ಪಹಲ್ಗಾಮ್‌ನಲ್ಲಿ ಪಾಕ್‌ ಪ್ರೇರಿತ ಉಗ್ರರ ದಾಳಿಯಲ್ಲಿ 26 ಮಂದಿ ಬಲಿ. ಭಾರತ ಪಾಕ್‌ ಪ್ರಜೆಗಳ ವೀಸಾ ರದ್ದುಪಡಿಸಿ ಪ್ರತೀಕಾರ. ಪಾಕಿಸ್ತಾನ ಭಾರತದ ಸೇನಾ ಕ್ರಮದ ಭೀತಿಯಲ್ಲಿದೆ. ಭಾರತದ ಆರೋಪಕ್ಕೆ ಪುರಾವೆ ಕೇಳಿದೆ. ಭಾರತ ಪಾಕ್‌ನಲ್ಲಿರುವ ತನ್ನ ಪ್ರಜೆಗಳಿಗೆ ವಾಪಸಾಗಲು ಸೂಚಿಸಿದೆ. ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ.


ನವದೆಹಲಿ (ಏ.24): ಪಹಲ್ಗಾಮ್‌ನಲ್ಲಿ ಪಾಕ್‌ ಪ್ರೇರಿತ ಉಗ್ರಗಾಮಿಗಳು ಸ್ಥಳೀಯರ ಸಹಾಯದಿಂದ ಹಿಂದೂ ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 26 ಮಂದಿ ದಾರುಣವಾಗಿ ಬಲಿಯಾಗಿದ್ದಾರೆ. ಈ ಘಟನೆಯಿಂದ ಆಕ್ರೋಶಕ್ಕೆ ಈಡಾಗಿರುವ ಭಾರತ ಈಗಾಗಲೇ ರಾಜತಾಂತ್ರಿಕ ಮಟ್ಟದಲ್ಲಿ ದೊಡ್ಡ ಕ್ರಮಗಳನ್ನು ಕೈಗೊಂಡಿದೆ. ಪಾಕಿಸ್ತಾನದ ಪ್ರಜೆಗಳಿಗೆ ನೀಡಿದ್ದ ಎಲ್ಲಾ ರೀತಿಯ ವೀಸಾವನ್ನು ಭಾರತ ರದ್ದು ಮಾಡಿದೆ.

ಇನ್ನೊಂದೆಡೆ ಪಾಕಿಸ್ತಾನ ಕೂಡ ಭಾರತದ ವಿರುದ್ಧ ಇಂಥದ್ದೇ ಪ್ರತೀಕಾರದ ಕ್ರಮಗಳನ್ನು ಕೈಗೊಂಡಿದೆ. ಆದರೆ, ಭಾರತದ ಯಾವುದೇ ಅಧಿಕಾರಿಗಳಾಗಲಿ, ಸ್ವತಃ ಪ್ರಧಾನಿ ಮೋದಿಯಾಗಲಿ ಸೇನೆಯನ್ನು ಬಳಕೆ ಮಾಡುವ ಬಗ್ಗೆ ಮಾತನಾಡಿಲ್ಲ. ಆದರೆ, ಪಾಕಿಸ್ತಾನಕ್ಕೆ ಮಾತ್ರ ಭಾರತ ಈ ಬಾರಿ ಸೇನೆಯನ್ನು ಬಳಕೆ ಮಾಡಿ ಕ್ರಮಕ್ಕೆ ಮುಂದಾಗುವುದು ನಿಶ್ಚಿತ ಎನ್ನುವ ಭಯ ಶುರುವಾಗಿದೆ.

ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ಕತಾರ್‌ ಸರ್ಕಾರದ ಮಾಲೀಕತ್ವದಲ್ಲಿರುವ ಹಾಗೂ ಯುದ್ಧಪೀಡಿತ ಪ್ರದೇಶಗಳಲ್ಲಿ ಹೆಚ್ಚಾಗಿ ವರದಿ ಮಾಡುವ ಅಲ್‌ಜಜೀರಾ ವೆಬ್‌ಸೈಟ್‌ಗೆ ಹೇಳಿಕೆ ನೀಡಿದ್ದು, ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರತ ಸೇನೆಯನ್ನು ಬಳಸುವುದು ಬಹುತೇಕ ನಿಶ್ಚಿತ ಎಂದಿದ್ದಾರೆ.

