Asianet Suvarna News Asianet Suvarna News

ಮಹಿಳಾ ಮೀಸಲು, ಪ್ರಜಾಪ್ರಭುತ್ವ; ಸಂಸತ್‌ಗೆ ನುಗ್ಗಿದ ದಾಳಿಕೋರರ ಕೊನೇ ಸೋಶಿಯಲ್‌ ಮೀಡಿಯಾ ಪೋಸ್ಟ್‌!

ಸಂಸತ್ತಿನ ಭದ್ರತೆ ಭೇದಿಸಿ ನುಗ್ಗಿದ ಪೈಕಿ ಒಬ್ಬನಾಗಿರುವ ಸಾಗರ್ ಶರ್ಮಾ ಅವರು ತಮ್ಮ ಕೊನೆಯ ಸೋಶಿಯಲ್‌ ಮೀಡಿಯಾದಲ್ಲಿ ಸ್ಫೂರ್ತಿದಾಯಕ ಬರಹವನ್ನು ಬರೆದುಕೊಂಡಿದ್ದರೆ, ನೀಲಂ ಮಹಿಳಾ ಮೀಸಲಾತಿ ಕುರಿತು ಪೋಸ್ಟ್‌ ಹಂಚಿಕೊಂಡಿದ್ದರು.
 

Parliament intruders social media posts before breach Womens quota democracy san
Author
First Published Dec 14, 2023, 7:23 PM IST

ನವದೆಹಲಿ (ಡಿ.14): ದೊಡ್ಡ ಮಟ್ಟದ ಭದ್ರತಾ ವ್ಯವಸ್ಥೆಯನ್ನು ವಂಚಿಸಿ ಲೋಕಸಭೆಯ ಒಳನುಗ್ಗಿ ಸ್ಮೋಕ್‌ ಬಾಂಬ್‌ ಹಾಕಿದ ವ್ಯಕ್ತಿಯಲ್ಲಿ ಒಬ್ಬರಾಗಿರುವ ಸಾಗರ್‌ ಶರ್ಮ, ಈ ಕೃತ್ಯ ಮಾಡುವ ಮುನ್ನ ತಮ್ಮ ಇನ್ಸ್‌ಟಾಗ್ರಾಮ್‌ ಪೋಸ್ಟ್‌ನಲ್ಲಿ ಸ್ಫೂರ್ತಿದಾಯಕ ಬರಹವನ್ನು ಹಂಚಿಕೊಂಡಿದ್ದರು. ಜೀತ್‌ ಯಾ ಹಾರೆ, ಪರ್‌ ಕೋಶಿಶ್‌ ತೋ ಜರೂರಿ ಹೇ (ಗೆಲ್ಲೋದು ಸೋಲೋದು ಏನೇ ಇರಲಿ, ನೀನು ಪ್ರಯತ್ನ ಪಡೋದೇ ಪ್ರಮುಖ) ಎಂದು ಆತ ಹಿಂದಿಯಲ್ಲಿ ಬರೆದುಕೊಂಡಿದ್ದ. ಇದರ ಬೆನ್ನಲ್ಲಿಯೇ ಬುಧವಾರ ಲೋಕಸಭೆಯ ಒಳಹೊಕ್ಕು ಆತಂಕ ಸೃಷ್ಟಿಸಿದ್ದ. ಮತ್ತೊಂದು ಪೋಸ್ಟ್‌ನಲ್ಲಿ, ಒಬ್ಬರ ಕನಸುಗಳನ್ನು ನನಸಾಗಿಸಲು ಕಠಿಣ ಪರಿಶ್ರಮದ ಉಲ್ಲೇಖವನ್ನು ಅವರು ಹಂಚಿಕೊಂಡಿದ್ದಾರೆ.

"ಜೀವನದಲ್ಲಿ ಸುಂದರವಾದದ್ದು ಏನಾದರೂ ಇದ್ದರೆ ಅದು ಕನಸುಗಳು, ಹಗಲು ರಾತ್ರಿ, ನಾವು ಯಾವುದಕ್ಕಾಗಿ ಬದುಕುತ್ತಿದ್ದೇವೆ ಎಂಬುದನ್ನು ಅವು ನಮಗೆ ನೆನಪಿಸುತ್ತವೆ, ಕನಸುಗಳಿಲ್ಲದೆ, ಜೀವನವು ಅರ್ಥಹೀನವಾಗಿದೆ, ಮತ್ತು ಹೆಚ್ಚು ವ್ಯರ್ಥವಾದದ್ದು ನಿಮ್ಮ ಕನಸುಗಳ ಕಡೆಗೆ ಕಷ್ಟಪಟ್ಟು ಕೆಲಸ ಮಾಡದಿರುವುದು" ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. 2001 ರ ಸಂಸತ್ತಿನ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ಲೋಕಸಭೆಯಲ್ಲಿ ಆದ ಭದ್ರತಾ ಲೋಪಕ್ಕೆ ಸಾಗರ್‌ ಶರ್ಮ ಕೂಡ ಕಾರಣರಾಗಿದ್ದರು.

