Asianet Suvarna News Asianet Suvarna News

Gujarat Elections: ಭದ್ರ​ತಾ ಯೋಧನಿಂದ ಗುಂಡಿ​ನ ದಾಳಿ: 2 ಯೋಧರ ಹತ್ಯೆ

ಯೋಧರ ಮಧ್ಯೆ ಜಗಳ ಆರಂಭ​ವಾ​ಗಿದ್ದು, ಒಬ್ಬ ಯೋಧ ತನ್ನ ಅಸಾಲ್ಟ್‌ ರೈಫಲ್‌ ತೆಗೆದು ಗುಂಡು ಹಾರಿ​ಸಿ​ದ್ದಾರೆ. ಆಗ ಇಬ್ಬರು ಸ್ಥಳ​ದಲ್ಲೇ ಮೃತ​ಪಟ್ಟು ಇನ್ನಿಬ್ಬರು ಗಾಯ​ಗೊಂಡಿ​ದ್ದಾರೆ. ಗಾಯಾಳು​ಗ​ಳನ್ನು ಆಸ್ಪ​ತ್ರೆಗೆ ದಾಖ​ಲಿ​ಸ​ಲಾಯಿತು ಎಂದು ಅಧಿ​ಕಾ​ರಿ​ಗಳು ಹೇಳಿ​ದ್ದಾ​ರೆ. 

paramilitary personnel on gujarat election duty shoots 2 colleagues dead ash
Author
First Published Nov 27, 2022, 8:52 AM IST

ಪೋರಬಂದರ್‌: ಗುಜರಾತ್‌ನಲ್ಲಿ (Gujarat) ಚುನಾವಣೆ (Election) ಭದ್ರತೆಗೆ ನಿಯೋಜಿತವಾಗಿದ್ದ ಕೇಂದ್ರೀಯ ಮೀಸಲು ಸಶಸ್ತ್ರ ಪಡೆಯ (Central Armed Police Forces) ಸಿಬ್ಬಂದಿ ಮಧ್ಯೆ ಭಾರಿ ಜಗಳ ನಡೆ​ದಿದ್ದು, ಈ ವೇಳೆ ಒಬ್ಬ ಯೋಧ ಹಾರಿ​ಸಿದ ಗುಂಡಿಗೆ ಇಬ್ಬರು ಬಲಿ​ಯಾ​ಗಿ​ದ್ದಾರೆ (Death) ಹಾಗೂ ಇನ್ನಿ​ಬ್ಬರು ಗಾಯ​ಗೊಂಡಿ​ದ್ದಾ​ರೆ ಎಂದು ತಿಳಿದುಬಂದಿದೆ. ಈ ಸಿಬ್ಬಂದಿ ಪೋರ​ಬಂದರ್‌ (Porbandar) ಸನಿ​ಹದ ತುಕಡಾ ಗೋಸಾ ಗ್ರಾಮ​ದ​ಲ್ಲಿ ಸಿಎಪಿ​ಎಫ್‌ ಮಣಿ​ಪುರ ಬೆಟಾ​ಲಿ​ಯನ್‌ ಸಿಬ್ಬಂದಿ ಕಾವ​ಲಿಗೆ ನಿಯೋ​ಜಿ​ತ​ರಾ​ಗಿ​ದ್ದ​ರು. 

ಶನಿ​ವಾರ ಸಂಜೆ ತಾವು ತಂಗಿ​ರು​ವ ಇಲ್ಲಿನ ನಿರಾ​ಶ್ರಿ​ತ​ರ ಕೇಂದ್ರ​ದ​ಲ್ಲಿ ವಿಶ್ರಾಂತಿ ಪಡೆ​ಯು​ತ್ತಿ​ದ್ದ​ರು. ಆಗ ಯಾವುದೋ ಕಾರ​ಣಕ್ಕೆ ಸಂಜೆ 7ಕ್ಕೆ ಯೋಧರ ಮಧ್ಯೆ ಜಗಳ ಆರಂಭ​ವಾ​ಗಿದೆ. ಒಬ್ಬ ಯೋಧ ತನ್ನ ಅಸಾಲ್ಟ್‌ ರೈಫಲ್‌ ತೆಗೆದು ಗುಂಡು ಹಾರಿ​ಸಿ​ದ್ದಾರೆ. ಆಗ ಇಬ್ಬರು ಸ್ಥಳ​ದಲ್ಲೇ ಮೃತ​ಪಟ್ಟು ಇನ್ನಿಬ್ಬರು ಗಾಯ​ಗೊಂಡಿ​ದ್ದಾರೆ. ಗಾಯಾ​ಳು​ಗ​ಳನ್ನು ಆಸ್ಪ​ತ್ರೆಗೆ ದಾಖ​ಲಿ​ಸ​ಲಾಯಿತು ಎಂದು ಅಧಿ​ಕಾ​ರಿ​ಗಳು ಹೇಳಿ​ದ್ದಾ​ರೆ. 

ಇದನ್ನು ಓದಿ: Gujarat Election 2022: ಐದು ವರ್ಷದಲ್ಲಿ 20 ಲಕ್ಷ ಉದ್ಯೋಗ, ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್‌ ಸ್ಕೂಟಿ!

