ಉಗ್ರಪೋಷಕ ಪಾಕಿಸ್ತಾನದಲ್ಲಿ ಸಾಲದ ಬೆಟ್ಟ ಸಾರ್ವಕಾಲಿಕ ದಾಖಲೆಗೆ ಏರಿದೆ. ದೇಶದಲ್ಲಿ ಒಟ್ಟು ಸಾಲದ ಮೊತ್ತವು 76 ಲಕ್ಷ ಕೋಟಿ ಪಾಕ್‌ ರು.ಗೆ

ಇಸ್ಲಾಮಾಬಾದ್‌: ಉಗ್ರಪೋಷಕ ಪಾಕಿಸ್ತಾನದಲ್ಲಿ ಸಾಲದ ಬೆಟ್ಟ ಸಾರ್ವಕಾಲಿಕ ದಾಖಲೆಗೆ ಏರಿದೆ. ದೇಶದಲ್ಲಿ ಒಟ್ಟು ಸಾಲದ ಮೊತ್ತವು 76 ಲಕ್ಷ ಕೋಟಿ ಪಾಕ್‌ ರು.ಗೆ (23 ಲಕ್ಷ ಭಾರತೀಯರು.) (2.6 ಲಕ್ಷ ಅಮೆರಿಕನ್‌ ಡಾಲರ್‌) ತಲುಪಿದ್ದು, ಪಾಕಿಸ್ತಾನದ ಅರ್ಥ ವ್ಯವಸ್ಥೆ ಮೇಲೆ ತೂಗುಗತ್ತಿತಾಗಿ ನೇತಾಡುತ್ತಿದೆ ಎಂದು ವರದಿ ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲಿನ ಆರ್ಥಿಕ ಸಮೀಕ್ಷೆ ಬಿಡುಗಡೆಯಾಗಿದ್ದು, ಮಾರ್ಚ್‌ 2025ರ ವೇಳೆಗೆ 76 ಲಕ್ಷ ಕೋಟಿ ರು. ಸಾಲಿದೆ ಎಂದು ಅಂಕಿ ಅಂಶ ತಿಳಿಸಿದೆ. ಕಳೆದ 10 ವರ್ಷದಲ್ಲಿ ಈ ಮೊತ್ತವು 5 ಪಟ್ಟು ಹೆಚ್ಚಳವಾಗಿದ್ದು, ಜನರ ಮೇಲೆ ಸಾಲದ ಹೊರೆ ಹೆಚ್ಚಾಗಿದೆ ಎಂದು ಅದು ಹೇಳಿದೆ.

ಪಾಕಿಸ್ತಾನದ ಸಾಲವು 10 ವರ್ಷಗಳ ಹಿಂದೆ 17 ಲಕ್ಷ ಕೋಟಿ ರು., 2020-21ರಲ್ಲಿ 39 ಲಕ್ಷ ಕೋಟಿ ರು.ಗೆ ಹೆಚ್ಚಳವಾಗಿತ್ತು. ನಾಲ್ಕು ವರ್ಷದಲ್ಲಿ ಈ ಮೊತ್ತವು ದುಪಟ್ಟು ಹೆಚ್ಚಳವಾಗಿದೆ.