ದೆಹಲಿಯ ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದ ಬೆನ್ನಲ್ಲಿಯೇ ದೆಹಲಿ ಮೆಟ್ರೋದಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿ ಮಾಡಲಾಗಿದೆ. ಇದರ ನಡುವೆಎ ವೀಲ್‌ಚೇರ್‌ನಲ್ಲಿದ್ದ ಮಹಿಳೆಗೆ ದೆಹಲಿ ಮೆಟ್ರೋದಲ್ಲಿ ಪ್ರವೇಶ ನಿರಾಕರಿಸಲಾಗಿದೆ. 

ನವದೆಹಲಿ (ಮೇ.2): ಶಾಲೆಗಳಿಗೆ ಈ ಮೇಲ್‌ ಮೂಲಕ ಕಳಿಸಲಾದ ಹುಸಿ ಬಾಂಬ್‌ ಬೆದರಿಕೆ ಕರೆದ ಬಳಿಕ ದೆಹಲಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿ ಮಡಲಾಗಿದೆ. ಅದರಲ್ಲೂ ಪ್ರಮುಖವಾಗಿ ದೆಹಲಿ ಮೆಟ್ರೋದಲ್ಲಿ ಸುರಕ್ಷತೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲಾಗಿದೆ. ಇದು ಮೋಟಾರುಚಾಲಿತ ಗಾಲಿಕುರ್ಚಿಯನ್ನು ಬಳಸುವ ಮಹಿಳೆಯೊಬ್ಬರಿಗೆ ಅಡಚಣೆಗೆ ಕಾರಣವಾಗಿದೆ. ಇದರಿಂದಾಗಿ ಅವರಿಗೆ ಮೆಟ್ರೋ ಪ್ರವೇಶಕ್ಕೆ ಅವಕಾಶ ನೀಡದೇ ಬ್ಲೂ ಲೈನ್‌ ಸೆಕ್ಟರ್‌ 16 ಮೆಟ್ರೋ ನಿಲ್ದಾಣದ ಚೆಕ್‌ ಇನ್‌ ಪ್ರದೇಶದ ಹೊರಗೆ ನಿಲ್ಲಿಸಲಾಗಿತ್ತು. ಸಿಐಎಸ್‌ಎಫ್‌ ಸಿಬ್ಬದಿ ಆಕೆಗೆ ದೆಹಲಿ ಮೆಟ್ರೋ ಅವರ ಗಾಲಿಕುರ್ಚಿಯನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದರು. ಆದರೆ, ಇದಕ್ಕೆ ಅವರು ಒಪ್ಪದ ಕಾರಣ ಪ್ರವೇಶವನ್ನು ನಿರಾಕರಿಸಲಾಗಿತ್ತು.

ದೆಹಲಿ ಮೆಟ್ರೋದ ವೀಲ್‌ಚೇರ್‌ ಬಳಸದೇ ಇದ್ದಲ್ಲಿ, ಮೆಟ್ರೋ ಹತ್ತಲು ಅವಕಾಶ ನೀಡೋದಿಲ್ಲ ಎಂದು ನನಗೆ ತಿಳಿಸಲಾಗಿತ್ತು ಎಂದು ಆಕೆ ಹೇಳಿದ್ದಾರೆ. ಈ ಹಂತದಲ್ಲಿ ನಾನು ನನ್ನ ಎಲೆಕ್ಟ್ರಿಕ್‌ ಚೀಲ್‌ಚೇರ್‌ಅನ್ನು ಬಿಟ್ಟು ಡಿಎಂಆರ್‌ಸಿ ನೀಡುವ ಬಳಸಲು ಭಿನ್ನವಾದ ವೀಲ್‌ಚೇರ್‌ಗೆ ಬದಲಾವಣೆ ಮಾಡಿಕೊಳ್ಳಬೇಕಿತ್ತು. ಆದರೆ, ನನ್ನ ಮೆಟ್ರೋ ಜರ್ನಿ ಮುಕ್ತಾಯವಾದ ಬಳಿಕ ನಾನೇನು ಮಾಡಬೇಕು ಅನ್ನೋದರ ಬಗ್ಗೆ ಈಗಲೂ ಗೊಂದಲವಿದೆ. ನನಗೆ ಸ್ಟೇಷನ್‌ನ ಹೊರಗಡೆಯೂ ವೀಲ್‌ಚೇರ್‌ ನೀಡದೇ ಇದ್ದಲ್ಲಿ, ನಾನು ಪ್ರಯಾಣ ಮಾಡೋದಕ್ಕೆ ಹೇಗೆ ಸಾಧ್ಯ' ಎಂದು ಪೋಲಿಯೋಗೆ ತುತ್ತಾಗಿರುವ ಅಂಜು ಪ್ರಶ್ನೆ ಮಾಡಿದ್ದಾರೆ.

