Asianet Suvarna News Asianet Suvarna News

ಹೊಸ ಸಂಸತ್ ಭವನದಲ್ಲಿ ಮೋದಿ ಮೊದಲ ಭಾಷಣ, ಮಹಿಳಾ ಮೀಸಲಾತಿ ಬಿಲ್ ತರಲು ಬದ್ಧ!

ಹೊಸ ಸಂಸತ್ ಭವನದಲ್ಲಿ ಮೊದಲ ಅಧಿವೇಶನ ಆರಂಭಗೊಂಡಿದೆ. ಮೊದಲ ಅಧಿವೇಶನದಲ್ಲಿ ಪ್ರಧಾನಿ ನರೇದ್ರ ಮೋದಿ ಮೊದಲ ಭಾಷಣ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೋದಿ ತಮ್ಮ ಮೊದಲ ಭಾಷಣದಲ್ಲಿ ಹೊಸ ಸಂಸತ್ ಭವನದ ಕುತೂಹಲ, ಐತಿಹಾಸಿಕತೆ, ಹಿರಿಮೆ ಕುರಿತು ಹೇಳಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.
 

First session in New Parliament begins with PM Modi address after LS Speaker Om Birla ckm
Author
First Published Sep 19, 2023, 1:51 PM IST

ನವದೆಹಲಿ(ಸೆ.19) ಹಳೇ ಸಂಸತ್ ಭವನಕ್ಕೆ ವಿದಾಯ ಹೇಳಿ ಇದೀಗ ಹೊಸ ಸಂಸತ್ ಭವನದಲ್ಲಿ ಅಧಿವೇಶನ ಆರಂಭಗೊಂಡಿದೆ. ಹೊಸ ಸಂಸತ್ ಭವನದಲ್ಲಿ ಆರಂಭಗೊಂಡ ಮೊದಲ ಅಧಿವೇಶನದಲ್ಲಿ ಪ್ರಧಾನಿ ಮೋದಿ ಮೊದಲ ಭಾಷಣ ಮಾಡಿದ್ದಾರೆ. ಈ ವೇಳೆ ಹೊಸ ಸಂಸತ್ ಭವನದ ವಿಶೇಷತೆ, ಸೆಂಗೋಲ್ ಪ್ರತೀಕ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಪ್ರಮುಖವಾಗಿ ಪ್ರಧಾನಿ ಮೋದಿ ಮಹಿಳಾ ಮೀಸಲಾತಿ ಬಿಲ್ ತರಲು ನಾವು ಬದ್ಧರಾಗಿದ್ದೇವೆ. ಮಹಿಳಾ ಸಬಲೀಕರ, ಮಹಿಳಾ ಸಶಕ್ತಿಕರಣಕ್ಕೆ ಮತ್ತಷ್ಟು ಶಕ್ತಿ ತುಂಬ ಕೆಲಸ ಮಾಡುವ ಅವಕಾಶ ನನಗೆ ಒಲಿದು ಬಂದಿದೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ ಕಾನೂನು ತರುವುದು ನನಗೆ ಒಲಿದ ಭಾಗ್ಯ ಎಂದು ಮೋದಿ ಹೇಳಿದ್ದಾರೆ.

