ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವ| ಮಹಾರಾಷ್ಟ್ರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ| ಟ್ವಿಟ್ಟರ್ ಅಕೌಂಟ್’ನಿಂದ ಬಿಜೆಪಿ ಹೆಸರು ತೆಗೆದು ಹಾಕಿದ ಪಂಕಜಾ ಮುಂಡೆ| ರಾಜಕೀಯದಲ್ಲಿ ಬದಲಾವಣೆ ಸಹಜ ಎಂದ ಮಾಜಿ ಸಚಿವೆ| ರಾಜಕೀಯ ನಿಂತ ನೀರಲ್ಲ ಎಂದು ಫೇಸ್’ಬುಕ್ ಪೋಸ್ಟ್ ಮಾಡಿದ ಪಂಕಜಾ| ಬಿಜೆಪಿ ಬಿಡುವ ನಿರ್ಧಾರ ಕೈಗೊಂಡರಾ ಪಂಕಜಾ ಮುಂಡೆ?|
ಮುಂಬೈ(ಡಿ.02): ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೇ, ರಾಜ್ಯದಲ್ಲಿ ತೀವ್ರತರವಾದ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಬಿಜೆಪಿ ನಾಯಕಿ ಹಾಗೂ ದಿವಂಗತ ಗೋಪಿನಾಥ್ ಮುಂಡೆ ಪುತ್ರಿ ಪಂಕಜಾ ಮುಂಡೆ, ತಮ್ಮ ಟ್ವಿಟ್ಟರ್ ಅಕೌಂಟ್’ನಿಂದ ಬಿಜೆಪಿ ಹೆಸರನ್ನು ತೆಗೆದು ಹಾಕಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
‘ಮಹಾ’ದಲ್ಲಿ ಉದ್ಧವ್ ದರ್ಬಾರ್: ಅಸ್ತಿತ್ವಕ್ಕೆ ಬಂತು ಅಘಾಡಿ ಸರ್ಕಾರ್!
ಇದಕ್ಕೂ ಮೊದಲು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಮಾಜಿ ಸಚಿವೆ, ರಾಜಕೀಯದಲ್ಲಿ ಬದಲಾವಣೆ ಸಹಜ ಎಂದು ಮಾರ್ಮಿಕವಾಗಿ ಹೇಳಿದ್ದರು.
ನನಗೆ ಯೋಚನೆ ಮಾಡಲು ಸಮಯ ಬೇಕು, ನನ್ನ ನಿರ್ಧಾರವನ್ನು ಬರುವ ಡಿಸೆಂಬರ್ 12ರಂದು ಪ್ರಕಟಿಸುವುದಾಗಿ ಪಂಕಜಾ ಸ್ಪಷ್ಟಪಡಿಸಿದ್ದಾರೆ.
'ಮಹಾ' ರಿಸಲ್ಟ್: ಸಂಬಂಧಿ ಎದುರೇ ಮಂಡಿಯೂರಿದ ಬಿಜೆಪಿಯ ಪಂಕಜ್ ಮುಂಡೆ..!
ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಂಕಜಾ ಸೋಲುಂಡಿದ್ದರು. ಅಲ್ಲದೇ ವಿಕಾಸ್ ಅಘಾಡಿ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲು ಬಿಜೆಪಿ ಸಭೆಗಳಲ್ಲಿ ಭಾಗವಹಿಸಿದ್ದರು.
ಇದೀಗ ಏಕಾಏಕಿ ತಮ್ಮ ಅಕೌಂಟ್’ನಿಂದ ಬಿಜೆಪಿ ಹೆಸರು ತೆಗೆದು ಹಾಕಿರುವ ಪಂಕಜಾ, ಪಕ್ಷ ಬಿಡುವ ನಿರ್ಧಾರ ಮಾಡಿದ್ದಾರೆ ಎಂಬ ಮಾತುಗಳು ಕೆಳಿ ಬರುತ್ತಿವೆ.