ಭಾರತದ ಸರ್ಕಾರಿ ಅಧಿಕಾರಿಗಳು ಘಟನೆಯ ಬಗ್ಗೆ ವಿಪರೀತ ಎನ್ನುವಂತೆ ಮಾತನಾಡುತ್ತಿದ್ದು, ಭಾರತದ ಮಿಲಿಟರಿ ಕ್ರಮ ಈಗ ಸಾಧ್ಯವಿದೆ ಎಂದು ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಪಾಕಿಸ್ತಾನ ಮಾತ್ರ ಭಾರತದ ಯಾವುದೇ ದುಸ್ಸಾಹಸಕ್ಕೆ ಪಾಠ ಕಲಿಸಲು ಸಿದ್ಧವಾಗಿದೆ ಎಂದಿದ್ದಾರೆ.

"ನಾವು ಹೆಚ್ಚಿನ ಮಟ್ಟದ ಜಾಗರೂಕತೆ ಮತ್ತು ಸುರಕ್ಷತೆಯನ್ನು ಕಾಯ್ದುಕೊಳ್ಳುತ್ತಿದ್ದೇವೆ, ಆದರೆ ಭಾರತದಂತೆ, ನಮ್ಮ ಸನ್ನದ್ಧತೆಯ ಬಗ್ಗೆ ಮಾತನಾಡುವ ಮೂಲಕ ಯಾವುದೇ ಅನಗತ್ಯ ಪ್ರಚಾರವನ್ನು ಸೃಷ್ಟಿಸಲು ನಾವು ಬಯಸುವುದಿಲ್ಲ" ಎಂದು ಭದ್ರತಾ ಮೂಲವೊಂದು ಅಲ್ ಜಜೀರಾಗೆ ತಿಳಿಸಿದೆ.

"ಭಾರತ ಯಾವುದೇ ರೀತಿಯ ದಾಳಿಗೆ ಅವಕಾಶವಿಲ್ಲ ಎಂದು ಭಾವಿಸಿದರೆ ಅದು ತಪ್ಪು. ಆದರೂ, ನಾವಿಬ್ಬರೂ ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು, ಮತ್ತು ಭಾರತದ ಆಕ್ರಮಣವು ಬೇಜವಾಬ್ದಾರಿಯುತ ಪರಿಸ್ಥಿತಿಗೆ ಕಾರಣವಾಗಬಹುದು. ನಾವಿಬ್ಬರೂ ಎಚ್ಚರಿಕೆಯಿಂದ ವರ್ತಿಸಬೇಕು" ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಕೈವಾಡವಿದೆ ಎಂಬ ಭಾರತದ ಆರೋಪವನ್ನು ಅಧಿಕಾರಿ ಪ್ರಶ್ನೆ ಮಾಡಿದ್ದಾರೆ. ಈ ದಾಳಿಯು ಎರಡೂ ದೇಶಗಳ ನಡುವಿನ ವಾಸ್ತವಿಕ ಗಡಿಯಾದ ನಿಯಂತ್ರಣ ರೇಖೆಯಿಂದ ಸುಮಾರು 200 ಕಿಮೀ (125 ಮೈಲುಗಳು) ದೂರದಲ್ಲಿ ನಡೆದಿದ್ದು, ಕಾಶ್ಮೀರ ಕಣಿವೆಯಲ್ಲಿ 500,000 ಕ್ಕೂ ಹೆಚ್ಚು ಭಾರತೀಯ ಭದ್ರತಾ ಸಿಬ್ಬಂದಿ ಇರುವಿಕೆಯನ್ನು ಎತ್ತಿ ತೋರಿಸಿದ್ದಾರೆ.