ಹೊಸ ಸಂಸತ ಭವನದ ಮೊದಲ ಅಧಿವೇಶನದ ಈ ಶುಭಸಂದರ್ಭದಲ್ಲಿ ಎಲ್ಲಾ ಭಾರತೀಯರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ.  ವಿಜ್ಞಾನ ಯುಗದಲ್ಲಿ ಚಂದ್ರಯಾನ3 ಯೋಜನೆ ನಮ್ಮೆಲ್ಲರ ಹೆಮ್ಮೆ ದುಪ್ಪಟ್ಟು ಮಾಡಿದೆ. ಜಿ20 ಶೃಂಗಸಭೆ ಮೂಲಕ ಭಾರತ ವಿಶ್ವಕ್ಕೆ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶ ಸಿಕ್ಕಿತ್ತು. ಆಧುನಿಕ ಭಾರತದಲ್ಲಿ ಹೊಸ ಸಂಸತ್ ಭವನದ ಶುಭಾರಂಭವಾಗಿದೆ. ಇಂದು ಗಣೇಶ ಚತುರ್ಥಿಯ ಶುಭದಿನವಾಗಿದೆ.  ಗಣೇಶ ಸಿದ್ಧಿಯ ದೇವರು, ಗಣೇಶ ಸಿದ್ದಿ ವಿದ್ಯೆಯ ದೇವರು. ಈ ಶುಭಸಂದರ್ಭದಲ್ಲಿ ನಮ್ಮ ಸಿದ್ದಿ ಸಂಕಲ್ಪ ಸಾಕಾರಗೊಳ್ಳಲು ಸಹಕಾರಿಯಾಗಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಹಳೇ ಸಂಸತ್ ಭವನಕ್ಕೆ ಸಂವಿಧಾನ ಸದನ ಹೆಸರು ಸೂಚಿಸಿದ ಮೋದಿ, ವಿಪಕ್ಷಗಳ ಅನುಮತಿ ಕೋರಿದ ಪ್ರಧಾನಿ!

ಗಣೇಶ ಚತುರ್ಥಿ ದಿನ ಲೋಕಮಾನ್ಯ ತಿಲಕ ನೆನಪಾಗುತ್ತಿದೆ. ತಿಲಕರು ಗಣೇಶ ಹಬ್ಬವನ್ನು ಸಾರ್ವಜನಿಕ ಗಣೇಶೋತ್ಸವವನ್ನಾಗಿ ಪರಿವರ್ತಿಸಿದ್ದಾರೆ. ಈ ಮೂಲಕ ಸ್ವರಾಜ್ಯ ಸಂಕಲ್ಪವನ್ನು ಮೂಲೆ ಮೂಲೆಗೆ ತಲುಪಿಸಿದರು.  ಸ್ವತಂತ್ರ ಭಾರತದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಂಪ್ರದಾಯ ನಡೆದುಕೊಂಡು ಬಂದಿದೆ. ಇಂದು ಸಂವತ್ಸರಿಯ ಪರ್ವವಾಗಿದೆ. ಈ ದಿನ ಶ್ರಮವಾಣಿಯ ಪರ್ವ ಎಂದು ಕರೆಯುತ್ತಾರೆ. ಇಂದು ಮಿಚ್ಚಾಮಿ ದುಕುಡೋ ದಿನ. ಮನಸ್ಸು, ಶ್ರಮ, ವಚನ, ಕರ್ಮದ ಮೂಲಕ ಯಾವುದೇ ತಪ್ಪಾಗಿದ್ದರೆ ಕ್ಷಮೇ ಕೇಳುವ ದಿನ ಇಂದಾಗಿದೆ.  ಎಲ್ಲಾ ಸಂಸದರಿಗೆ, ಎಲ್ಲಾ ದೇಶ ಜನತೆಗೆ ಮಿಚ್ಚಾಮಿ ದುಕಡೋ ಎಂದು ಮೋದಿ ಹೇಳಿದ್ದಾರೆ.

ಸಂಸತ್ ಭವನ ಹೊಸದು, ಇಲ್ಲಿನ ವ್ಯವಸ್ಥೆ ಹೊಸದು, ಇಲ್ಲಿ ಎಲ್ಲವೂ ಹೊಸದು.  ಸ್ವತಂತ್ರ ಭಾರತದ ಸಾಕ್ಷಿಯಾಗಿರುವ ಸೆಂಗೋಲ್ ಈ ಸಂಸತ್ ಭವನದಲ್ಲಿದೆ. ಈ ಸೆಂಗೋಲ್ ಜವಾಹರ್ ಲಾಲ್ ನೆಹರೂ ಸೆಂಗೋಲ್ ಪಡೆಯುವ ಮೂಲಕ ಬ್ರಿಟಿಷರಿಂದ ಅಧಿಕಾರ ಪಡೆದುಕೊಂಡರು. ತಮಿಳುನಾಡಿನ ಮಹಾನ ಪರಂಪರೆಯಾಗಿರುವ ಸೆಂಗೋಲ್ ದೇಶದ ಏಕೆತೆಯ ಪ್ರತೀಕವಾಗಿದೆ. ಇಂದು ಇದೇ ಸೆಂಗೋಲ್  ಈ ಸಂಸತ್ತಿನಲ್ಲಿದೆ. ಇದಕ್ಕಿಂತ ಗರ್ವದ ವಿಚಾರ  ಏನಿದೆ ಎಂದು ಮೋದಿ ಹೇಳಿದ್ದಾರೆ.