ಮತ್ತೋರ್ವ ಆರೋಪಿ ಮನೋರಂಜನ್ ಡಿ ಅವರು ಭದ್ರತಾ ಕ್ರಮಗಳನ್ನು ಉಲ್ಲಂಘಿಸಿ ಲೋಕಸಭೆಯ ಒಳನುಗ್ಗುವಲ್ಲಿ ಯಶಸ್ವಿಯಾಗಿದ್ದರು ಮತ್ತು ಶೂನ್ಯವೇಳೆ ಅಧಿವೇಶನದಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಸದನದ ಮೇಜಿನ ಮೇಲೆ ಹಾರಿದ್ದರು. ಬಳಿಕ ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದ ಕ್ಯಾನಿಸ್ಟರ್‌ಗಳಿಂದ ಹಳದಿ ಬಣ್ಣವನ್ನು ಹಾರಿಸಿದ್ದರು. ಇದರಿಂದಾಗಿ ಸದನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದೇ ಸಮಯದಲ್ಲಿ ಮತ್ತೊಬ್ಬರು ಆರೋಪಿಗಳಾದ ಅಮೋಲ್‌ ಶಿಂಧೆ ಹಾಗೂ ನೀಲಮ್‌ ಆಜಾದ್‌ ಸಂಸತ್ತಿನ ಹೊರಗೆ ಇದೇ ರೀತಿಯ ಕ್ಯಾನಿಸ್ಟರ್‌ಗಳ ಮೂಲಕ ಬಣ್ಣವನ್ನು ಹಾರಿಸಿದ್ದರು. ಅದರೊಂದಿಗೆ ತಾನಾಶಾಹಿ ನಹೀ ಚಲೇಗಿ (ಸರ್ವಾಧಿಕಾರಿ ನಡೆಯೋದಿಲ್ಲ) ಎಂದು ಸಂಸತ್ತಿನ ಆವರಣದಲ್ಲಿ ಘೋಷಣೆ ಕೂಗಿದ್ದರು. ನೀಲಮ್ ಕೆಲವು ದಿನಗಳ ಹಿಂದೆ ನವೆಂಬರ್ 11 ರಂದು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು.

ಸಂಸತ್ ದಾಳಿಗೂ ಮುನ್ನ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ತನ್ನ ಕೊನೆಯ ಪೋಸ್ಟ್‌ನಲ್ಲಿ, ಸಂಸತ್ತು ಮತ್ತು ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ 50 ಪ್ರತಿಶತ ಕೋಟಾ ಏಕೆ ಇರಲಿಲ್ಲ ಎಂದು ನೀಲಂ ಪ್ರಶ್ನಿಸಿದ್ದರು. "ಮಹಿಳೆಯರಿಗೆ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಶೇಕಡಾ 50 ರಷ್ಟು ಮೀಸಲಾತಿ ಇರಬೇಕು, ಹರಿಯಾಣದಲ್ಲಿ, ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ ಇದೆ, ಹಾಗಾದರೆ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಏಕಿಲ್ಲ' ಎಂದು ಪ್ರಶ್ನೆ ಮಾಡಿದ್ದರು. ಈ ಪೋಸ್ಟ್‌ಗೆ ಮೊದಲು, ಅವರು ಜೂನ್‌ನಲ್ಲಿ ಭೀಮ್ ಆರ್ಮಿ ನಾಯಕ ಮತ್ತು ಆಜಾದ್ ಸಮಾಜ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಮೇಲಿನ ದಾಳಿಯ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದ್ದರು.

ಲಾಗಿನ್‌ ಐಡಿ ಕೊಟ್ಟಿದ್ದಕ್ಕೆ ಮಹುವಾ ಉಚ್ಛಾಟನೆಯಾದ್ರೆ, ದೇಶದ ಆಸ್ತಿ ಸ್ನೇಹಿತನಿಗೆ ಕೊಟ್ಟವನನ್ನು ಏನು ಮಾಡಬೇಕು?

"ಭಾಯಿ (ಸಹೋದರ) ಚಂದ್ರಶೇಖರ್ ಆಜಾದ್ ಅವರ ಮೇಲೆ ದಾಳಿ ಮಾಡುವ ಮೂಲಕ, ದಲಿತರು ಮತ್ತು ಹಿಂದುಳಿದವರ ಹಕ್ಕುಗಳಿಗಾಗಿ ಧ್ವನಿ ಎತ್ತುವವರನ್ನು ಅವರ ಧ್ವನಿಯನ್ನು ಹತ್ತಿಕ್ಕಲು ಕೊಲ್ಲಬಹುದು ಎಂದು ಸಾಬೀತಾಗಿದೆ, ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗುತ್ತಿದೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. , (ಆಜಾದ್) ಅವರಿಗೆ ಭದ್ರತೆ ನೀಡಬೇಕು." ಎಂದು ಅವರು ಬರೆದುಕೊಂಡಿದ್ದರು.

ನಟ ಕಿಶೋರ್‌ ಪೋಸ್ಟ್‌ 'ಪನೌತಿಯಿಂದ ಸೋಲುವುದು ಎಷ್ಟು ಸುಳ್ಳೋ, ಜೈಶ್ರೀರಾಮ್‌ನಿಂದ ಗೆಲ್ಲುವುದು ಅಷ್ಟೇ ಸುಳ್ಳು..'

Parliament intruders social media posts before breach Womens quota democracy san

Follow Us:
Download App:
  • android
  • ios