Asianet Suvarna News Asianet Suvarna News

ಈ ಬಾರಿಯ ಸಂಸತ್ ಕಲಾಪದ ವಿಶೇಷಗಳು, ಡಿಜಿಟಲ್ ಜತೆ ಮತ್ತೇನು?

ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೇ.100 ಡಿಜಿಟಲೀಕರಣದ ಮೂಲಕ ಅಧಿವೇಶನ ನಡೆಯಲಿದೆ/ ಸಂಸದರು ಈಗಾಗಲೇ ತಮ್ಮ ಪ್ರಶ್ನೆಗಳನ್ನು ಆನ್ ಲೈನ್ ಮೂಲಕ ಕಳುಹಿಸಿದ್ದಾರೆ/ ಎಲ್ಲಾ ಸಂಸದರು ಕೋವಿಡ್ ಟೆಸ್ಟ್ ಗೆ ಒಳಗಾಗುವುದು ಕಡ್ಡಾಯ/ ಇನ್ನು ಹಲವು ಪ್ರಥಮಗಳು

Parliament Monsoon Session 2020 COVID-19 Measures In LS All MPs To Be Tested
Author
Bengaluru, First Published Sep 10, 2020, 9:49 PM IST

ಡೆಲ್ಲಿ ಮಂಜು

ನವದೆಹಲಿ(ಸೆ. 10)  ಕೋವಿಡ್ ಸಂಕಷ್ಟ  ಕಾಲದಲ್ಲಿ  ಡಿಜಿಟಲ್ ತಂತ್ರಜ್ಞಾನ ಬಳಸಿ ಮುಂಗಾರು ಅಧಿವೇಶನವನ್ನು ನಡೆಸುವ ಮೂಲಕ 
ಪ್ರಜಾಪ್ರಭುತ್ವ ಹಾಗು ಸಂವಿಧಾನದ ವಿಧಿ-ವಿಧಾನಗಳಿಗೆ ಹೊಸ ರೂಪ ನೀಡಲಾಗುತ್ತದೆ. ಡಿಜಿಟಲ್ ಆ್ಯಪ್ ಮೂಲಕ ಸಂಸದರ ಹಾಜರಾತಿ, ಕೋವಿಡ್ ಟೆಸ್ಟ್ ಮಾಡಿಸಿಕೊಂಡೆ ಸಂಸದರು ಸಂಸತ್ತು ಅಧಿವೇಶನ ಪ್ರವೇಶ ಮಾಡಬೇಕಾಗುತ್ತದೆ. ಇವು ಈ ಬಾರಿಯ ವಿಶೇಷಗಳು.

ಈ  ಮುಂಗಾರು ಅಧಿವೇಶ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ಸೆಪ್ಟೆಂಬರ್ 14 ರಿಂದ  ಆರಂಭವಾಗಲಿರುವ ಸಂಸತ್ತಿನ ಅಧಿವೇಶನ18 ದಿನಗಳ ಕಾಲ ಬಿಡುವಿಲ್ಲದೆ ನಡೆಯಲಿದೆ. 

ಮೊದಲ ದಿನ ಲೋಕಸಭೆಯಿಂದ ಆರಂಭವಾಗಲಿರುವ ಅಧಿವೇಶನ, ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಪಾಳಿಗಳಲ್ಲಿ ನಡೆಯಲಿದೆ. ಎರಡನೇ ದಿನದಿಂದ ನಿತ್ಯ ರಾಜ್ಯಸಭೆಯಿಂದ ಅಧಿವೇಶನ ಬೆಳಗ್ಗೆ ನಡೆಯಲಿದೆ. ಲೋಕಸಭೆ ಹಾಗು ರಾಜ್ಯಸಭೆ ಹಾಲ್ ಗಳಲ್ಲಿ ಎರಡೂ ಕಡೆ ಸಂಸದರು ಕೂರಲು ಅವಕಾಶ ಮಾಡಿಕೊಡಲಾಗಿದೆ.

ಡಿಜಿಟಲೀಕರಣ ಈ ಬಾರಿಯ ಅಧಿವೇಶನ

ಸಾಮಾಜಿಕ ಅಂತರವನ್ನು ಕಾಯ್ದುಕೊಂಡು 257 ಮಂದಿ ಸದಸ್ಯರಿಗೆ ಲೋಕಸಭಾ ಚೇಂಬರ್ ನಲ್ಲಿ, 172  ಮಂದಿ ಸದಸ್ಯರಿಗೆ ಲೋಕಸಭಾ ಗ್ಯಾಲರಿಯಲ್ಲಿ, 60 ಮಂದಿ ಸದಸ್ಯರಿಗೆ ರಾಜ್ಯಸಭಾ ಚೇಂಬರ್ ನಲ್ಲಿ , 51ಮಂದಿಗೆ ಗ್ಯಾಲರಿಯಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ ತನಕ ಒಂದು ಸದನದ ಕಲಾಪ, 3 ಗಂಟೆಯಿಂದ ರಾತ್ರಿ 7 ಗಂಟೆಯ ತನಕ ಒಂದು ಸದನದ ಕಲಾಪ ನಡೆಯಲಿದೆ. 

ಅರ್ಧ ಗಂಟೆ ಶೂನ್ಯ ಅವಧಿ: ಪ್ರತಿ ನಿತ್ಯ ಚುಕ್ಕೆ ಗುರುತು ಇಲ್ಲದ ಪ್ರಶ್ನೆಗಳನ್ನು ಮಂಡಿಸಲಾಗುತ್ತದೆ. ಜೊತೆಗೆ ನಿತ್ಯ ನಾಲ್ಕು ಗಂಟೆಗಳ ಅವಧಿಯಲ್ಲಿ ಮೊದಲ ಅರ್ಧ ಗಂಟೆ ಶೂನ್ಯ ಅವಧಿಗೆ ಮೀಸಲಾಗಿರಿಸಲಾಗಿದೆ. ಪೇಪರ್ ಬಳಕೆ ಕಡಿಮೆ ಮಾಡಿ ಈ ಬಾರಿ ಸಂಸದರ ಪ್ರಶ್ನೆಗಳಿಗೆ ಡಿಜಿಟಲ್ ರೂಪದಲ್ಲಿ ಉತ್ತರ ದೊರೆಯಲಿದೆ. ಸಂಸದರಿಗೆ ಹೊರತುಪಡಿಸಿ ಬೇರೆ ಯಾರಿಗೂ ಸೆಂಟ್ರಲ್ ಹಾಲ್ ಪ್ರವೇಶ ವಿಲ್ಲ. 

ಇನ್ನು ಅಧಿವೇಶನಕ್ಕೆ ಮೂರು ದಿನಗಳು ಬಾಕಿ ಇರುವಾಗ ಇವತ್ತು ಲೋಕಸಭಾ ಸ್ಪೀಕರ್ ಎಲ್ಲಾ ಸಿದ್ದತೆಗಳನ್ನು ಪರಿಶೀಲಿಸಿದರು. ಈ ಬಾರಿ ಅಧಿವೇಶನ ನಮಗೆ ಸವಾಲು ಆಗಿದೆ. ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಲಿದ್ದೇವೆ. ಡಿಜಿಟಲೀಕರಣ ಸೇರಿ ಸಾಮಾಜಿಕ ಅಂತರ, ಸ್ಯಾನಿಟೇಜಷನ್ ಸೇರಿ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ ಅಂಥ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾಧ್ಯಮಗಳಿಗೆ ತಿಳಿಸಿದರು.

Follow Us:
Download App:
  • android
  • ios