Asianet Suvarna News Asianet Suvarna News

'ಮಹಾ' ರಿಸಲ್ಟ್: ಸಂಬಂಧಿ ಎದುರೇ ಮಂಡಿಯೂರಿದ ಬಿಜೆಪಿಯ ಪಂಕಜ್ ಮುಂಡೆ..!

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ರಿಸಲ್ಟ್ ಬಹುತೇಕ ಕ್ಲಿಯರ್ ಆಗಿದೆ. ಆದ್ರೆ,  ಬಿಜೆಪಿ ನಾಯಕಿ ಹಾಗೂ ಸಿಎಂ ದೇವೇಂದ್ರ ಫಡ್ನಾವೀಸ್​ ನೇತೃತ್ವದ  ಸರ್ಕಾರದಲ್ಲಿ ಸಚಿವರಾಗಿದ್ದ ಪಂಕಜ ಮುಂಡೆ ಅವರು ಸಹೋದರ ಸಂಬಂಧಿ ವಿರುದ್ಧ ಮಂಡಿಯೂರಿದ್ದಾರೆ.

Maharashtra elections 2019: Pankaja Munde concedes defeat to cousin in Parli
Author
Bengaluru, First Published Oct 24, 2019, 6:26 PM IST

ಮುಂಬೈ, [ಅ.24]: ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ರಿಸಲ್ಟ್  ಹೊರಬಿದ್ದಿದ್ದು, ಮಹಾರಾಷ್ಟ್ರದಲ್ಲಿ ನಿರೀಕ್ಷೆಯಂತೆ ಶಿವಸೇನೆ ಜತೆ ಸೇರಿಕೊಂಡು ದೊಡ್ಡ ಪಕ್ಷವಾಗಿ ಹೊರಮ್ಮಿದೆ. ಆದ್ರೆ, ಮೈತ್ರಿ ಮಾಡಿಕೊಂಡಿದ್ದ ಶಿವಸೇನಾ ಹಾಗೂ ಬಿಜೆಪಿ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.

ಮತ್ತೊಂದೆಡೆ ಬಿಜೆಪಿ ನಾಯಕಿ ಹಾಗೂ ಸಿಎಂ ದೇವೇಂದ್ರ ಫಡ್ನಾವೀಸ್​ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಚಿವರಾಗಿದ್ದ ಪಂಕಜ ಮುಂಡೆ ಅವರು ಸೋಲುಕಂಡಿದ್ದಾರೆ. 

ಶಿವಸೇನೆ'ಮಹಾ'ಬೇಡಿಕೆ: ಸಾಧ್ಯನಾ ಆದಿತ್ಯ ಠಾಕ್ರೆ ಸಿಎಂ ಆಗೋಕೆ?

ಇಂದು [ಗುರುವಾರ] ಹೊರಬಿದ್ದ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಪಂಕಜ್​ ಮುಂಡೆ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ವಿಪರ್ಯಾಸವೆಂದರೆ, ಪರ್ಲಿ ಕ್ಷೇತ್ರದಿಂದ ಎನ್​ಸಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸೋದರ ಸಂಬಂಧಿ ಧನಂಜಯ್​ ಮುಂಡೆ ಎದುರು ಬರೋಬ್ಬರಿ 30,000 ಮತಗಳ ಅಂತರದಿಂದ ಪಂಕಜ್​ ಮುಂಡೆ ಮಂಡಿಯೂರಿದ್ದಾರೆ. ಈ ಸೋಲನ್ನು ಸಹಿಸಿಕೊಳ್ಳಲಾಗದೇ ಪಂಕಜ್​ ಮುಂಡೆ  ಅವರು ಬಿಕ್ಕಿ ಬಿಕ್ಕಿ ಅತ್ತರ.

ಚುನಾವಣೆಯಲ್ಲಿ BJP ಮಂದಹಾಸ; ಬಾಂಗ್ಲಾ ಸರಣಿಗೆ ತಂಡ ಪ್ರಕಟ; ಅ.24ರ ಟಾಪ್ 10 ಸುದ್ದಿ!

ಸೋಲಿನ ಬಗ್ಗೆ ಪ್ರಿತಿಕ್ರಿಯಿಸಿದ ಪಂಕಜ​ ಮುಂಡೆ, ನನ್ನ ಅವಧಿಯಲ್ಲಿ ಕ್ಷೇತ್ರಕ್ಕಾಗಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ನನ್ನ ಸೋಲಿಗೆ ನಾನೇ ಹೊಣೆಯಾಗಿದ್ದು, ನನ್ನ ಕ್ಷೇತ್ರ ಹಾಗೂ ಜನರಿಗಾಗಿ ನನ್ನ ಹೋರಾಟ ಹೀಗೆ ಮುಂದುವರಿಯಲಿದೆ ಎಂದು ಹೇಳಿದರು.

ಬಿಎಸ್‌ವೈ ನೀರು ಕೊಡ್ತಿನಿ ಎಂದಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು! 

ಇನ್ನು ಮಹಾರಾಷ್ಟ್ರದ  ಸದ್ಯ ಫಲಿತಾಂಶದ ನೋಡುವುದಾದರೇ 288 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 103 ಹಾಗೂ ಶಿವಸೇನಾ 56 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್​ 46, ಎನ್​ಸಿಪಿ 54 ಹಾಗೂ ಇತರೆ 30 ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಬಹುತೇಕ ಶಿವಸೇನೆ ಹಾಗೂ ಬಿಜೆಪಿ ಸೇರಿಕೊಮಡು ಸರ್ಕಾರ ರಚನೆ ಮಾಡುವುದು ಖಚಿತವಾಗಿದೆ. ಈ ಬಗ್ಗೆ ಇನ್ನೇನು ಕೆಲವೇ ನಿಮಿಷಗಳಲ್ಲಿ ರಿಸಲ್ಟ್ ಕ್ಲಿಯರ್ ಆಗಿ ತಿಳಿಯಲಿದೆ.

Follow Us:
Download App:
  • android
  • ios