ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಬಡ್ಡಿದರವನ್ನು ಶೇ.0.50ರಷ್ಟು ಕಡಿತಗೊಳಿಸಿದರ ಪರಿಣಾಮ ಸೆನ್ಸೆಕ್ಸ್‌ ಮತ್ತು ನಿಫ್ಟಿ ಗೆಲುವಿನ ಏಣಿ ಏರಿತು.

ಮುಂಬೈ (ಜೂ.7): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಶುಕ್ರವಾರ ಒಂದೇ ಏಟಿಗೆ 'ಡಬಲ್ ಧಮಾಕಾ' ನೀಡಿದೆ. ಮೊದಲನೆಯದಾಗಿ, ಅದು ಬಡ್ಡಿದರಗಳನ್ನು ನಿರೀಕ್ಷೆಗೂ ಮೀರಿ 5 ವರ್ಷ ದಲ್ಲೇ ಮೊದಲ ಸಲ, ಭಾರಿ ಎನ್ನಬಹುದಾದ ಶೇ.0.50 5 ರಷ್ಟು ಕಡಿತಗೊಳಿಸಿದೆ. ಈ ಮೂಲಕ ಮತ್ತೊಂದು ಸುತ್ತಿನ ಬ್ಯಾಂಕ್ ಬಡ್ಡಿದರ ಕಡಿತಕ್ಕೆ ನಾಂದಿ ಹಾಡಿದ್ದು, ಠೇವಣಿಯ ಬಡ್ಡಿದರ ಸಾಲದ ಹಾಗೂ ಗಮನಾರ್ಹವಾಗಿ ಇಳಿಯಲಿದೆ. ಈ ರೀತಿ ಆರ್‌ಬಿಐ ಬಡ್ಡಿದರ ಕಡಿತ ಮಾಡುತ್ತಿರುವುದು ಇದು 3ನೇ ಸಲ.

ಎರಡನೆಯದಾಗಿ, ಬ್ಯಾಂಕ್‌ ಗಳು ಆರ್‌ಬಿಐನಲ್ಲಿ ಇಡುವ ಠೇವಣಿಯಾದ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್) ಅನ್ನು 2020ರ ಬಳಿಕ ಮೊದಲ ಬಾರಿ ಶೇ.1ರಷ್ಟು ಕಡಿಮೆ ಮಾಡಿದೆ. ಇದರಿಂದ ಬ್ಯಾಂಕ್‌ಗಳಿಗೆ 2.5 ಲಕ್ಷ ಕೋಟಿ ಹೆಚ್ಚುವರಿ ಹಣ ಲಭ್ಯವಾಗಲಿದೆ. ಇದು ಬ್ಯಾಂಕ್‌ಗಳಿಗೆ ಹೆಚ್ಚಿನ ಸಾಲದ ನೆರವು ನೀಡಲು ಹಾಗೂ ಹಣಕಾಸು ನೆರವು ನೀಡಲು ಸಹಕಾರಿಯಾಗಲಿದೆ.

ಗವರ್ನರ್‌ ಸಂಜಯ್‌ ಮಲ್ಹೋತ್ರಾ ಅಧ್ಯಕ್ಷತೆಯಲ್ಲಿನಡೆದ 2ನೇ ದ್ವೈಮಾಸಿಕ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. 'ಆದರೆ ಮುಂದೆ ಬಡ್ಡಿದರ ಕಡಿತ ಸಾಧ್ಯತೆ ಸಾಧ್ಯತೆ ತುಂಬಾ ಕ್ಷೀಣವಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.

ಬಡ್ಡಿದರ ಭಾರಿ ಕಡಿತ: ಕಳೆದ 2 ತ್ರೈಮಾಸಿಕದಲ್ಲಿ ತಲಾ ಶೇ.0.25ರಷ್ಟು ಬಡ್ಡಿದರ ಕಡಿತಗೊಳಿಸಿದ ಆರ್‌ಬಿಐ, ಈ ಸಲ ಶೇ.0.5ರಷ್ಟು ಕಡಿತಗೊಳಿಸಿದೆ. ಇದರೊಂದಿಗೆ ರೆಪೊ ದರ (ಆರ್‌ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿದರ) ಈಗ ಶೇ. 6ರಿಂದ ಶೇ.5.50ಕ್ಕೆ ಇಳಿದಿದೆ. ಇದು 3 ವರ್ಷದ ಕನಿಷ್ಠವಾಗಿದೆ. 2022ರ ಕೋವಿಡ್‌ ಸಾಂಕ್ರಾಮಿಕದ ನಂತರ ಬಡ್ಡಿದರ ಶೇ.4ರಿಂದ ಕ್ರಮೇಣ ಶೇ.6.5ಕ್ಕೆ ಏರಿಕೆ ಆಗಿತ್ತು. 2020ರ ಮಾರ್ಚ್‌ನಲ್ಲಿ ಶೇ.0.75ರಷ್ಟು ಬಡ್ಡಿದರ ಕಡಿತವಾಗಿತ್ತು. ಇದಾದ ನಂತರ ಇಷ್ಟೊಂದು ಪ್ರಮಾಣದಲ್ಲಿ (ಶೇ.0.5) ಇಳಿದಿದ್ದು ಇದೇ ಮೊದಲು

