Asianet Suvarna News Asianet Suvarna News

ಎಲ್ಲ ಸಂಸದರಿಗೂ ಕೋವಿಡ್ ಟೆಸ್ಟ್ ಕಡ್ಡಾಯ, ಅಧಿವೇಶನ ಡಿಜಿಟಲೀಕರಣ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿಕೆ/ ನವದೆಹಲಿಯಲ್ಲಿ ಹೇಳಿಕೆ/  ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೇ.100 ಡಿಜಿಟಲೀಕರಣದ ಮೂಲಕ ಅಧಿವೇಶನ ನಡೆಯಲಿದೆ/ ಸಂಸದರು ಈಗಾಗಲೇ ತಮ್ಮ ಪ್ರಶ್ನೆಗಳನ್ನು ಆನ್ ಲೈನ್ ಮೂಲಕ ಕಳುಹಿಸಿದ್ದಾರೆ/ ಎಲ್ಲಾ ಸಂಸದರು ಕೋವಿಡ್ ಟೆಸ್ಟ್ ಗೆ ಒಳಗಾಗುವುದು ಕಡ್ಡಾಯ

Om Birla On COVID-19 Measures In LS All MPs To Be Tested
Author
Bengaluru, First Published Sep 10, 2020, 6:03 PM IST

ನವದೆಹಲಿ(ಸೆ.10) ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೇ.100 ಡಿಜಿಟಲೀಕರಣದ ಮೂಲಕ ಅಧಿವೇಶನ ನಡೆಯಲಿದೆ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.

ಸಂಸದರು ಈಗಾಗಲೇ ತಮ್ಮ ಪ್ರಶ್ನೆಗಳನ್ನು ಆನ್ ಲೈನ್ ಮೂಲಕ ಕಳುಹಿಸಿದ್ದಾರೆ. ಎಲ್ಲಾ ಸಂಸದರು ಕೋವಿಡ್ ಟೆಸ್ಟ್ ಗೆ ಒಳಗಾಗುವುದು ಕಡ್ಡಾಯ. ಮೊಬೈಲ್ ಆಪ್ ಮೂಲಕ ಸಂಸದರ ಹಾಜರಾತಿ ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಶಿಕ್ಷಕರು ಮತ್ತು ವೈದ್ಯರ ಮೇಲೆ ಏರಗಿದ ಕೊರೋನಾ

ಪ್ರೇಕ್ಷಕರ ಗ್ಯಾಲರಿ ಸೇರಿದಂತೆ 257 ಸಂಸದರು ಲೋಕಸಭೆಯಲ್ಲಿ ಕೂರಬಹುದು. ಉಳಿದವರಿಗೆ ರಾಜ್ಯಸಭೆಯಲ್ಲಿ ಕೂರಲು ಅವಕಾಶ ಮಾಡಿಕೊಡಲಾಗಿದೆ. ಒಂದೇ ಸಮಯದಲ್ಲಿ ವರ್ಚುವಲ್ ವೇದಿಕೆ ಮೂಲಕ ಅಧಿವೇಶನ ನಡೆಯಲಿದೆ. ಸೆಪ್ಟೆಂಬರ್ 14 ರಿಂದ ಅಧಿವೇಶನ ಆರಂಭವಾಗಲಿದೆ ಎಂದು ತಿಳಿಸಿದರು.
ಕೊರೋನಾದ ಸವಾಲುಗಳ ನಡುವೆ ಅಧಿವೇಶನ ನಡೆಸಲಾಗುತ್ತಿದೆ.  ರಾಷ್ಟ್ರೀಯ ಶಿಕ್ಷಣ ನೀತಿ, ಜಿಎಸ್‌ಟಿ, ಜಿಡಿಪಿ ಕುಸಿತ ಸೇರಿದಂತೆ ಅನೇಕ  ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ.

Follow Us:
Download App:
  • android
  • ios