IPL 2024 ಹೈದರಾಬಾದ್ ಕೈಹಿಡಿದ ಟ್ರಾವಿಸ್-ನಿತೀಶ್, ರಾಜಸ್ಥಾನಕ್ಕೆ 202 ರನ್ ಟಾರ್ಗೆಟ್!
ನಿತೀಶ್ ರೆಡ್ಡಿ ಸ್ಪೋಟಕ ಬ್ಯಾಟಿಂಗ್‌ನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ದಿಟ್ಟ ಹೋರಾಟ ನೀಡಿದೆ. ದಿಢೀರ್ ಕುಸಿತ ಕಂಡು ಕಂಗಾಲಾಗಿದ್ದ ಹೈದರಾಬಾದ್ ಇದೀಗ ರಾಜಸ್ಥಾನಕ್ಕೆ 202 ರನ್ ಟಾರ್ಗೆಟ್ ನೀಡಿದೆ.
ಹೈದರಾಬಾದ್(ಮೇ.02) ಐಪಿಎಲ್ ಟೂರ್ನಿ ಲೀಗ್ ಹಂತದ ಪಂದ್ಯಗಳು ಇದೀಗ ಕತೂಹಲ ಹೆಚ್ಚಿಸುತ್ತಿದೆ. ಪ್ಲೇ ಆಫ್ ಸ್ಥಾನ ಯಾರಿಗೆ, ಯಾವ ತಂಡದ ಫಲಿತಾಶ ಇತರ ತಂಡ ಪ್ಲೇ ಆಫ್ ಕನಸು ಕಮರಿಸುತ್ತಿದೆ ಅನ್ನೋ ಲೆಕ್ಕಾಚಾರ ಜೋರಾಗಿದೆ. ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ ಬಹುತೇಕ ಖಚಿತವಾಗಿದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಇದು ಮಹತ್ವದ ಪಂದ್ಯ. ಈ ಪಂದ್ಯದಲ್ಲಿ ಹೈದರಾಬಾದ್ ತಂಡಕ್ಕೆ ಟ್ರಾವಿಸ್ ಹೆಡ್ ಹಾಗೂ ನಿತೀಶ್ ರೆಡ್ಡಿ ಹೋರಾಟ ನೆರವಾಗಿದೆ. ಇವರಿಬ್ಬರ ಸ್ಪೋಟಕ ಅರ್ಧಶತಕದಿಂದ ಸನ್ ರೈಸರ್ಸ್ ಹೈದರಾಬಾದ್ 3 ವಿಕೆಟ್ ನಷ್ಟಕ್ಕ 201 ರನ್ ಸಿಡಿಸಿದೆ.
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗದ್ದ ಎಸ್‌ಆರ್‌ಹೆಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಬೃಹತ್ ಮೊತ್ತ ಸಿಡಿಸಿವು ಲೆಕ್ಕಾಚಾರದಲ್ಲಿತ್ತು. ಆದರೆ ರಾಜಸ್ಥಾನ ರಾಯಲ್ಸ್ ಬೌಲಿಂಗ್ ದಾಳಿಗೆ ಹೈದರಾಬಾದ್ ಕುಸಿತ ಕಂಡಿತು. ಒಂದೆಡೆ ಟ್ರಾವಿಸ್ ಹೆಡ್ ಹೋರಾಟ ನಡೆಸಿದರೆ, ಮತ್ತೊಂದೆಡೆ ವಿಕೆಟ್ ಪತನಗೊಂಡಿತು. ಅಭಿಷೇಕ್ ಶರ್ಮಾ 12 ರನ್ ಸಿಡಿಸಿ ಔಟಾದರೆ, ಅನ್ಮೋಲ್‌ಪ್ರೀತ್ ಸಿಂಗ್ 8 ರನ್ ಸಿಡಿಸಿ ನಿರ್ಗಮಿಸಿದರು.
ಸುರೇಶ್ ರೈನಾ ಕುಟುಂಬಕ್ಕೆ ಮತ್ತೊಂದು ಆಘಾತ, ಅಪಘಾತದಲ್ಲಿ ಸೋದರ ಮಾವನ ಪುತ್ರ ನಿಧನ!
ನಿತೀಶ್ ರೆಡ್ಡಿ ಹಾಗೂ ಟ್ರಾವಿಸ್ ಹೆಡ್ ಜೊತೆಯಾಟದಿಂದ ಹೈದರಾಬಾದ್ ಮತ್ತೆ ದಿಟ್ಟ ಹೋರಾಟ ನೀಡಿತು. ಟ್ರಾವಿಸ್ ಹೆಡ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಟ್ರಾವಿಸ್ ಹೆಡ್ 44 ಎಸೆತದಲ್ಲಿ 58 ರನ್ ಸಿಡಿಸಿದರು. ಹೆಡ್ ವಿಕೆಟ್ ಪತನದ ಬಳಿಕ ನಿಶೀತ್ ರೆಡ್ಡಿ ಆಕ್ರಮಣಕಾರಿ ಆಟಕ್ಕೆ ಮುಂದಾದರು. ನಿತೀಶ್ ರೆಡ್ಡಿಗೆ ಹೆನ್ರಿಚ್ ಕ್ಲಾಸೆನ್ ಉತ್ತಮ ಸಾಥ್ ನೀಡಿದರು.
ನಿತೀಶ್ ರೆಡ್ಡಿ 42 ಎಸೆತದಲ್ಲಿ ಅಜೇಯ 76 ರನ್ ಸಿಡಿಸಿದರೆ, ಹೆನ್ರಿಚ್ ಕ್ಲಾಸೆನ್ ಅಜೇಯ 42 ರನ್ ಸಿಡಿಸಿದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ 3 ವಿಕೆಟ್ ನಷ್ಟಕ್ಕೆ 201 ರನ್ ಸಿಡಿಸಿತು.
2024ರ ಐಪಿಎಲ್ ಟೂರ್ನಿಯಲ್ಲಿ ಅಸಾಧ್ಯ ಮೊತ್ತವನ್ನೇ ಚೇಸ್ ಮಾಡಿರುವ ರಾಜಸ್ಥಾನ ರಾಯಲ್ಸ್ ಇದೀಗ ಹೈದರಾಬಾದ್ ನೀಡಿರುವ ಟಾರ್ಗೆಟ್ ಚೇಸ್ ಮಾಡಲು ಸಜ್ಜಾಗಿದೆ. ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಲೈನ್ ಅಪ್ ಕೂಡ ಉತ್ತಮವಾಗಿದೆ
ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯದ ನತದೃಷ್ಟ ಕ್ರಿಕೆಟಿಗರಿವರು..!
ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ಶಿಮ್ರೊನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೋಲ್ಟ್, ಅವೇಶ್ ಖಾನ್, ಯುಜವೇಂದ್ರ ಚಹಾಲ್, ಸಂದೀಪ್ ಶರ್ಮಾ