ಸಂಜೆ ಜಗಳವಾಡಿದಾಗ ಅವರು ಸಕ್ರಿಯ ಕರ್ತವ್ಯದಲ್ಲಿ ಇರಲಿಲ್ಲ. ಆದರೆ ಜಗಳ ಉಲ್ಬಣಗೊಂಡಾಗ ಸಿಟ್ಟಿಗೆದ್ದ ಯೋಧರೊಬ್ಬರು ಎಕೆ -47 ರೈಫಲ್‌ನಿಂದ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಅವರು ಮಣಿಪುರದ ಇಂಡಿಯಾ ರಿಸರ್ವ್ ಬೆಟಾಲಿಯನ್ (IRB) ನ ಭಾಗವಾಗಿದ್ದರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಜೊತೆಗೆ ಗುಜರಾತ್‌ನಲ್ಲಿ ನಿಯೋಜಿಸಲ್ಪಟ್ಟಿದ್ದಾರೆ ಎಂದು ಪೋರಬಂದರ್ ಕಲೆಕ್ಟರ್ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ಎ.ಎಮ್. ಶರ್ಮಾ ಹೇಳಿದ್ದಾರೆ.

ಒಬ್ಬ ಜವಾನನ ಹೊಟ್ಟೆಗೆ ಗುಂಡು, ಇನ್ನೊಬ್ಬರ ಕಾಲಿಗೆ ಗುಂಡು ತಗುಲಿದ್ದು, ಗಾಯಗೊಂಡ ಈ ಇಬ್ಬರು ಜವಾನರನ್ನು ಪೋರಬಂದರ್ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಅವರನ್ನು ಸುಧಾರಿತ ಚಿಕಿತ್ಸೆಗಾಗಿ ಸುಮಾರು 150 ಕಿಮೀ ದೂರದಲ್ಲಿರುವ ಜಾಮ್‌ನಗರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಕೇಜ್ರಿವಾಲ್‌ ಎದುರು ‘ಮೋದಿ ಮೋದಿ’ ಜಪ ಮಾಡಿದ ಗುಜರಾತ್‌ ಜನತೆ: ನಿಮ್ಮ ಹೃದಯ ಗೆಲ್ಲುತ್ತೇವೆ ಎಂದ ದೆಹಲಿ ಸಿಎಂ

ಆರೋಪಿಯನ್ನು ಕಾನ್ಸ್ಟೇಬಲ್‌ ಎಸ್. ಇನೌಚಾಸಿಂಗ್ ಎಂದು ಗುರುತಿಸಲಾಗಿದೆ ಮತ್ತು ಇಬ್ಬರು ಮೃತ ಯೋಧರನ್ನು ತೋಯ್ಬಾ ಸಿಂಗ್ ಮತ್ತು ಜಿತೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಹಾಗೂ, ಗಾಯಗೊಂಡವರನ್ನು ಕಾನ್ಸ್ಟೇಬಲ್‌ಗಳಾದ ಚೋರಜಿತ್ ಮತ್ತು ರೋಹಿಕಾನಾ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮಣಿಪುರಕ್ಕೆ ಸೇರಿದವರು ಎಂದು ಪೊಲೀಸ್‌ ವರದಿ ಮಾಹಿತಿ ನೀಡಿದೆ.

ಘಟ​ನೆಗೆ ಕಾರ​ಣ​ವೇನು ಎಂಬ ತನಿಖೆ ಆರಂಭಿ​ಸ​ಲಾ​ಗಿ​ದೆ. ಗುಜರಾತ್‌ನ ಪೋರಬಂದರ್‌ನಿಂದ ಸುಮಾರು 25 ಕಿಮೀ ದೂರದಲ್ಲಿರುವ ತುಕ್ಡಾ ಗೋಸಾ ಗ್ರಾಮದ ಸೈಕ್ಲೋನ್ ಕೇಂದ್ರದಲ್ಲಿ ಅವರು ತಂಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬಿಜೆಪಿ ಮೋದಿ ಹೆಸರಲ್ಲಿ ವೋಟು ಕೇಳೋದೇಕೆ?: ಅಮಿತ್‌ ಶಾ

ಪೋರಬಂದರ್ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಡಿಸೆಂಬರ್ 1 ರಂದು ಮತದಾನ ನಡೆಯಲಿದ್ದು, ಎರಡನೇ ಹಂತದಲ್ಲಿ ಡಿಸೆಂಬರ್ 5 ರಂದು ಮತದಾನ ನಡೆಯಲಿದ್ದರೆ ಫಲಿತಾಂಶ ಡಿಸೆಂಬರ್‌ 8 ರಂದು ನಡೆಯಲಿದೆ.

ಇದನ್ನೂ ಓದಿ: ನರೇಂದ್ರನ ದಾಖಲೆಗಳನ್ನು ಭೂಪೇಂದ್ರ ಮುರಿಯಬೇಕೆಂದು ಬಯಸುತ್ತೇನೆ: ಪ್ರಧಾನಿ ಮೋದಿ

Follow Us:
Download App:
  • android
  • ios