Asianet Suvarna News Asianet Suvarna News

ನಿಜಕ್ಕೂ ಈ ಹಾಟ್​ ಬ್ಯೂಟಿ ಅದೇ ಜಾಹೀರಾತಿನ ಬಾಲಕಿನಾ? ಊಹಿಸಲು ಸಾಧ್ಯವೇ ಇಲ್ಲ ನೋಡಿ..!

ಈ ಚಿತ್ರದಲ್ಲಿ ಕಾಣಿಸ್ತಿರೋ ಮಾದಕ ಚೆಲುವೆ ಯಾರೆಂದು ಗುರುತಿಸಬಲ್ಲಿರಾ? ಜಾಹೀರಾತುಗಳ ಮೂಲಕ ಮೋಡಿ ಮಾಡಿದ ಬಾಲಕಿ ಈಕೆ...
 

Can you identify the sexy beauty in this picture she is Avaneet Kaur of handwash advt suc
Author
First Published May 2, 2024, 9:28 PM IST

ಈ ಚಿತ್ರದಲ್ಲಿ ಕಾಣಿಸ್ತಿರೋ ಮಾದಕ ನಟಿ ಹೆಸರು ಅವನೀತ್​ ಕೌರ್​. ವಯಸ್ಸು 22. ಕೆಲ ವರ್ಷಗಳ ಹಿಂದೆ ಇದೇ ನಟಿ ಜಾಹೀರಾತು ಒಂದರಲ್ಲಿ ಬಾಲಕಿಯಾಗಿ ಕಾಣಿಸಿಕೊಂಡಿದ್ದಳು. ಎಲ್ಲರ ಬಾಯಲ್ಲೂ ಆ ಜಾಹೀರಾತು ನಲಿದಾಡುತ್ತಿತ್ತು. ಈಗಲೂ ಆ ಡೈಲಾಗ್​ ಹೇಳುವವರು ಇದ್ದಾರೆ. ಅಷ್ಟಕ್ಕೂ ಆ ಜಾಹೀರಾತು ಯಾವುದು ಎಂದು ಊಹಿಸಬಲ್ಲಿರಾ? ಅದೇ ಲೈಫ್‌ ಬಾಯ್ ಹ್ಯಾಂಡ್‌ವಾಷ್​. ಬಹುಶಃ ಹೀಗೆ ಹೇಳಿದ್ರೆ ಅರ್ಥವಾಗಲಿಕ್ಕಿಲ್ಲ. ಆದ್ರೆ ಅರೆ ಬಂಟಿ ನಿನ್ನ ಸೋಪ್​ ಸ್ಲೋನಾ ಅಂತ ಡೈಲಾಗ್​ ಕೇಳಿದ್ರೆ  ಥಟ್​ ಅಂತ ಆ ಬಾಲಕಿ ನೆನಪಾಗುತ್ತಾಳೆ. ಕೆಲವೇ ವರ್ಷಗಳ ಹಿಂದೆ ಮಾಡಿದ್ದ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡು ಇದೀಗ ಹಾಟ್​ ಬ್ಯೂಟಿಯಾಗಿ ಮಿಂಚಿದ್ದಾರೆ ಅವನೀತ್​ ಕೌರ್​. ರಿಯಾಲಿಟಿ ಷೋನಿಂದ ಮನೊರಂಜನಾ ಕ್ಷೇತ್ರಕ್ಕೆ ಬಂದಿರೋ ಈಕೆ,  ಸಿನಿಮಾ ನಟಿಯಾಗಿಯೂ ಮಿಂಚುತ್ತಿದ್ದಾರೆ.

2012 ರಲ್ಲಿ ರಿಯಾಲಿಟಿ ಷೋ ಸ್ಪರ್ಧಿಯಾಗಿ ಪಾಲ್ಗೊಂಡಿದ್ದ ಅವನೀತ್​,  ಆ ಬಳಿಕ ಹಲವು ರಿಯಾಲಿಟಿ ಷೋ, ಟಿವಿ ಧಾರಾವಾಹಿಗಳಲ್ಲಿ ನಟಿಸಿದರು.  ಅಲ್ಲಿಂದ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟರೂ ಹೇಳಿಕೊಳ್ಳುವಂಥ ಅವಕಾಶಗಳು ಸಿಕ್ಕಿಲ್ಲ. ಸಿನಿಮಾಗಳಲ್ಲಿ ಬಹಳ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿರುವ ಇವರು, ದೊಡ್ಡ ಬ್ರೇಕ್​ಗಾಗಿ ಕಾಯುತ್ತಿದ್ದಾರೆ. ಕಿರುತೆರೆಯಲ್ಲಿ  ಬಾಲ ನಟಿಯಾಗಿ ಹಲವು ಜಾಹೀರಾತುಗಳಲ್ಲಿ ಬಣ್ಣ ಹಚ್ಚಿ ಜನಪ್ರಿಯರಾದರೂ ಸದ್ಯ  ಐಟಂ ಹಾಡುಗಳಿಗೆ ತೃಪ್ತಿ ಪಟ್ಟಿಕೊಳ್ಳುತ್ತಿದ್ದಾರೆ. ನಟಿ ಅವನೀತ್‌ ಕೌರ್ ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ಸಖತ್ ಹಾಟ್ ಲುಕ್ ಕೊಟ್ಟಿರುವ ತನ್ನ ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ.  

