ಟಿ20 ವಿಶ್ವಕಪ್ ಟೂರ್ನಿಗೆ ಒಂದು ತಿಂಗಳು ಮಾತ್ರ ಬಾಕಿ. ಟೀಂ ಇಂಡಿಯಾ ಸೇರಿದಂತೆ ಬಹುತೇಕ ತಂಡಗಳು ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ. ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆ್ಯಂಥಮ್ ಹಾಡು ಬಿಡುಗಡೆ ಮಾಡಿದೆ. ಖ್ಯಾತ ಗಾಯಕರಾದ ಸೀನ್ ಪೌಲ್, ಕೆಸ್ ಜೊತೆ ಕ್ರಿಸ್ ಗೇಲ್, ಉಸೇನ್ ಬೋಲ್ಟ್ ಕಾಣಿಸಿಕೊಂಡಿದ್ದಾರೆ.
ದುಬೈ(ಮೇ.02) ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ರೋಚಕ ಘಟ್ಟ ತಲುಪಿದೆ. ಇದರ ನಡುವೆ ಟಿ20 ವಿಶ್ವಕಪ್ ಟೂರ್ನಿ ತಯಾರಿಗಳು ನಡೆಯತ್ತಿದೆ. ಐಪಿಎಲ್ ಜೊತೆಗೆ ಟಿ20 ವಿಶ್ವಕಪ್ ಟೂರ್ನಿ ಕಾವು ಹೆಚ್ಚಾಗತೊಡಗಿದೆ. ಭಾರತದ ಅಭಿಮಾನಿಗಳಿಗೆ ಐಪಿಎಲ್ ಗುಂಗಿನಿಂದ ಹೊರಬರುವ ಮೊದಲೇ ಟಿ20 ವಿಶ್ವಕಪ್ ಜ್ವರ ಆವರಿಸಿಬಿಡಲಿದೆ. ಇದೀಗ ಇದೇ ಐಪಿಎಲ್ ಟೂರ್ನಿ ನಡುವೆ ಟಿ20 ವಿಶ್ವಕಪ್ ಟೂರ್ನಿ ಆ್ಯಂಥಮ್ ಸಾಗ್ ಬಿಡುಗಡೆ ಮಾಡಲಾಗಿದೆ. ಖ್ಯಾತ ಗಾಯಕರಾದ ಸೀನ್ ಪೌಲ್, ಕೆಸ್ ಜೊತೆ ಕ್ರಿಸ್ ಗೇಲ್, ಓಟಗಾರ ಉಸೇನ್ ಬೋಲ್ಟ್ ಸೇರಿದಂತೆ ಕೆಲ ಪ್ರಮುಖ ಸ್ಟಾರ್ಸ್ ಕಾಣಿಸಿಕೊಂಡಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯನ್ನು ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿಯಾಗಿ ಆತಿಥ್ಯವಹಿಸಿದೆ. ಇದೀಗ ಐಸಿಸಿ ಆ್ಯಂಥಮ್ ಹಾಡು ಬಿಡುಗಡೆ ಮಾಡಿದೆ. ಔಟ್ ಆಫ್ ದಿಸ್ ವರ್ಲ್ಡ್ ಅನ್ನೋ ಹಾಡನ್ನು ಬಿಡುಗಡೆ ಮಾಡಲಾಗಿದೆ. ಜರ್ಮನಿ ಅವಾರ್ಡ್ ವಿನ್ನಿಂಗ್ ಸೀನ್ ಪೌಲ್ ಹಾಗೂ ಸೋಕಾ ಸೂಪರ್‌ಸ್ಟಾರ್ ಗಾಯಕ ಹಾಡಿದ್ದಾರೆ. ಜೊತೆಗೆ ಜಂಟಿಯಾಗಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಚಾಂಪಿಯನ್ ಉಸೇನ್ ಬೋಲ್ಟ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.
T20 World Cup 2024: ಸೂಪರ್ ಫಾರ್ಮ್‌ನಲ್ಲಿದ್ದ ಕೆ ಎಲ್ ರಾಹುಲ್‌ನ ಕೈಬಿಟ್ಟಿದ್ದೇಕೆ..?
ಮಿಚೆಲ್ ಟ್ಯಾನೋ ಮೋನಾಟೋ ಈ ಆ್ಯಂಥಮ್ ಹಾಡನ್ನು ನಿರ್ಮಾಣ ಮಾಡಿದೆ. ಶಿವನಾರಾಯಣ ಚಂದ್ರಪಾಲ್, ವಿಂಡೀಸ್ ಮಹಿಳಾ ಆಟಗಾರ್ತಿ ಸ್ಟೆಫಾನಿ ಟೇಲರ್, ಅಮೇರಿಕಾ ವೇಗಿ ಆಲಿ ಖಾನ್ ಸೇರಿದಂತೆ ಕೆರಿಬಿಯನ್ ಸೆಲೆಬ್ರೆಟಿಗಳು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಜೂನ್ 1 ರಿಂದ ಜೂನ್ 29ರ ವರೆಗೆ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಜೂನ್ 29ರಂದು ಬಾರ್ಬಡೋಸ್‌ನಲ್ಲಿ ಫೈನಲ್ ಪಂದ್ಯ ಆಯೋಜನೆಯಾಗಿದೆ. ಈಗಾಗಲೇ ಭಾರತ ಸೇರಿದಂತೆ ಪ್ರಮುಖ ಕ್ರಿಕೆಟ್ ಮಂಡಳಿಗಳು ತಂಡ ಪ್ರಕಟಿಸಿದೆ.
ಕಳಪೆ ಫಾರ್ಮ್‌ನಲ್ಲಿರುವ ಹಾರ್ದಿಕ್ ಪಾಂಡ್ಯಗೆ ವಿಶ್ವಕಪ್ ಟೂರ್ನಿಗೆ ಸೆಲೆಕ್ಟ್ ಮಾಡಿದ್ದೇಕೆ?
024ರ ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್, ಅರ್ಶ್‌ದೀಪ್ ಸಿಂಗ್, ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್.
ಮೀಸಲು ಆಟಗಾರರು: ಶುಭ್‌ಮನ್ ಗಿಲ್, ರಿಂಕು ಸಿಂಗ್, ಆವೇಶ್ ಖಾನ್, ಖಲೀಲ್ ಅಹ್ಮದ್.