ಈ ಭವ್ಯ ಸಂಸತ್ ಭವನ ಕಟ್ಟದ ನಿರ್ಮಾಣಕ್ಕೆ ಶ್ರಮಿಸಿದ ನಮ್ಮ ಎಂಜಿನೀಯರ್, ಅಧಿಕಾರಿಗಲು, ಕಾರ್ಮಿಕರಿಗೆ ನನ್ನ ಅಭಿನಂದನೆಗಳು, ಈ ಕಟ್ಟಡ ನಿರ್ಮಾಣದಲ್ಲಿ 30,000ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡಿದ್ದಾರೆ. ಈ ಸದನದಲ್ಲಿ ಡಿಜಿಟಲ್ ಬುಕ್ ಇಡಲಾಗಿದೆ. ಈ ಬುಕ್‌ನಲ್ಲಿ ಸಂಸತ್‌ನ ಸಂಪೂರ್ಣ ಇತಿಹಾಸ ತಿಳಿಯಬಹುದು. 140 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಹೊಸ ಸಂಸತ್ ಭವನದ ಮೂಲಕ ದೇಶದ ಅಭಿೃದ್ಧಿಗೆ ನಾವೆಲ್ಲ ಕೈಜೋಡಿಸಬೇಕಿದೆ ಎಂದರು.

ಪಕ್ಷ ಯಾವುದೇ ಇರಬಹುದು, ನಾವೆಲ್ಲ ಒಗ್ಗಟ್ಟಾಗಿ ಭಾರತದ ಅಭಿವೃದ್ಧಿಗೆ ಶ್ರಮಿಸೋಣ, ಖರ್ಗೆ!

ಸಂಸತ್ ರಾಷ್ಟ್ರ ಸೇವೆಯ ಸರ್ವೋಚ್ಚ ಸ್ಥಾನ. ಈ ಸಂಸತ್ ಪಕ್ಷಗಳಿಗೆ ಸೀಮಿತವಲ್ಲ. ಈ ಪವಿತ್ರ ಸಂಸತ್ ನಿರ್ಮಾಣ ದೇಶದ ಹಿತಕ್ಕಾಗಿ ಎಂದು ಮೋದಿ ಹೇಳಿದ್ದಾರೆ. ಎಲ್ಲಾ ಸಂಸದರು ಶಾಸನ ಪಾಲನೆ, ಸಂವಿಧಾನ ಗೌರವಕ್ಕೆ ಪಾತ್ರರಾಗುವ ಮೂಲಕ ಕೆಲಸ ಮಾಡಬೇಕಿದೆ. ಚುನಾವಣೆ ಆಗಮಿಸುತ್ತಿದೆ. ಮುಂದಿನ ದಿನದಲ್ಲಿ ಹೊಸ ಸಂಸತ್ ಭವನದ ಆಡಳಿತ ಪಕ್ಷದಲ್ಲಿ ಯಾರು ಇರಬೇಕು, ವಿರೋಧ ಪಕ್ಷದಲ್ಲಿ ಯಾರು ಇರಬೇಕು ಅನ್ನೋದನ್ನು ಜನರು ನಿರ್ಧರಿಸತ್ತಾರೆ ಎಂದು ಮೋದಿ ಹೇಳಿದ್ದಾರೆ.