ದೆಹಲಿಯ ಮಯೂರ್ ವಿಹಾರ್ ನಿವಾಸಿ ಮತ್ತು ಪ್ಯಾರಾ ಆರ್ಚರ್ ಆಗಿರುವ ಅಂಜು, ಮೆಟ್ರೋದಲ್ಲಿ ಅನೇಕ ಸಂದರ್ಭಗಳಲ್ಲಿ ಒಂದೇ ಗಾಲಿಕುರ್ಚಿಯನ್ನು ಬಳಸಿದ್ದರಿಂದ ಸಿಐಎಸ್ಎಫ್ ಸಿಬ್ಬಂದಿಯ ಪ್ರವೇಶವನ್ನು ನಿರಾಕರಿಸಿದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು. "ಇದು ಮೊದಲ ಬಾರಿಗೆ ಸಂಭವಿಸಿದೆ. ನಾನು ನನ್ನ ಗಾಲಿಕುರ್ಚಿಯನ್ನು ದೆಹಲಿ ಮೆಟ್ರೋದಲ್ಲಿ 2 ವರ್ಷಗಳಿಂದ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಅಂಜು ಇತ್ತೀಚೆಗೆ ಅಪಘಾತದಲ್ಲಿ ಕೈಗೆ ಆದ ಗಾಯಕ್ಕೆ ವೈದ್ಯರನ್ನು ಸಂಪರ್ಕಿಸಲು ಹರಿಯಾಣದ ಬಹದ್ದೂರ್‌ಗಢಕ್ಕೆ ತೆರಳುತ್ತಿದ್ದರು.

ಅಂಜು ಅಂತಿಮವಾಗಿ ದುಬಾರಿ ಕ್ಯಾಬ್‌ ಸವಾರಿಯನ್ನು ಆಯ್ದುಕೊಳ್ಳುವಂತಾಗಿತ್ತು. "ನನ್ನನ್ನು ನಿಲ್ದಾಣದೊಳಗೆ ಬಿಡುವಂತೆ ನಾನು ಸಿಐಎಸ್ಎಫ್ ಸಿಬ್ಬಂದಿಗೆ ಸುಮಾರು ಒಂದು ಗಂಟೆಗಳ ಕಾಲ ಮನವಿ ಮಾಡಿದೆ, ಆದರೆ ಅವರು ಕೇಳಲಿಲ್ಲ" ಎಂದು ಘಟನಯ ಬಗ್ಗೆ ವಿವರಿಸಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಸೆಕ್ಟರ್ 16ಕ್ಕೆ ಆಗಮಿಸಿದ ಅಂಜು, "ನಾನು ಯಾರಿಗೋ ಡಿಪೆಂಡೆಂಟ್‌ ಆಗೋ ಬಗ್ಗೆ ನಂಬಿಕೆಯಿಲ್ಲ, ಆದರೆ ಈ ಅನುಭವ ನನ್ನನ್ನು ಛಿದ್ರಗೊಳಿಸಿದೆ" ಎಂದು ತನ್ನ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.. ನೆರೆಹೊರೆಯವರು ಅಥವಾ ಇತರ ಭದ್ರತಾ ಸಿಬ್ಬಂದಿಯಿಂದ ಸಹಾಯವನ್ನು ನಿರೀಕ್ಷಿಸುತ್ತಿದ್ದರೂ, ಅಂಜುಗೆ ಯಾವುದೇ ಬೆಂಬಲ ಸಿಗಲಿಲ್ಲ.

ನೋಡೋಕೆ ಮಾಡ್ರನ್ ಅಪ್ಸರೆ; ಮೈಮೇಲಿನ ಡ್ರೆಸ್, ಕಾಸ್ಟ್ಯೂಮ್ ಮಾತ್ರ ಕೇವಲ 900 ರೂಪಾಯಿ

ಅಂಗವಿಕಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರಾಜ್ ಮಾತನಾಡಿ, 2 ವರ್ಷಗಳ ಹಿಂದೆ ಅಂಜು ಅವರಿಗೆ ಗಾಲಿಕುರ್ಚಿಯನ್ನು ಒದಗಿಸಿದ್ದೇವೆ ಎಂದು ತಿಳಿಸಿದ್ದಾರೆ. ಎಲೆಕ್ಟ್ರಿಕ್ ಗಾಲಿಕುರ್ಚಿ ಹೊಂದಿರುವ ವ್ಯಕ್ತಿಗಳಿಗೆ ಮೆಟ್ರೋ ಪ್ರವೇಶವನ್ನು ನಿರಾಕರಿಸುವುದು ಅಪರೂಪ ಎಂದು ರಾಜ್ ಉಲ್ಲೇಖಿಸಿದ್ದಾರೆ. ಸಂಸ್ಥೆಯು ಅನೇಕ ಪ್ಯಾರಾ ಅಥ್ಲೀಟ್‌ಗಳಿಗೆ ಈ ಗಾಲಿಕುರ್ಚಿಗಳನ್ನು ಪೂರೈಸಿದೆ. ಸಿಐಎಸ್ಎಫ್ ಭದ್ರತೆಯೊಂದಿಗೆ ಕೆಲವರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಅವರು ಸಾಮಾನ್ಯವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ. ಅಂಗವಿಕಲರ ಹಕ್ಕುಗಳ ಕಾಯ್ದೆಯಡಿ ಅಂಗವಿಕಲ ವ್ಯಕ್ತಿಗಳ ಮುಖ್ಯ ಆಯುಕ್ತರಲ್ಲಿ ಅಂಜು ಪ್ರಕರಣವನ್ನು ದಾಖಲಿಸಲು ಸಂಸ್ಥೆ ಉದ್ದೇಶಿಸಿದೆ ಎಂದಿದ್ದಾರೆ.

ದೆಹಲಿ ಮೆಟ್ರೋದಲ್ಲಿ ಯುವತಿಯರ ಹೋಳಿ ಸಂಭ್ರಮದ ವಿಡಿಯೋ ಡೀಪ್‌ಫೇಕ್‌ ? ಡಿಎಂಆರ್‌ಸಿ ಹೀಗೆ ಹೇಳಿದ್ದೇಕೆ!