ಸುರೇಶ್ ರೈನಾ ಕುಟುಂಬಕ್ಕೆ ಮತ್ತೊಂದು ಆಘಾತ, ಅಪಘಾತದಲ್ಲಿ ಸೋದರ ಮಾವನ ಪುತ್ರ ನಿಧನ!
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸೋದರ ಮಾವನ ಪುತ್ರ ಅಪಘಾತದಲ್ಲಿ ನಿಧನರಾಗಿದ್ದರೆ. ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು, ಸ್ಕೂಟರ್ ಮೂಲಕ ತೆರಳುತ್ತಿದ್ದ ಸೋದರ ಮಾವನ ಪುತ್ರನಿಗೆ ಡಿಕ್ಕಿ ಹೊಡೆದ ಟ್ಯಾಕ್ಸಿ ಚಾಲಕ ಪರಾರಿಯಾಗಿದ್ದಾನೆ. ಕಳೆದ ವರ್ಷ ರೈನಾ ಅಂಕಲ್ ಮೇಲೆ ರೌಡಿಗಳು ದಾಳಿ ನಡೆಸಿ ಹತ್ಯೆ ಮಾಡಿದ್ದರು.
ಹಿಮಾಚಲ ಪ್ರದೇಶ(ಮೇ.02) ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕಳೆದ ವರ್ಷ ಸುರೇಶ್ ರೈನಾ ಆಪ್ತ ಸಂಬಂಧಿ ಮೇಲೆ ರೌಡಿಗಳು ದಾಳಿ ನಡೆಸಿಹತ್ಯೆ ಮಾಡಲಾಗಿತ್ತು. ಇದೀಗ ರೈನಾ ಸೋದರ ಮಾವ ಟ್ಯಾಕ್ಸಿ ಡಿಕ್ಕಿಯಾಗಿ ಮೃತಪಪಟ್ಟ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆದಿದೆ. ಸ್ಕೂಟರ್ ಮೂಲಕ ತೆರಳುತ್ತಿದ್ದ ಸುರೇಶ್ ರೈನಾ ಸೋದರ ಮಾವನ ಪುತ್ರ ಸೌರಬ್ ಕುಮಾರ್ ಹಾಗೂ ಆಪ್ತ ಸಂಬಂಧಿ ಶುಭಮ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಗಗ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ. ಸ್ಕೂಟರ್ ಮೂಲಕ ಸೌರಬ್ ಹಾಗೂ ಶುಭಮ್ ಇಬ್ಬರು ತೆರಳುತ್ತಿದ್ದ ವೇಳೆ ಅತೀ ವೇಗವಾಗಿ ಬಂದ ಟ್ಯಾಕ್ಸಿ ಡಿಕ್ಕಿ ಹೊಡೆದಿದೆ. ಸ್ಕೂಟರ್ ಡಿಕ್ಕಿ ಹೊಡೆದ ಡ್ರೈವರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಕೂಟರ್ ಚಲಾಯಿಸುತ್ತಿದ್ದ ಸೌರಬ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೋರ್ವ ಸಂಬಂಧಿ ಶುಭಮ್ ಆಸ್ಪತ್ರೆ ಸಾಗಿಸುವ ಮಧ್ಯ ಮೃತಪಟ್ಟಿದ್ದಾರೆ.
ಸುರೇಶ್ ರೈನಾ ಸಂಬಂಧಿಕರ ತ್ರಿವಳಿ ಹತ್ಯೆ ಕೇಸ್: ಕುಖ್ಯಾತ ಕ್ರಿಮಿನಲ್ ಎನ್‌ಕೌಂಟರ್ ಮಾಡಿದ ಯುಪಿ ಪೊಲೀಸ್
ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಕುರಿತು ಇತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಗಗ್ಗಲ್ ನಿವಾಸಿಯಾಗಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಗ್ರಾದಿಂದ ಮಂಡಿಗೆ ಪರಾರಿಯಾಗಿದ್ದ ಆರೋಪಿ ಇದೀಗ ಪೊಲೀಸರ ಕಸ್ಟಡಿಯಲ್ಲಿದ್ದಾನೆ.
ಅಪಘಾತ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಪಘಾತಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶೈಕ್ಷಣಿಕವಾಗಿ ಉತ್ತಮ ಅಂಕ ಪಡೆದಿರುವ ಇಬ್ಬರೂ ಇದೀಗ ಅಪಘಾತದಲ್ಲಿ ಮೃತಪಪಟ್ಟಿರುವುದು ಕುಟುಂಬಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಘಟನೆ ಸುರೇಶ್ ರೈನಾ ಕುಟುಂಬಕ್ಕೆ ಆಘಾತ ತಂದಿದೆ. ರೈನಾ ಕುಟುಂಬದಲ್ಲಿ ಕಳೆದೆರಡು ವರ್ಷದಲ್ಲಿ ನಡೆದಿರುವ ಘಟನೆಗಳು ಕುಟುಂಬದ ಆತಂಕ ಹೆಚ್ಚಿಸಿದೆ. ಪದೇ ಪದೇ ಈ ರೀತಿ ಘಟನೆ ಮರುಕಳಿಸುತ್ತಿರುವುದು ಆತಂಕ ಹೆಚ್ಚಿಸಿದೆ.
ರೋಹಿತ್ ಶರ್ಮಾ ಬಳಿಕ ಭಾರತದ ಭವಿಷ್ಯದ ನಾಯಕ ಯಾರು..? ಸುರೇಶ್ ರೈನಾ ಕೊಟ್ರು ಇಂಟ್ರೆಸ್ಟಿಂಗ್ ಆನ್ಸರ್
ಕಳೆದ ವರ್ಷ ಸುರೇಶ್ ರೈನಾ ಮಾವ ಅಶೋಕ್ ಕುಮಾರ್ ಮೇಲೆ ರೌಡಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಕಾಂಟ್ರಾಕ್ಟರ್ ಆಗಿದ್ದ ಅಶೋಕ್ ಕುಮಾರ್ ಕುಟುಂಬ ಸಮೇತ ತೆರಳುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ್ದ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದರು. ಪಠಾಣ್‌ಕೋಟ್‌ನ ಥೈರಲ್ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಅಶೋಕ್ ಕುಮಾರ್ ಪುತ್ರ ಹಾಗೂ ಪತ್ನಿಗೂ ಗಂಭೀರ ಗಾಯಗಳಾಗಿತ್ತು.