ಸದನದಲ್ಲಿ ನಮ್ಮ ವಿಚಾರ, ವಿಮರ್ಷೆ ಬೇರೆ ಬೇರೆಯಾಗಿರುತ್ತದೆ. ಆದರೆ ನಮ್ಮ ಸಂಕಲ್ಪ ಒಂದೇ. ಮಹಿಳಾ ಸಶಕ್ತಿಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಭಾರತದ ಮಹಿಳಾ ಸಬಲೀಕರಣ ಯೋಜನೆಗೆ ಜಿ20 ಶೃಂಗಸಭೆಯಲ್ಲಿ ಅಭಿನಂದನೆ ವ್ಯಕ್ತವಾಗಿದೆ. ಜನಧನ್ ಯೋಜನೆ, ಮುದ್ರಾ ಯೋಜನೆ ಸೇರದಂತೆ ಹಲವು ಯೋಜನೆಗಳು ಮಹಿಳೆಯರನ್ನು ಸಶಕ್ತಿಕರಣ ಮಾಡಿದೆ. ಪ್ರಧಾನಿ ಅವಾಸ್ ಯೋಜನೆಯಡಿ ಮಹಿಳೆಯರು ಮನೆ ಪಡೆದಿದ್ದಾರೆ. ಪ್ರತಿ ದೇಶದ ಅಭಿವೃದ್ಧಿ ಯಾತ್ರೆಯಲ್ಲಿ ಕೆಲ ಮೈಲಿಗಲ್ಲು ಆಗಮಿಸುತ್ತದೆ. ಇಂದಿನ ದಿನ ನಾವೆಲ್ಲಾ ಹೊಸ ಇತಿಹಾಸ ರಚಿಸಿದ್ದೇವೆ. ಹೊಸ ಸದನದಲ್ಲಿ ಮೊದಲ ಭಾಷಣಧಲ್ಲಿ ನಾನು ವಿಶ್ವಾಸ ಹಾಗೂ ಗರ್ವದಿಂದ ಹೇಳುತ್ತಿದ್ದೇನೆ, ಇಂದಿನ ದಿನ ಇತಿಹಾಸದಲ್ಲಿ ಹೆಸರು ಅಜರಾಮರವಾಗಿರುವ ದಿನವಾಗಿದೆ ಎಂದು ಮೋದಿ ಹೇಳಿದ್ದಾರೆ.

ಅಟಲ್ ಸರ್ಕಾರದಲ್ಲಿ ಮಹಿಳಾ ಬಿಲ್ ಮಂಡನೆ ಮಾಡಲಾಗಿದೆ. ಹಲವು ಬಾರಿ ಈ ಮಸೂದೆ ಪಾಸ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈ ಪವಿತ್ರ ಕೆಲಸ ಮಾಡಲು ನನಗೆ ಅವಕಾಶ ಬಂದಿದೆ. ಈ ದಿನ ಇತಿಹಾಸ ಪುಟದಲ್ಲಿ ದಾಖಲಾದ ದಿನ. ಮಹಿಲಾ ಮೀಸಲಾತಿ ಬಿಲ್ ಮಂಡಿಸುತ್ತಿದ್ದೇನೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಶೇಕಡಾ 33ರಷ್ಟು ಹೆಚ್ಚಿಸುವ ಈ ಮಸೂದೆ ನಮ್ಮದೇಶದ ಮಹಿಳೆಯರಿಗೆ ಮಾತ್ರವಲ್ಲ ಲೋಕತಂತ್ರಕ್ಕೂ ಮತ್ತಷ್ಟು ಶಕ್ತಿ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.  ನಾರಿ ಶಕ್ತಿ ಬಂಧನ್ ಮಸೂದೆ ದೇಶದ ಮಹಿಳೆಯರಿಗೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದು ಮೋದಿ ಹೇಳಿದ್ದಾರೆ.

Follow Us:
Download App:
  • android
  • ios