ್ರಯುಕ್ತ ಇಂದು ಸಂಸತ್ತಿನಲ್ಲಿ ಎಲ್ಲಾ ಸಂಸದರಿಗೂ ಕರ್ನಾಟಕದ ರಾಗಿ ದೋಸೆ ಮತ್ತು ಜೋಳದ ರೊಟ್ಟಿ ಊಟವನ್ನು ಏರ್ಪಡಿಸಲಾಗಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇದನ್ನು ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸಹ ಭಾಗಿಯಾಗಲಿದ್ದಾರೆ.ಈ ಅಡುಗೆಗಳನ್ನು ತಯಾರಿಸಲು ಕರ್ನಾಟಕದಿಂದ ನುರಿತ ಬಾಣಸಿಗರನ್ನು ಕರೆಸಿಕೊಳ್ಳಲಾಗಿದೆ. ಇವರು ರಾಗಿ ದೋಸೆ, ಇಡ್ಲಿ, ರಾಗಿ ಹಾಗೂ ಜೋಳದ ರೊಟ್ಟಿ, ಸಜ್ಜೆ ಹಾಗೂ ಜೋಳದ ಕಿಚಡಿ ಮತ್ತು ಸಜ್ಜೆ ಪಾಯಸವನ್ನು ತಯಾರು ಮಾಡಲಿದ್ದಾರೆ. ಸಿರಿಧಾನ್ಯಗಳನ್ನು ತಿನ್ನುವ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದನ್ನು ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಅವರ ಶಿಫಾರಸ್ಸಿನ ಮೇಲೆ 2023ನೇ ವರ್ಷವನ್ನು ವಿಶ್ವಸಂಸ್ಥೆ ‘ಸಿರಿಧಾನ್ಯ ವರ್ಷ’ ಎಂದು ಘೋಷಿಸಿದೆ. ಸರ್ಕಾರವು ಸಹ ಸಿರಿಧಾನ್ಯ ಸೇವನೆಗೆ ಹೆಚ್ಚು ಒತ್ತು ನೀಡಿದ್ದು, ಇದನ್ನು ಪೋಷಣ್ ಮಿಶನ್ ಆಂದೋಲನದಲ್ಲಿ ಸೇರಿಸಿದೆ.
ಪೌಷ್ಟಿಕ ಆಹಾರ ವಿತರಣೆ: ಶಾಲಾ ಮಕ್ಕಳಿಗೆ ಸದ್ಯಕ್ಕಿಲ್ಲ ರಾಗಿ ಮುದ್ದೆ, ಜೋಳದ ರೊಟ್ಟಿ ಭಾಗ್ಯ..!
ಇನ್ಮುಂದೆ ಬಿಸಿಯೂಟದಲ್ಲಿ ಮುದ್ದೆ, ಜೋಳದ ರೊಟ್ಟಿ..?