ಧರ್ಮೇಂದ್ರ- ಹೇಮಾ ದಾಂಪತ್ಯಕ್ಕೆ 44 ವರ್ಷ: ಮದ್ವೆಗಾಗಿ ದಿಲಾವರ್ ಖಾನ್- ಆಯೇಷಾಬೀ ಆಗಿದ್ದ ರೋಚಕ ಕಥೆ ಇಲ್ಲಿದೆ...

ಈ ನಟಿ ಬಾಲಿವುಡ್‌ನ 'ಮರ್ದಾನಿ'  ಚಿತ್ರದಲ್ಲಿ ಮೀರಾ ಅನ್ನುವ ಪಾತ್ರದಲ್ಲಿ ಅಭಿನಯಿಸಿದ್ದಾರೆ.  'ಟಿಕು ವೆಡ್ಸ್ ಶೇರು', 'ಖರೀಬ್ ಖರೀಬ್ ಸಿಂಗಲೇ' ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ವೆಬ್‌ ಸೀರಿಯಸ್ ಹಾಗೂ ಮ್ಯೂಸಿಕ್ ವಿಡಿಯೋ ಮಾಡಿದ್ದಾರೆ. ಇನ್ನು ನಟಿಯ ಕೌಟುಂಬಿಕ ಹಿನ್ನೆಲೆ ಕುರಿತು ಹೇಳುವುದಾರೆ, ಸಿಖ್‌ ಕುಟುಂಬದ ಸೋನಿಯಾ ನಂದ್ರಾ, ಅಮನ್‌ದೀಪ್‌ ಸಿಂಗ್‌ ನಂದ್ರಾ ದಂಪತಿಯ ಮಗಳು ಈಕೆ. 2010 ರಿಂದಲೇ ಜಾಹೀರಾತು ಲೋಕದಲ್ಲಿ ಮಿಂಚಲು ಶುರು ಮಾಡಿದ್ದರು. ಆಗ ಇವರಿಗಿನ್ನೂ ಹತ್ತು ವರ್ಷ ವಯಸ್ಸಾಗಿತ್ತು. ಆಗಲೇ ಮಾಡೆಲಿಂಗ್, ಸಿನಿಮಾ, ಕಿರುತೆರೆಯಲ್ಲೂ ಗುರುತಿಸಿಕೊಂಡರು. ಮ್ಯೂಸಿಕ್ ವಿಡಿಯೋ ಮೂಲಕವೂ ಸದ್ದು ಮಾಡಿದ್ದ ಅವನೀತ್​, ಬಂದಿಷ್‌ ಬಂಡಿತ್‌ ವೆಬ್‌ ಸಿರೀಸ್‌ನಲ್ಲೂ ನಟಿಸಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಸದಾ ಹಾಟ್​ ಫೋಟೋಶೂಟ್​ ಮಾಡಿಸಿಕೊಳ್ಳುತ್ತಾರೆ. ಇವರ  ಇನ್‌ಸ್ಟಾಗ್ರಾಂನಲ್ಲಿ  3 ಕೋಟಿ 20 ಲಕ್ಷ  ಫಾಲೋವರ್ಸ್‌ ಇದ್ದಾರೆ.  

ಅವ್ನ ಜೊತೆ ಮದ್ವೆಯಾಯ್ತು, ನಾಲ್ಕು ಸಲ ಗರ್ಭಪಾತವಾಗಿ ಸತ್ತೇ ಹೋಗಿದ್ದೆ... ನಟಿ ಭಾವನಾ ಶಾಕಿಂಗ್‌ ಹೇಳಿಕೆ

Can you identify the sexy beauty in this picture she is Avaneet Kaur of handwash advt suc

 
 
 
 
 
 
 
 
 
 
 
 
 
 
 

A post shared by Avneet Kaur (@avneetkaur_13)

Latest Videos
Follow Us:
Download App:
  • android
  • ios