ಎಫ್‌ಡಿ ಮೇಲಿನ ಬ್ಯಾಂಕ್ ಬಡ್ಡಿಯೂ ಕಡಿತ: ಶೇ.0.5ರಷ್ಟು ರೆಪೋ ದರ ಕಡಿತದ ಕಾರಣ ಸಾಲದ ಇಎಂಐ ಭಾರಿ ಇಳಿಕೆ ಆಗುವ ನಿರೀಕ್ಷೆ ಇದೆ. ಇದರ ಜತೆಗೆ ಬ್ಯಾಂಕ್ ನಿಶ್ಚಿತ ಹಾಗೂ ಇತರ ಠೇವಣಿಗಳ ಬಡ್ಡಿಯೂ ಇಳಿಯಲಿದೆ. ಸಾಲದ ಬಡ್ಡಿ ದರ ಇಳಿಕೆ ಗಮ ನಿಸಿದಾಗ, 30 ವರ್ಷಗಳ ಅವಧಿಗೆ 8.7% ಬಡ್ಡಿದರದಲ್ಲಿ 50 ಲಕ್ಷ ರು.ಗಳ ಗೃಹ ಸಾಲ ಪಡೆದಿದ್ದರೆ, ಪ್ರಸ್ತುತ ಇಎಂಐ 39,136 ರು. ಇರುತ್ತದೆ. ಆದರೆ ಶೇ.0.5ರಷ್ಟು ಬಡ್ಡಿದರ ಕಡಿತದಿಂದ ಶೇ.8.2ಕ್ಕೆ ಬಡ್ಡಿದರ ಇಳಿದು ಹೊಸ ಇಎಂಐ 37,346 ರು.ಗೆ ಇಳಿಯಲಿದೆ. ಮಾಸಿಕ 1,790 ರು. ಹಾಗೂ ವಾರ್ಷಿಕ 21,480 ರು. ಉಳಿತಾಯವಾಗಲಿದೆ. ಆರ್‌ಬಿಐ ಘೋಷಣೆ ಬೆನ್ನಲ್ಲೇ ಬ್ಯಾಂಕ್‌ಗಳು ಬಡ್ಡಿದರ ಇಳಿಕೆ ಆರಂಭಿಸಿದ್ದು, ಶುಕ್ರ ವಾರ ಪಿಎನ್‌ಬಿ ಶೇ.0.5ರಷ್ಟು ಬಡ್ಡಿ ದರ ಇಳಿಕೆ ಮಾಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತನೀತಿಯ ಪ್ರಮುಖಾಂಶ

  1. ರೆಪೋ ದರ (ಬಡ್ಡಿದರ) ಶೇ.0.50ರಷ್ಟು ಇಳಿಕೆ ಇದರಿಂದ ಬಡ್ಡಿದರವು ಶೇ.5.5ಕ್ಕೆ ಕುಸಿತ.
  2. ಡಿಸೆಂಬರ್‌ವೇಳೆಗೆ ಬ್ಯಾಂಕ್ ನಿಧಿಗೆ 2.5 ಲಕ್ಷ ಕೋಟಿ ರು. ಬಿಡುಗಡೆ ಮಾಡುವ ಗುರಿಯೊಂದಿಗೆ ಸಿಆರ್‌ಆರ್‌ಶೇ.1ರಷ್ಟು ಕಡಿತ
  3. ಹಣಕಾಸು ವರ್ಷ 2026ರಲ್ಲಿ ಚಿಲ್ಲರೆ ಹಣದುಬ್ಬರ ಶೇ.0.3ರಷ್ಟು ಇಳಿಕೆ-ಶೇ.3.7 ಇರುವ ಅಂದಾಜು
  4. ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಪ್ರಗತಿ ಶೇ.6.5ರಲ್ಲಿಯೇ ಇರಲಿದೆ