Asianet Suvarna News Asianet Suvarna News

ಹೊಸ ಸಂಸತ್ತು ಮೋದಿ ಮಲ್ಟಿಪ್ಲೆಕ್ಸ್‌ : ಕಾಂಗ್ರೆಸ್‌ ಕಿಡಿ

ನೂತನ ಸಂಸತ್‌ ಭವನದ ವಿನ್ಯಾಸದ ಬಗ್ಗೆ ಕಾಂಗ್ರೆಸ್‌ ಕಟುವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ಕಟ್ಟಡವನ್ನು ಮೋದಿ ಮಲ್ಟಿಪ್ಲೆಕ್ಸ್‌ (Modi Multiplex) ಅಥವಾ ಮೋದಿ ಮ್ಯಾರಿಯಟ್‌ ಎಂದು ಕರೆಯಬೇಕು ಎಂದು ಕಾಂಗ್ರೆಸ್ ಹೇಳಿದೆ.

Parliament House building should be called Modi Multiplex or Modi Marriott Congress  criticized design of the new Parliament House akb
Author
First Published Sep 24, 2023, 7:09 AM IST

ನೂತನ ಸಂಸತ್‌ ಭವನದ ವಿನ್ಯಾಸದ ಬಗ್ಗೆ ಕಾಂಗ್ರೆಸ್‌ ಕಟುವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ಕಟ್ಟಡವನ್ನು ಮೋದಿ ಮಲ್ಟಿಪ್ಲೆಕ್ಸ್‌ (Modi Multiplex) ಅಥವಾ ಮೋದಿ ಮ್ಯಾರಿಯಟ್‌ ಎಂದು ಕರೆಯಬೇಕು. ಏಕೆಂದರೆ, ಇಲ್ಲಿ ಪ್ರಜಾಪ್ರಭುತ್ವ ಹಾಗೂ ಸಂಸದರ ನಡುವಣ ಸಮಾಲೋಚನೆಯ ಹತ್ಯೆಯಾಗಿದೆ. ಸದನದೊಳಗೆ ಸದಸ್ಯರು ಪರಸ್ಪರ ನೋಡಲು ಬೈನಾಕ್ಯುಲರ್ ಬಳಸುವಂತಾಗಿದೆ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ (Jairam Ramesh) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ (BJP President J.P. Nadda) ತಿರುಗೇಟು ನೀಡಿದ್ದು, 140 ಕೋಟಿ ಭಾರತೀಯರ ಆಶೋತ್ತರಗಳಿಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಸಂಸದರಿಗೆ ಹಂಚಿದ ಸಂವಿಧಾನದ ಪ್ರತಿಯಲ್ಲಿ 'ಸೋಶಿಯಲಿಸ್ಟ್‌, ಸೆಕ್ಯುಲರ್‌' ಪದ ಔಟ್‌, ಕೇಂದ್ರ ಹೇಳಿದ್ದಿಷ್ಟು!

ಜೈರಾಂ ಹೇಳಿದ್ದೇನು?:

ಹಳೆಯ ಸಂಸತ್‌ ಭವನದಲ್ಲಿ (new Parliament House) ಯಾರಾದರೂ ಸದಸ್ಯರು ದಾರಿ ಗೊತ್ತಿಲ್ಲದೆ ಕಳೆದು ಹೋಗಿದ್ದರೆ, ಒಂದಷ್ಟು ದೂರ ನಡೆದ ಬಳಿಕ ಅದೇ ಸ್ಥಳಕ್ಕೆ ಬರುತ್ತಿದ್ದರು. ಏಕೆಂದರೆ ಅದು ವೃತ್ತಾಕಾರದಲ್ಲಿತ್ತು. ಆದರೆ ಹೊಸ ಕಟ್ಟಡದಲ್ಲಿ ದಾರಿ ಕಳೆದು ಹೋದರೆ, ಕಂಗಾಲಾಗಬೇಕಾಗುತ್ತದೆ. ದಾರಿಯು ಗೊಂದಲ ಹುಟ್ಟಿಸುತ್ತದೆ. ಹಳೆಯ ಕಟ್ಟಡದಲ್ಲಿ ಹೆಚ್ಚು ಜಾಗ ಹಾಗೂ ಮುಕ್ತತೆಯ ಭಾವವಿತ್ತು. ಹೊಸ ಕಟ್ಟಡ ಇಕ್ಕಟ್ಟಿನ ರೀತಿ ಭಾಸವಾಗುತ್ತದೆ ಎಂದಿದ್ದಾರೆ.

ಹೊಸ ಸಂಸತ್ ಭವನದಲ್ಲಿ ಮೋದಿ ಮೊದಲ ಭಾಷಣ, ಮಹಿಳಾ ಮೀಸಲಾತಿ ಬಿಲ್ ತರಲು ಬದ್ಧ!

ಹಳೆಯ ಸಂಸತ್ತಿನಲ್ಲಿ ಎರಡು ಸದನಗಳು, ಸೆಂಟ್ರಲ್‌ ಹಾಲ್‌ (central hall) ಹಾಗೂ ಕಾರಿಡಾರ್‌ನಲ್ಲಿ (corridor) ಓಡಾಡಲು ಅನುಕೂಲವಿತ್ತು. ಆದರೆ ಹೊಸ ಸಂಸತ್ತಿನಲ್ಲಿ ಅದಕ್ಕೆ ಅವಕಾಶವೇ ಇಲ್ಲ. ನಾಲ್ಕು ದಿನಗಳ ಕಲಾಪದ ಬಳಿಕ ನನಗೆ ಹರಟೆ ಹಾಗೂ ಚರ್ಚೆಯ ಹತ್ಯೆಯಾಗಿರುವುದು ಗೊತ್ತಾಗಿದೆ. ಪ್ರಜಾಪ್ರಭುತ್ವವನ್ನು ಕಟ್ಟಡ ವಿನ್ಯಾಸ ಕೊಲ್ಲಬಹುದು ಎಂದಾದಲ್ಲಿ, ಸಂವಿಧಾನ ಪುನಾರಚಿಸದೆ ಆ ಕೆಲಸದಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎಂದು ಜೈರಾಂ ರಮೇಶ್‌ ಮೂದಲಿಸಿದ್ದಾರೆ.

ರೈಲು ಬರಲು ಕೆಲ ಕ್ಷಣಗಳಿರುವಾಗ ರೈಲುಹಳಿಗೆ ಬಿದ್ದ ಅಂಧ ತಾಯಿಯ ಮಗ: ಆಮೇಲಾಗಿದ್ದು ಪವಾಡ..!

ಪುಸ್ತಕದೊಳಗೆ ಫೋನ್‌: ಅಮ್ಮನಿಗೆ ಸಿಕ್ಕಿಬಿದ್ದ ಬಾಲಕ: ವೀಡಿಯೋ ನೋಡಿ ಮಗ ಇವತ್ತು ಸತ್ತಾ ಎಂದ ನೆಟ್ಟಿಗರು

Follow Us:
Download App:
  • android
  • ios