ದಾಖಲೆ ಕೊಡಿ ಎಂದ ಪಾಕಿಸ್ತಾನ: ಕಾಶ್ಮೀರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡದ ಬಗ್ಗೆ ಭಾರತ ತನ್ನ ಹೇಳಿಕೆಗಳನ್ನು ಪುರಾವೆಗಳನ್ನು ನೀಡುವ ಮೂಲಕ ಬೆಂಬಲಿಸಬೇಕೆಂದು ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವರು ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಶಾಕ್ ದಾರ್, "ಭಾರತ ಪದೇ ಪದೇ ಆರೋಪ ಹೊರಿಸುತ್ತಲೇ ಬಂದಿದೆ ಮತ್ತು ಪಾಕಿಸ್ತಾನದ ಕೈವಾಡದ ಪುರಾವೆಗಳಿದ್ದರೆ, ದಯವಿಟ್ಟು ಅದನ್ನು ನಮ್ಮೊಂದಿಗೆ ಮತ್ತು ಪ್ರಪಂಚದೊಂದಿಗೆ ಹಂಚಿಕೊಳ್ಳಿ" ಎಂದು ಹೇಳಿದ್ದಾರೆ.

ಪಹಲ್ಗಾಮ್‌ ಬಗ್ಗೆ 'ಮಾನವೀಯತೆಯೇ ಮೊದಲ ಧರ್ಮ' ಎಂದ ಪ್ರಿಯಾಂಕ್‌ ಖರ್ಗೆ, ನಿಮಗಿಂತ ಓವೈಸಿಯೇ ಬೆಸ್ಟ್‌!

ಭಾರತಕ್ಕೆ ಆದಷ್ಟು ಬೇಗ ವಾಪಸಾಗಿ: ಪಾಕ್‌ ಜೊತೆಗಿನ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ ಒಂದು ದಿನದ ನಂತರ, ಪಾಕಿಸ್ತಾನಕ್ಕೆ ಭೇಟಿ ನೀಡುವ ತನ್ನ ನಾಗರಿಕರು "ಸಾಧ್ಯವಾದಷ್ಟು ಬೇಗ" ಮನೆಗೆ ಮರಳಬೇಕೆಂದು ಭಾರತ ತಿಳಿಸಿದೆ. ಭಾರತೀಯ ನಾಗರಿಕರು ಪಾಕಿಸ್ತಾನಕ್ಕೆ ಪ್ರಯಾಣಿಸುವುದನ್ನು ತಪ್ಪಿಸುವಂತೆಯೂ ವಿದೇಶಾಂಗ ಇಲಾಖೆ ತಿಳಿಸಿದೆ. ಪಾಕಿಸ್ತಾನಿ ನಾಗರಿಕರಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಸಚಿವಾಲಯ ಘೋಷಿಸಿತು. ಇದಕ್ಕೂ ಮೊದಲು, ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ ಚೌಕಟ್ಟಿನ ಅಡಿಯಲ್ಲಿ ಪಾಕಿಸ್ತಾನಿ ನಾಗರಿಕರಿಗೆ ವೀಸಾಗಳನ್ನು ಸ್ಥಗಿತಗೊಳಿಸಿತ್ತು.ಪಾಕಿಸ್ತಾನವು ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸುವುದು ಮತ್ತು ಭೂ ಮಾರ್ಗಗಳು ಮತ್ತು ವಾಯುಪ್ರದೇಶವನ್ನು ಮುಚ್ಚುವುದು ಸೇರಿದಂತೆ ತನ್ನದೇ ಆದ ಕ್ರಮಗಳೊಂದಿಗೆ ಪ್ರತೀಕಾರ ತೀರಿಸಿಕೊಂಡಿದೆ.

ಒಂದು ವಾರದಲ್ಲಿ ಭಾರತ ದೊಡ್ಡ ದಾಳಿ ನಡೆಸಬಹುದು; ಪಾಕ್‌ಗೆ ಮಾಜಿ ಹೈಕಮಿಷನರ್ ಅಬ್ದುಲ್ ಬಸಿತ್ ಎಚ್ಚರಿಕೆ!